ಅಂಕೋಲಾ: ಪುರಸಭೆ ವ್ಯಾಪ್ತಿಯ ಅಜ್ಜಿಕಟ್ಟಾದಲ್ಲಿ ಸ್ಟೀಲ್ ಪೈಪ್ ಹಾಗೂ ಶೀಟ್ಗಳನ್ನು ಅಳವಡಿಸಿ ಪ್ರಯಾಣಿಕರ ತಂಗುಧಾಣ ವನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಆದರೆ ಇದರ ಮೇಲ್ಭಾಗದಲ್ಲಿ “ಅಜ್ಜಿಕಟ್ಟಾ ಬಸ್ ನಿಲ್ದಾಣ” ಎಂದು ಬೋರ್ಡ್ ಹಾಕಿರುವುದು ಈಗ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಸಾಮಾನ್ಯವಾಗಿ ತಂಗುಧಾಣ (shelter) ಅಂದರೆ ಬಸ್ ಬರುವವರೆಗೆ ಪ್ರಯಾಣಿಕರು ನಿಲ್ಲಲು ಸೌಲಭ್ಯ. ಆದರೆ ಬಸ್ ನಿಲ್ದಾಣ (bus stand) ಅಂದರೆ ಬಸ್ಗಳ ನಿಲುಗಡೆ, ಪಾರ್ಕಿಂಗ್ ಮತ್ತು ನಿರ್ವಹಣೆಗೆ ಮೀಸಲಾದ ಸ್ಥಳ. ಇವೆರಡೂ ವಿಭಿನ್ನ ಅರ್ಥ ಹೊಂದಿರುವುದರಿಂದ ತಂಗುಧಾಣ ವನ್ನೇ “ಬಸ್ ನಿಲ್ದಾಣ” ಎಂದು ಬರೆದು ಹಾಕಿರುವುದು ಸ್ಥಳೀಯರಲ್ಲಿ ಪ್ರಶ್ನೆ ಎಬ್ಬಿಸಿದೆ.

ಈ ಪದ ಬಳಕೆ ತಪ್ಪು ಯಾರು ಮಾಡಿದ್ದಾರೆ? ಪುರಸಭೆಯ ನಿರ್ಧಾರವೋ, ಅಧಿಕಾರಿಗಳ ಸೂಚನೆಯೋ ಅಥವಾ ಕಂಟ್ರಾಕ್ಟರ್ನ ನಿರ್ಲಕ್ಷ್ಯವೋ. ಅಥವಾ ಬರೆದು ಹಾಕಿದವರ ಕನ್ನಡ ಜ್ಞಾನವೋ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಬೋರ್ಡ್ನಿಂದಾಗಿ ಅಜ್ಜಿಕಟ್ಟಾ ದಲ್ಲಿ “ಬಸ್ ನಿಲ್ದಾಣ – ತಂಗುದಾಣ ಗೊಂದಲ” ಈಗ ಮಾತುಕತೆಗೆ ಕಾರಣವಾಗಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ್

