ಅಂಕೋಲಾ : ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ದಂಧೆ ; ‘ಮಾಮೂಲಿ’ ಆಸೆಗೆ ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು..!?

News Desk
2 Min Read

ಅಂಕೋಲಾ : ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮರಳು ಸಾಗಾಟ ನಡೆಯುತ್ತಿದ್ದರೂ, ಗಣಿ ಇಲಾಖೆ ಅಧಿಕಾರಿಗಳು, ಪೊಲೀಸರು , ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಈ ಮೇಲಿನ ಇಲಾಖೆಯ ಅಧಿಕಾರಿಗಳ ಮೌನ ಕಂಡಾಗ ಪರೋಕ್ಷವಾಗಿ ಇವರು ಅಕ್ರಮ ಮುರಳುಗಾರಿಕೆಯನ್ನು ಬೆಂಬಲಿಸುವಂತೆ ಕಾಣುತ್ತಿದೆ. ಆದ್ದರಿಂದ ಮರಳು ಮಾಫಿಯಾದವರು ನೀಡುವ ‘ಮಾಮೂಲಿ’ ಇವರನ್ನೆಲ್ಲ ಮೌನವಾಗಿರುವಂತೆ ಮಾಡಿತ್ತಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಅಂಕೋಲಾದ ವಾಸರ ಕುದ್ರಿಗೆ, ಡೊಂಗ್ರಿ, ಸಗಡಗೇರಿ , ಶಿರೂರು ಮುಂತಾದ ಭಾಗಗಳಲ್ಲಿ ನದಿ ತೀರದ ಮರಳನ್ನು ಪ್ರತಿನಿತ್ಯ ಸಂಜೆ 5 ಗಂಟೆಯಿಂದ ಬೆಳಗಿನ ಜಾವ 8ಗಂಟೆಗೆ ಯಾಂತ್ರಿಕೃತ ದೋಣಿಯ ಮೂಲಕ ಕಾರ್ಮಿಕರನ್ನು ಬಳಸಿಕೊಂಡು ಮರಳು ಲೂಟಿ ಮಾಡಲಾಗುತ್ತಿದೆ.ಇಲ್ಲಿ ಹಗಲೂ ಮತ್ತು ರಾತ್ರಿ ಅಕ್ರಮವಾಗಿ ನದಿಯ ಗರ್ಭ ಸೀಳಿ ಅವೈಜ್ಞಾನಿಕವಾಗಿ ಮರಳನ್ನು ತೆಗೆಯಲಾಗುತ್ತಿದೆ. ಈ ಮರಳಿಗೆ ಉತ್ತಮ ಬೆಲೆ ಇದ್ದು ದಿನನಿತ್ಯ 25 ರಿಂದ 30 ಲಾರಿ ಮರಳನ್ನು ತಾಲೂಕು ಮತ್ತು ಬೇರೆ ತಾಲೂಕುಗಳಿಗೂ ಸಾಗಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಮರಳು ಮಾಫಿಯಾಕ್ಕೆ ಮೌನವಾದರಾ?

ಕಳೆದ 2024ರ ಏಪ್ರಿಲ್ ತಿಂಗಳಲ್ಲಿ ಸರ್ಕಾರದ ಪರವಾನಿಗೆಯನ್ನು ಪಡೆದು ನಡೆಸುತ್ತಿದ್ದ ಮರಳುಗಾರಿಕೆ ಬಂದಾಗಿತ್ತು… ಸರ್ಕಾರದ ಆದೇಶಕ್ಕೆ ತಲೆಕೆಡಿಸಿಕೊಳ್ಳದ ಮರಳು ಮಾಫಿಯಾ ಕಳ್ಳರು ಪ್ರಾಕೃತಿಕ ಸಂಪತ್ತನ್ನು ಅಪೋಶನ್ ತೆಗೆದುಕೊಳ್ಳುವಂತೆ ಲೂಟಿ ಮುಂದುವರಿಸಿದ್ದಾರೆ. ದಿನನಿತ್ಯ ರಾತ್ರಿ ಹಗಲನ್ನದೆ 407ಗಾಡಿಯಲ್ಲಿ ಹಾಗೂ 35 ಅಧಿಕ ಲಾರಿಗಳಲ್ಲಿ ಅಧಿಕ ಭಾರದಲ್ಲಿ ಮರಳು ತುಂಬಿದ ಲಾರಿ ಓಡಾಡುತ್ತಿದ್ದು.. ಅಂಕೋಲಾ ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ಕಟ್ಟಡ ಕಟ್ಟಲು ದಾಸ್ತಾನು ಮಾಡಿರುವ ಲೋಡ್ ಗಟ್ಟಲೆ ಮರಳೆ ಇದಕ್ಕೆ ಸಾಕ್ಷಿಯಾಗಿದೆ, ನದಿ ತೀರದಲ್ಲಿ ಮರಳುಗಾರಿಕೆಯಿಂದ ಪ್ರಾಕೃತಿಕ ನಾಶವಾಗುವುದಲ್ಲದೆ.. ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆಯು ಕೂಡ ಹಾನಿಗಿಡಾಗುತ್ತಿದೆ.

ಆದರೂ ಇಷ್ಟೊಂದು ಪ್ರಮಾಣದಲ್ಲಿ ಇಲ್ಲಿ ಅಕ್ರಮ ಮರಳುಗಾರಿಕೆ , ಮರಳು ಸಾಗಾಟ ನಡೆಯುತ್ತಿದ್ದರು ಗಣಿ ಇಲಾಖೆ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ,ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೌನವಾಗಿದ್ದಾರೆ.. ಇಲಾಖೆಯ ಅಧಿಕಾರಿಗಳ ಮೌನ ಕಂಡಾಗ ಪರೋಕ್ಷ ವಾಗಿ ಇವರು ಅಕ್ರಮ ಮರುಳುಗಾರಿಕೆ ಚಟುವಟಿಕೆಯನ್ನು ಬೆಂಬಲಿಸುವಂತೆ ಕಾಣುತ್ತಿದೆ. ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಸಾರ್ವಜನಿಕ ರಕ್ಷಣೆ ಮಾಡುವ ಜವಾಬ್ದಾರಿ ಸ್ಥಾನದಲ್ಲಿರುವ ಸಂಬಂಧ ಪಟ್ಟ ಇಲಾಖೆಯ ಒಂದರ ಅಧಿಕಾರಿಗಳು ಒಂದು ಲಾರಿಗೆ ಒಂದು ತಿಂಗಳಿಗೆ 20 ಸಾವಿರದಿಂದ 30 ಸಾವಿರದವರೆಗೆ ಅಕ್ರಮ ಮರಳು ಕಳ್ಳರಿಂದ ಹಪ್ತ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರಿಂದ ಮರಳು ಮಾಫಿಯಾದರೂ ನೀಡುವ ” ಮಾಮೂಲಿ” ಇವರನ್ನೆಲ್ಲ ಮೌನವಾಗಿರುವಂತೆ ಮಾಡಿತೇ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಅಕ್ರಮ ಮರಳು ಗಾರಿಕೆಗೆ ಕಡಿವಾಣ ಹಾಕಿ.!

ಈಗಾಗಲೇ ಪ್ರಕೃತಿ ದೇವಿ ಮುನಿಸಿಕೊಂಡು ಶಿರೂರು ಗುಡ್ಡ ಕುಸಿತ ಸಂಭವಿಸಿ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಪ್ರಾಣ ಹಾನಿಗಳು ಸಂಭವಿಸಿದೆ. ಮತ್ತದೇ ನದಿ ತೀರದ ಮರಳನ್ನು ಬಗೆಯುದರಿಂದ ಪ್ರಕೃತಿ ವಿನಾಶಕ್ಕೆ ಕಾರಣವಾಗಬಹುದು. ಅಂಕೋಲ ತಾಲೂಕಿನ ವಾಸರ ಕುದ್ರಿಗೆ , ಡೊಂಗ್ರಿ, ಸಗಡಗೇರಿ, ಶಿರೂರು ಹಾಗೂ ಮುಂತಾದ ಭಾಗಗಳಲ್ಲಿ ಪ್ರಕೃತಿದತ್ತವಾಗಿರುವ ಸಂಪತ್ತನ್ನು ಅವೈಜ್ಞಾನಿಕವಾಗಿ ಹಾಗೂ ಅಕ್ರಮವಾಗಿ ತೆಗೆದು ಲೂಟಿ ಮಾಡುತ್ತಿರುವುದು ಕಂಡುಬರುತ್ತಿದೆ.

ಆದರೂ ಇದಕ್ಕೆ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅದರಿಂದ ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ಗಮನ ಹರಿಸಿ ಅಕ್ರಮ ದಂದೆಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಆಂಬೊಣವಾಗಿದೆ.

ವರದಿ: ಕಿರಣ ಚಂದ್ರಹಾಸ ಗಾಂವಕರ

Share This Article
Leave a Comment