
ಅಂಕೋಲಾ, ಜೂನ್ 14: ಗುಡಿಗಾರ ಗಲ್ಲಿಯ ಕಸದ ಸಮಸ್ಯೆಯನ್ನು ವಿಕಾಸ ವಾಹಿನಿಯಿಂದ ಬೆಳಿಗ್ಗೆ ಚಿತ್ರೀಕರಿಸಿ ಸಾರ್ವಜನಿಕಮಾಡಿದ ನಂತರ, ಅಂಕೋಲಾ ಪುರಸಭೆ ಮುಖ್ಯಾಧಿಕಾರಿಗಳಿಂದ ತ್ವರಿತ ಕ್ರಮ ಕೈಗೊಳ್ಳಲಾಗಿದೆ.
ಸುಮಾರು 10 ಗಂಟೆಗೆ ಪುರಸಭೆಯ ಸ್ವಚ್ಛತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ, ರಸ್ತೆಯ ಮೇಲೆ ಬಿದ್ದಿದ್ದ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ಪರಿಸ್ಥಿತಿಗೆ ನಿರ್ಲಕ್ಷ್ಯ ಕಾಣಿಸುವ ಸ್ಥಿತಿಯಲ್ಲಿದ್ದರೂ ಪ್ರಕರಣದಲ್ಲಿ ಅಧಿಕಾರಿಗಳು ಕೇವಲ ಸ್ವಚ್ಛತೆ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಕಸ ಸುರಿಯುವ ಘಟನೆಗಳು ಮರುಕಳಿಸದಂತೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಸಿಸಿಟಿವಿ ಅಳವಡಿಕೆ:
ಕಸ ಸುರಿಯುವವರನ್ನು ಗುರುತಿಸಲು ಗುಡಿಗಾರ ಗಲ್ಲಿಯ ಘಟನೆಯ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ. ಈ ಮೂಲಕ ಸಾರ್ವಜನಿಕ ರಸ್ತೆ ಮೇಲೆ ತ್ಯಾಜ್ಯ ಸುರಿಸುವಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನುಬದ್ಧ ಪ್ರಕ್ರಿಯೆಯ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಧಿಕಾರಿ ಎಚ್. ಅಕ್ಷತಾ ಅವರು ತಿಳಿಸಿದ್ದಾರೆ..

ಮಣ್ಣು ಸುರಿದವರ ವಿರುದ್ಧ ನೋಟಿಸ್:
ರಸ್ತೆಯ ತಿರುವಿನ ಬದಿಯಲ್ಲಿ ಖಾಸಗಿಯಾಗಿ ಸುರಿಸಲಾದ ಮಣ್ಣಿನ ವಿಚಾರವನ್ನೂ ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಸಂಬಂಧಪಟ್ಟವರನ್ನು ಗುರುತಿಸಿ ಅವರಿಗೆ ಅಧಿಕೃತ ನೋಟಿಸ್ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಅವರು ಬಿದ್ದಿರುವ ಮಣ್ಣನ್ನು ಕೂಡಲೇ ತೆಗೆಯಬೇಕು ಎಂಬ ಆದೇಶ ನೀಡುತ್ತೇನೆ.ಇದರಿಂದಾಗಿ ಸಾರ್ವಜನಿಕ ರಸ್ತೆಯ ಗಟಾರದ ಮೇಲೆ ಮಣ್ಣು ಜಮೆಯಾಗಿರುವ ಸಮಸ್ಯೆ ಕೂಡ ಶೀಘ್ರದಲ್ಲೇ ಪರಿಹಾರಗೊಳ್ಳಲಿದೆ.
ಸ್ಥಳೀಯರು ಈ ಕ್ರಮಗಳನ್ನು ಮೆಚ್ಚುಗೆಸುತ್ತಿದ್ದು, ಪುರಸಭೆಯ ಚುರುಕಾದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. “ಸುದ್ದಿ ಪ್ರಕಟವಾದ ಒಂದೇ ಗಂಟೆಯೊಳಗೆ ಸ್ವಚ್ಛತೆ ನಡೆಯುವುದು ಅಪರೂಪ. ಅಧಿಕಾರಿಗಳ ಸ್ಪಂದನೆ ಸಮಾಜಮುಖಿ ಆಡಳಿತದ ನಿಜ ನುಡಿದಂತಾಗಿದೆ,” ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ..
ವರದಿ: ಕಿರಣ ಚಂದ್ರಹಾಸ ಗಾಂವಕರ

