ಅಂಕೋಲಾ ಪುರಸಭೆ ವ್ಯಾಪ್ತಿಯ ಗುಡಿಗಾರ್ ಗಲ್ಲಿ ರಸ್ತೆ ಒಳಗೆ ಕಸದ ರಾಶಿ : ಮಾರಕ ರೋಗಗಳಿಗೆ ಪುಕ್ಸಟ್ಟೆಯಾಗಿ ಆಹ್ವಾನ. ಸಿಸಿಟಿವಿ ಅಳವಡಿಸಿ ಕೂಡಲೇ ಕ್ರಮ ಜರುಗಿಸಿ..

News Desk
2 Min Read

ಅಂಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಗುಡಿಗಾರಗಲ್ಲಿಯ ರಸ್ತೆ ಒಂದರಲ್ಲಿ ಹೇರಳವಾಗಿ ತ್ಯಾಜ್ಯ ಕಸಗಳು ಬಿದ್ದಿದ್ದು ವಾತಾವರಣ ದುರ್ನಾಥ ಬಿರುತ್ತಿದೆ. ಸದರಿ ಗಲ್ಲಿಯೊಳಗೆ ಪುರಸಭೆಯ ಕಸವನ್ನು ಸಂಗ್ರಹಣೆ ಮಾಡಲು ಪ್ರತಿನಿತ್ಯ ಪುರಸಭೆಯ ಗಾಡಿ ಸದರಿ ಸ್ಥಳದಿಂದ ಹೊರಡುತ್ತಿದ್ಯೋ ಅಥವಾ ಇಲ್ಲವೋ ಎಂಬುದು ಪ್ರಶ್ನೆಯಾಗಿದೆ. ಒಂದು ವೇಳೆ ಪುರಸಭೆಯ ಕಸದ ಗಾಡಿ ಬರದೇ ಇರುವ ಕಾರಣದಿಂದಾಗಿ ಜನರು ಗುಡಿಗಾರ ಗಲ್ಲಿಯ ರಸ್ತೆಯ ಮೇಲೆ ಬೇಕಾಬಿಟ್ಟಿ ಕಸವನ್ನು ತಂದು ಸುರಿಯುತ್ತಿದ್ದಾರೋ ಏನೋ ಎನ್ನುವಂತಾಗಿದೆ..

ಈ ಕಸವನ್ನು ಅಲ್ಲಿನ ಸುತ್ತಮುತ್ತಲಿನ ಜನರೇ ತಂದು ಸುರಿಯುತ್ತಿದ್ದಾರೆ ಎಂದು ಸ್ಥಳಿಯ ಅಂಗಡಿ ಮಾಲೀಕ ರೊಬ್ಬರು ವಿಕಾಸ ವಾಹಿನಿಗೆ ಮಾಹಿತಿ ನೀಡಿದ್ದಾರೆ. ಈ ತ್ಯಾಜ್ಯ ಕಸಗಳಲ್ಲ ರಸ್ತೆಯ ಎಲ್ಲಾ ಕಡೆಯಲ್ಲೂ ಚೆಲ್ಲಾಪಿಲ್ಲಿ ಆಗಿ ಬಿದ್ದಿದ್ದು . ಸದರಿ ವಾತಾವರಣ ಮಾರಕ ರೋಗ ಹರಡಲು ಪುಕ್ಸಟ್ಟೆ ಯಾಗಿ ಆಹ್ವಾನ ನೀಡುತ್ತಿದೆ. ಆ ಪ್ರದೇಶದಲ್ಲಿ ಅನಾರೋಗ್ಯಕರ ಪರಿಸ್ಥಿತಿಯೂ ಉಂಟಾಗಿದೆ.

ಪುರಸಭೆಯ ಪ್ರಮುಖ ಪ್ರದೇಶದಲ್ಲಿ ಈ ರೀತಿಯಾಗಿ ಕಸವನ್ನು ಸ್ವಚ್ಛತೆ ಮಾಡದೇ ಇದ್ದರೆ ಹೇಗೆ ಎಂದು ಜನರು ಪುರಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಡಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರು ಗುಡಿಗಾರ ಗಲ್ಲಿಯ ಆ ಒಂದು ರಸ್ತೆಯನ್ನು ದಾಟಲು ಮೂಗಿ ಮುಚ್ಚಿಕೊಂಡು ಹೋಗುತ್ತಿರುವ ವಾತಾವರಣ ಸೃಷ್ಟಿಯಾಗಿದೆ.

ಅಷ್ಟೇ ಅಲ್ಲದೆ ಗುಡಿಗಾರ ಗಲ್ಲಿಯ ರಸ್ತೆಯ ತಿರುವಿನ ಪ್ರಾರಂಭದ ಎಡ ಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಖಾಸಗಿ ಅವರು ತಮಗೆ ಮನಸ್ಸೋ ಇಚ್ಛೆಯ ರೀತಿಯಲ್ಲಿ ಮಣ್ಣನ್ನು ತಂದು ಸುರಿದಿದ್ದಾರೆ.

ಅಂಕೋಲಾ ಪುರಸಭೆಯ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಕಸವನ್ನು ವಿಲೇವಾರಿ ಮಾಡಿಸಬೇಕು. ಕಸವನ್ನು ಸುರಿಯುವ ಕಿಡಿಗೇಡಿಗಳನ್ನು ಗುರುತಿಸಲು ಈ ರಸ್ತೆಯ ಭಾಗದಲ್ಲಿ ಸಿಸಿ ಟಿವಿಯನ್ನು ಅಳವಡಿಸುವದು ಅನಿವಾರ್ಯವಾಗಿದೆ .

ಇಲ್ಲಿ ಸಿಸಿ ಟಿವಿ ಅಳವಡಿಸದೆ ಇದ್ದರೆ ಈ ಕಸ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಸಾರ್ವಜನಿಕ ರಸ್ತೆಯ ಮೇಲೆ ಕಸ ಚೆಲುವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಅಲ್ಲಿ ಸಮೀಪದ ರಸ್ತೆಯ ಗಟಾರದ ಮೇಲ್ಮೈ ಭಾಗದಲ್ಲಿ ಸುರಿದಿರುವ ಮಣ್ಣನ್ನು ಕೊಡಲೇ ತೆರುಗೊಳಿಸುವಂತೆ ಸಂಬಂಧಿಸಿ ದವರಿಗೆ ಸೂಕ್ತ ನೋಟಿಸ್ ಜಾರಿ ಮಾಡಿ ಕೂಡಲೇ ಕಾರ್ಯಪ್ರವರ್ತರಾಗಬೇಕು ಎಂಬುದು ಸಾರ್ವಜನಿಕರು ಆಗ್ರಹವಾಗಿದೆ..

Share This Article
Leave a Comment