
ವರದಿ: ಕಿರಣ ಗಾಂವಕರ
ಪೊಲೀಸರು ತಮ್ಮ ಖಾಸಗಿ ವಾಹನಗಳಿಗೆ “ಪೋಲಿಸ್” ಎಂದು ಬರೆಸಿಕೊಂಡು ನಾಮಫಲಕದ ದುರುಪಯೋಗವಾಗುತ್ತಿರುವ ಕುರಿತು ಮಾನ್ಯ ವಿಧಾನಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿಎನ್ ಶ್ರವಣಬೆಳಗೊಳ ರವರು ಕರ್ನಾಟಕ ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 561 ರಲ್ಲಿ ಈ ಕೆಳಕಂಡ ಪ್ರಶ್ನೆಗೆ ಉತ್ತರವನ್ನು ಸರ್ಕಾರದಿಂದ ಕೋರಿದ್ದಾರೆ.
ಅ) ರಾಜ್ಯದ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೋಲಿಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ?
ಆ) ಹಾಗಿದ್ದಲ್ಲಿ. ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಕೆಲ ಪೊಲೀಸ್ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಉಲ್ಲಂಘನೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಇವರ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು?
ಸದರಿ ಪ್ರಶ್ನೆಗೆ ಕರ್ನಾಟಕದ ಗೃಹ ಮಂತ್ರಿಗಳು ನೀಡಿದ ಉತ್ತರವು ಈ ಕೆಳಗಿನಂತಿದೆ.

ಅ) ರಾಜ್ಯದ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ.
ಆ ) ಸರ್ಕಾರದ ಸುತ್ತೋಲೆ ಸಂಖ್ಯೆ :ಟಿಡಿ 126 ಟಿಡಿಓ 2022. ದಿನಾಂಕ 19-05-2022 ರ ಅನ್ವಯ ಇಂಥ ಉಲ್ಲಂಘನೆ ಮಾಡಿರುವ ಪೊಲೀಸ ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿರುತ್ತದೆ… ಎಂದು ಡಾ. ಜಿ ಪರಮೇಶ್ವರ್ ಗೃಹ ಸಚಿವರು ದಿನಾಂಕ 11-03-2025 ರಂದು ಕರ್ನಾಟಕ ವಿಧಾನಸಭೆಯಲ್ಲಿ ಶ್ರೀ ಬಾಲಕೃಷ್ಣ ಸಿಎನ್ ಸದಸ್ಯರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಈ ಮೂಲಕ ಸರ್ಕಾರದ ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರವಲ್ಲದೇ ಇಡೀ ಕುಟುಂಬದ ಸದಸ್ಯರು ಸಹ ತಾವು ಸಹ ಅಧಿಕಾರಿಗಳಾಗಿರುವಂತೆ ತಮ್ಮ ಪರಿವಾರದವರು ವಾಹನಗಳ ಮೇಲೆ ಪೋಲಿಸ್ ಎಂಬ ಸ್ಟಿಕ್ಕರ್ ಅಂಟಿಸಿ ಕೊಂಡು ಓಡಾಡುವದು ಮತ್ತು ಅವರ ಹಳೇಯ ವಾಹನ ಖರೀದಿ ಕೊಂಡ ಬೇರೆಯವರು ಆ ಹಳೇಯ ಸ್ಟಿಕ್ಕರ್ ತೆಗೆಯದೇ ಹಾಗೆಯೇ ಓಡಾಡುವುದಕ್ಕೆ ಕಡಿವಾಣ ಬಿದ್ದಂತಾಗಿದೆ.
….

