
ವರದಿ: ಕಿರಣ ಗಾಂವಕರ
ಅಂಕೋಲಾ : ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರಿಗೆ ಹಾಕಿದ ಬ್ಯಾನರ್ ಅಂಕೋಲಾದಲ್ಲಿ ಸಾಕಷ್ಟು ಚರ್ಚೆ ಉಂಟು ಮಾಡಿದೆ. ಕನ್ನಡದಲ್ಲಿ ಸ್ಥಳೀಯ ಆಡು ಭಾಷೆಯಲ್ಲಿ ಬರೆದಿರುವ ಈ ಬ್ಯಾನರ ಜೈಹಿಂದ್ ಹೈ ಸ್ಕೂಲ್ ಆಟದ ಮೈದಾನದ ಕಾಂಪೌಂಡ್ ಗೋಡೆಗೆ ಹಾಗೂ ಅಂಕೋಲಾದ ಅರಣ್ಯ ಇಲಾಖೆಯ ಎದುರುಗಡೆ ಬೋರ್ಡಿಗೆ ಅಳವಡಿಸಲಾಗಿದೆ..
ಈ ಎರಡು ಜಾಗೆಯಲ್ಲಿ ಅತಿ ಹೆಚ್ಚು ಕಸ ಶೇಖರಣೆಯಾಗುತ್ತಿದ್ದು, ಅಂತಹ ಸ್ಥಳವನ್ನು ಗುರುತಿಸಿ ಬ್ಯಾನರನ್ನು ಹಾಕಲಾಗಿದೆ. ಈ ಬ್ಯಾನರನ್ನು ನೋಡಿದ ಯಾವನೇ ಅಕ್ಷರಸ್ಥನು ಒಂದು ಸಲ ಕಸ ಹಾಕಲೋ ಬೇಡವೋ ಎಂದು ಹಿಂದೆ ಮುಂದೆ ನೋಡುವಂತೆ ಮಾಡಿದೆ. ಬಹುತೇಕರು ಇಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿದ್ದರೆ. ಕೆಲವು ಅನಕ್ಷರಸ್ಥರು ಮಾತ್ರ ಇಲ್ಲಿ ಓದಲು ಬಾರದೇ ಇರುವ ಕಾರಣ ಕಸ ಹಾಕುವುದನ್ನು ಮುಂದುವರಿಸಿದ್ದಾರೆ..
ಈ ಬ್ಯಾನರನ್ನು ಯಾರು ಬರೆದಿದ್ದಾರೆ ಎಂದು ಗೊತ್ತಿಲ್ಲ. ಆದರೆ ಬ್ಯಾನರ್ ಬರೆದ ಸಂದೇಶದ ಬಗ್ಗೆ ಚರ್ಚೆ ಉಂಟಾಗಿದೆ. ಬ್ಯಾನರ್ ನಲ್ಲಿ ” ಹೆಣ ಸುಡಲು ಇನ್ನು ಕಸ ಬೇಕು ಹಾಗಾಗಿ ಕಸ ತಂದು ಹಾಕು. ಕಸದೊಂದಿಗೆ ನಿನ್ನ ಪಿಂಡ ಪ್ರಧಾನ ಇಲ್ಲೇ ಮಾಡುವ. ಭಾವಪೂರ್ಣ ಶ್ರದ್ಧಾಂಜಲಿ. ಇಲ್ಲಿ ಕಸ ಬಿಸಾಡುವ ದಿವ್ಯ ಆತ್ಮಗಳಿಗೆ ಅರ್ಪಣೆ ” ಮಾಡಲಾಗಿದೆ.
ಪುರಸಭೆ ಕಸದ ಗಾಡಿಗೆ ಬೀದಿಬದಿ ಗೂಡಂಗಡಿಕಾರರು ಕಸವನ್ನು ಪ್ರತಿನಿತ್ಯ ನೀಡಿದರೆ ಸಮಸ್ಯೆಗೆ ಪರಿಹಾರ ಸಾಧ್ಯವಿದೆ – ಮಂಜುನಾಥ್ ನಾಯ್ಕ.

ಜೈ ಹಿಂದ್ ಹೈ ಸ್ಕೂಲ್ ಮೈದಾನದ ಒಳಗೆ ಬಿಯರ್ ಬಾಟಲ್ ಗಳು, ಕಟ್ ಮಾಡಿದ ಲಿಂಬು, ಬಳೆ ಅಂಗಡಿಯ ಕಾಲಿ ಬಾಕ್ಸಗಳು, ಬಳೆ ಚುರುಗಳು, ಫಾಸ್ಟ್ ಫುಡ್ ಸೆಂಟರ್ ನಲ್ಲಿ ಬಳಸಿದ ಒಡೆದ ಮೊಟ್ಟೆ, ಅನ್ನದ ಅಗಳು, ಹೀಗೆ ನಾನಾ ತರದ ಕಸಗಳನ್ನು ಮೈದಾನದ ಒಳಗೆ ಕಸ್ ಹಾಕುತ್ತಿದ್ದು .
ದಿನಂಪ್ರತಿ ಮೈದಾನಕ್ಕೆ ಆಟ ಆಡಲು ಬರುವ ಆಟಗಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಕ್ರೀಡಾ ಪ್ರೇಮಿ ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ನಾಯ್ಕ್ ರವರು ಅನೇಕ ಬಾರಿ ತಮ್ಮ ಸೇವಾ ಮನೋಭಾವನೆಯಿಂದ ತಾನು ಹಾಗೂ ತನ್ನ ಗೆಳೆಯರನ್ನು ಕರೆದುಕೊಂಡು ಮೈದಾನದೊಳಗೆ ಬೇಕಾಬಿಟ್ಟಿ ಕಸ ಚೆಲ್ಲಿದನ್ನು ಸಾಕಷ್ಟು ಬಾರಿ ಸ್ವಚ್ಛತೆ ಮಾಡಿಸಿದ್ದಾರೆ..
ಆದರೂ ಈ ಕಸ ಮಾತ್ರ ದಿನಂಪ್ರತಿ ಮೈದಾನದೊಳಗೆ ಸುರಿಯುವುದು ಮಾತ್ರ ಇನ್ನು ನಿಂತಿಲ್ಲ. ಬೇಕಾಬಿಟ್ಟಿ ಆಟದ ಮೈದಾನದ ಒಳಗಡೆ ಹಾಗೂ ಮೈದಾನದ ಕಾಂಪೌಂಡಿನ ಹೊರಗೆ ಈ ಮೇಲಿನ ಬ್ಯಾನರನ್ನು ಅಳವಡಿಸಿರುವ ಜಾಗದಲ್ಲಿ ಕಸ ಚೆಲ್ಲುವುದ ನ್ನು ಮುಂದುವರಿಸುತ್ತಿದ್ದು . ಸಾಮಾಜಿಕ ಪರಿಜ್ಞಾನವಿಲ್ಲದ ಜನರ ಮನಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು..
ಇಲ್ಲಿನ ಕೆಲವು ಗೂಡಂಗಡಿಕಾರರು ಪುರಸಭೆ ವಾಹನಕ್ಕೆ ತ್ಯಾಜ್ಯ ಹಸಿ ಕಸ- ವನ್ನು ದಿನಂಪ್ರತಿ ನೀಡುತ್ತಿದ್ದಾರೆ ಅಥವಾ ಇಲ್ಲ ಎಂದು ಪುರಸಭೆಯ ಅಧಿಕಾರಿ ವರ್ಗ ಖಚಿತಪಡಿಸಿಕೊಳ್ಳಬೇಕು. ಇಲ್ಲಿನ ಬೀದಿಬದಿ ಗುಡಂಗಡಿ ಕಾರರಿಗೆ ಕಸದ ನಿರ್ವಹಣೆಯ ಬಗ್ಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಂಜುನಾಥ್ ನಾಯ್ಕ ರು ಪುರಸಭೆಗೆ ಆಗ್ರಹಿಸಿದ್ದಾರೆ.

