ಬೇಲೆಕೇರಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ :13-02-2025 ರಂದು ಪಂಚಾಯತದ ಮುಂದೆ ಸಾರ್ವಜನಿಕರು ಪ್ರತಿಭಟನೆಗೆ ಸಿದ್ಧತೆ.

News Desk
1 Min Read

ಅಂಕೋಲಾ: ತಾಲೂಕಿನ ಬೆಲೆಕೇರಿ ಪಂಚಾಯತ ವ್ಯಾಪ್ತಿಯಲ್ಲಿ ನೀರಿನ ಅಭಾವ ಅವಧಿಗೂ ಮುನ್ನವೇ ಪ್ರಾರಂಭವಾಗಿದ್ದು. ಸ್ಥಳೀಯ ಗ್ರಾಮ ಪಂಚಾಯತದ ಸಾರ್ವಜನಿಕರು ದಿನಾಂಕ 24-01-2025 ರಂದು ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಬೆಲೇಕೆರಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ನೀರಿನ ಸಮಸ್ಯೆ ಉಂಟಾಗುತ್ತಿದ್ದು . ಇದುವರೆಗೂ ನೀರಿನ ಸಮಸ್ಯೆ ಬಗೆಹರಿಯದೇ ಇರುವದು ಹಾಗೂ ಅನೇಕ ವರ್ಷಗಳಿಂದಲೂ ಈ ನೀರಿನ ಸಮಸ್ಯೆ ಬಗ್ಗೆ ಗ್ರಾಮ ಸಭೆಗಳು ವಾರ್ಡ್ ಸಭೆಗಳು ನಡೆದಿದ್ದು. ಹಲವಾರು ಠರಾವುಗಳನ್ನು ಪಾಸ್ ಮಾಡಿದರು ಸಹ ಈ ನೀರಿನ ಸಮಸ್ಯೆ ಮುಕ್ತಿ ಕಾಣದೇ ಇರುವುದು.

ಜೊತೆಯಲ್ಲಿ ಗ್ರಾಮ ಪಂಚಾಯಿತಿಯವರು
ಬೆಲೇಕೆರಿಯಲ್ಲಿರುವ ರೇಡಾರ್ ಗೆ ಸಂಪರ್ಕ ಕೊಡುವಾಗ ಯಾವುದೇ ಗ್ರಾಮ ಸಭೆ ಇಲ್ಲದೆ ತಮ್ಮ ಮನಸ್ಸಿಗೆ ಬಂದಂತೆ ಈ ಹಿಂದೆ ನೀರಿನ ಸಂಪರ್ಕ ಕಲ್ಪಿಸಿ ಕೊಟ್ಟಿರುವುದರಿಂದ ತಮ್ಮೂರಿಗೆ ನೀರು ಇಲ್ಲದ ಹಾಗೆ ಮಾಡಿದ್ದು . ಈ ನೀರಿನ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳುತ್ತವೆ ಎಂದು ಈ ಹಿಂದಿನ ಮನವಿಯಲ್ಲಿ ತಿಳಿಸಲಾಗಿತ್ತು.

ಆದರೆ ಸಾರ್ವಜನಿಕ ಮನವಿಗೆ ಬೆಲೆಕೇರಿ ಪಂಚಾಯತ್ ದವರು ಸ್ಪಂದಿಸದೆ ಇರುವ ಕಾರಣ ಬೆಲೇಕೆರೆ ಗ್ರಾಮದವರು ಒಟ್ಟಾಗಿ ನಾಳೆ ದಿನಾಂಕ 13-02-2025 ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಶ್ರೀ ದತ್ತ ಗುರು ದೇವಸ್ಥಾನದಲ್ಲಿ ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಪಂಚಾಯತ್ ಕಾರ್ಯಾಲಯ ಮುಂದೆ ಧರಣಿ ಮಾಡಲು ನಿರ್ಧರಿಸಿದ್ದಾರೆ.

ಹಾಗೂ ಈ ಧರಣಿಯನ್ನು ಮಾಡಲು ಈಗಾಗಲೇ ಸಂಬಂಧಪಟ್ಟ ಇಲಾಖೆಯಿಂದಲೂ ಪರ್ಮಿಷನನ್ನು ತೆಗೆದುಕೊಳ್ಳಲಾಗಿದೆ.ನೀರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಬೆಲೆಕೇರಿಯ ವಿವಿಧ ಜಾತಿಯ ಜನರು ಸೇರುವ ನಿರೀಕ್ಷೆ ಇದ್ದು ಪ್ರತಿಭಟನೆಯ ಕಾವು ಇನ್ನಷ್ಟು ಹೆಚ್ಚಿಸಿದೆ..

ವರದಿ: ಕಿರಣ ಚಂದ್ರಹಾಸ ಗಾಂವಕರ

Share This Article
Leave a Comment