ಹೊನ್ನಾವರ: ಬಸ್-ಬೈಕ್ ಭೀಕರ ಅಪಘಾತ, ಯುವಕ ಸಾವು, ಇನ್ನೊಬ್ಬನಿಗೆ ಗಂಭೀರ ಗಾಯ.

News Desk
1 Min Read

ಹೊನ್ನಾವರ-ಗೇರುಸೊಪ್ಪ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 30 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಭಾನುವಾರ ವಾಟೆಹಳ್ಳ ಸಮೀಪ ಭಟ್ಕಳ ಡಿಪೋಗೆ ಸೇರಿದ ಬಸ್ ಮತ್ತು ಬೈಕ್ ನಡುವೆ ಈ ದುರ್ಘಟನೆ ನಡೆದಿದೆ.ಸಾಗರದ ನಿವಾಸಿ ನಜೀಮ್ ಪಾಶ (30) ಜೋಗದಿಂದ ಹೊನ್ನಾವರದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಇದೇ ವೇಳೆ ಹೊನ್ನಾವರದಿಂದ ಶಿರಸಿ ಕಡೆಗೆ ಹೊರಟಿದ್ದ ಭಟ್ಕಳ ಡಿಪೋದ ಬಸ್ ವಾಟೆಹಳ್ಳ ಬಳಿ ನಜೀಮ್ ಪಾಶ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ನಜೀಮ್ ಪಾಶ ಅವರು ಬೈಕ್‌ನಿಂದ ರಸ್ತೆಗೆ ಅಪ್ಪಳಿಸಿ, ಸ್ಥಳದಲ್ಲೇ ಸಾವನ್ನಪ್ಪಿದರು. ಬೈಕ್‌ನ ಸಹಸವಾರ ಆಯಾನ್ ಸಾಗರ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿ ಮಾರು ದೂರ ಹೋಗಿ ಬಿದ್ದಿದ್ದು, ಅಪಘಾತ ನಡೆದ ಸ್ಥಳದಲ್ಲಿ ರಕ್ತ ಚೆಲ್ಲಿದ ಗುರುತುಗಳಿವೆ.

ಘಟನಾ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ನಜೀಮ್ ಪಾಶ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಸಾಗಿಸಲಾಗಿದೆ.

……….

Share This Article
Leave a Comment