ಅಂಕೋಲಾ: ಶಿರೂರು ನವಚೈತನ್ಯ ನಾಮಧಾರಿ ಸಂಘದ 13ನೇ ವಾರ್ಷಿಕೋತ್ಸವ ಸಂಭ್ರಮ – ಜನಸಾಮಾನ್ಯರಂತೆ ಬೆರೆತು ನಾಟಕ ವೀಕ್ಷಿಸಿದ “ಶಾಸಕ ಸತೀಶ್ ಸೈಲ್”..

News Desk
1 Min Read

ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ನವಚೈತನ್ಯ ನಾಮಧಾರಿ ಸಂಘದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ (ಮಾ. 7) ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡವು.

ಗಮನ ಸೆಳೆದ ಶಾಸಕರ ಸರಳತೆ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಕೃಷ್ಣ ಸೈಲ್ ಅವರು ತಮ್ಮ ದೈನಂದಿನ ಹಾಗೂ ರಾಜಕೀಯದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ, ಬೆಂಗಳೂರಿನಿಂದ ನೇರವಾಗಿ ಶಿರೂರು ಗ್ರಾಮದ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಶಾಸಕರ ಆಗಮನವು ಸಂಘಟನೆಯ ಸದಸ್ಯರು ಹಾಗೂ ಗ್ರಾಮಸ್ಥರಲ್ಲಿ ಅತೀವ ಸಂತಸ ಮೂಡಿಸಿತು.

ಈ ಸಂದರ್ಭದಲ್ಲಿ ಸಂಘದ ವತಿಯಿಂದ ಶಾಸಕರನ್ನು ವೇದಿಕೆಯ ಮೇಲೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಾಸಕರು ಕೇವಲ ಅತಿಥಿಯಾಗಿ ಉಳಿಯದೆ, ಸಾಮಾನ್ಯರಂತೆ ಜನರೊಂದಿಗೆ ಕುಳಿತು ನಾಟಕ ವೀಕ್ಷಿಸಿ, ಗ್ರಾಮಸ್ಥರೊಂದಿಗೆ ಬೆರೆತು ಕಾಲ ಕಳೆದು ಗಮನ ಸೆಳೆದರು.

ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾದ ಸ್ಥಳೀಯ ಗಣ್ಯರಾದ ಮಾನ್ವಿ ಕುಮಾರ ನಾಯ್ಕ, ಸಚಿನ ಶಿವಾನಂದ ಗೌಡ, ವಿಜಯಕುಮಾರ ಯಶ್ವಂತ ನಾಯ್ಕ ಹಾಗೂ ಶ್ರೀಮತಿ ಭಾಗೀರತಿ ಗೋವಿಂದ ನಾಯ್ಕ ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಇದೇ ವೇದಿಕೆಯಲ್ಲಿ, ಇತ್ತೀಚಿನ ಶೈಕ್ಷಣಿಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ‘ಪ್ರತಿಭಾ ಪುರಸ್ಕಾರ’ ನೀಡಿ ಪ್ರೋತ್ಸಾಹಿಸಲಾಯಿತು.

ಗಣ್ಯರ ಉಪಸ್ಥಿತಿ: ಇವತ್ತಿನಿ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಸತೀಶ್ ಕೃಷ್ಣ ಸೈಲ್, ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಗೋಪು ನಾಯಕ ಅಡ್ಲೂರ್, ಅಂಕೋಲಾ ವಲಯ ಅರಣ್ಯಾಧಿಕಾರಿ (RFO) ಪ್ರಮೋದ್ ಬಿ., ಇಡಗುಂಜಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ ನಾಯಕ, ಸಾಮಾಜಿಕ ಕಾರ್ಯಕರ್ತ ಚೇತನ ನಾಯಕ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ ಹಾಗೂ ನವಚೈತನ್ಯ ನಾಮಧಾರಿ ಸಂಘದ ಅಧ್ಯಕ್ಷ ನಾಗರಾಜ ನಾಯ್ಕ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.

Share This Article
Leave a Comment