ಕಾರವಾರ –( ಜು.6)ಕಾರವಾರ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ ಪಕ್ಷ) ಸದಸ್ಯರು ಜೂನ್ 25ರಂದು ಕಚೇರಿಗೆ ಭೇಟಿ ನೀಡಿ, ಕಚೇರಿಯ ಆಯಾ ಕುಂದು ಕೊರತೆಗಳನ್ನು ಕಚೇರಿಯ ಮುಖಸ್ಥರ ಗಮನಕ್ಕೆ ಲಿಖಿತವಾಗಿ ತಂದು ಫೇಸ್ಬುಕ್ ಲೈವ್ ಮೂಲಕ ಅಲ್ಲಿಯ ಚಿತ್ರಣವನ್ನು ತೋರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರ 6 ತಿಂಗಳಿಂದ ಬಾಕಿಯಾಗಿದ್ದ ಅರ್ಜಿಯೊಂದು krs ಪಕ್ಷದ ಸೈನಿಕರ ಕೈ ಸೇರಿ ಸಂಬಂಧಿತ ಅಧಿಕಾರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಗಿ 10 ನಿಮಿಷದಲ್ಲಿ ಪರಿಹಾರ ಕೊಂಡುಕೊಳ್ಳಲಾಯಿತು. ಆ ವ್ಯಕ್ತಿಯು ಸಂತಸದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದರು.
ಆದರೆ ಮಾರನೇ ದಿನ, ಕೆಲ ಅಧಿಕಾರಿಗಳು ಮತ್ತು ನೌಕರರ ಸಂಘದವರು ಸೇರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ರು. ಅದಾದ ನಂತರ ಕಾರವಾರ್ ತಹಸಿಲ್ದಾರ್ ಕಚೇರಿಯ 9 ನೌಕರರು ದಿನಾಂಕ27/06/2025ರಂದು ಪೊಲೀಸ್ ಠಾಣೆಯಲ್ಲಿ ತೆರಳಿ ಕೆ ಆರ್ ಎಸ್ ಪಕ್ಷದ ಜಿಲ್ಲಾ ಘಟಕದ ಮೂರು ಪದಾಧಿಕಾರಿಗಳು. ಹಾಗೂ ಉಳಿದ ಸದಸ್ಯರು ಎಂದು ನಮೂದಿಸಿ ದೂರು ನೀಡಿದ್ದಾರೆ.
ಕಾರವಾರ ತಹಶೀಲ್ದಾರ ಕಚೇರಿಯ ನೌಕರರ ಆರೋಪ ಏನೆಂದರೆ –
“ಕಚೇರಿಯಲ್ಲಿ ಲೈವ್ ಮಾಡಿದ್ದು ನೌಕರರ ಗೌರವಕ್ಕೆ ಧಕ್ಕೆಯಾಗಿದೆ!” ಅಂತೆ ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಪ್ರವೇಶ ಮಾಡಿ ಕರ್ತವ್ಯದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಭೀತಿಯ ವಾತಾವರಣ ಉಂಟು ಮಾಡಿ. ಉದ್ದೇಶಪೂರ್ವಕವಾಗಿ ಕಚೇರಿ ಅಧಿಕಾರಿ ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಅವಮಾನಗೊಳಿಸಿ. ಮಹಿಳಾ ಸಿಬ್ಬಂದಿಗಳ ಜೊತೆಗೆ ಅನುಚಿತವಾಗಿ ವರ್ತಿಸಿ ಭಯಭೀತಿ ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಯುಕ್ತ ಕೆಆರ್‌ಎಸ್ ಪಕ್ಷದ 3ಜನ ಜಿಲ್ಲಾ ಘಟಕದ ಪದಾಧಿಕಾರಿಗಳ ಮೇಲೆ FIR ದಾಖಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತೀವ್ರವಾಗಿ ತಿರುಗೇಟು ನೀಡಿದ್ದು, ” ಸರ್ಕಾರಿ ಕಚೇರಿ ಎಂದರೆ ಅದು ಜನರದ್ದು. ಅಧಿಕಾರಿಗಳ ನಡೆ ಪ್ರಶ್ನಿಸಿದರೆ, ಕೇಸು ಹಾಕೋದು ಎಲ್ಲಿ ನ್ಯಾಯ? ಯಾವುದೇ ನಿಯಮ ಪ್ರಕಾರ ದಲ್ಲಿಯೂ ಕಚೇರಿಯಲ್ಲಿ ವಿಡಿಯೋ ಮಾಡುವುದು ಅಪರಾಧವಲ್ಲ” ಎಂದು ಹೇಳಿದ್ದಾರೆ.
ಇನ್ನು ಯಾವ ಕಾನೂನಿನ ಅಡಿಯಲ್ಲಿ ಸಾರ್ವಜನಿಕ ಕಚೇರಿಯಲ್ಲಿ ವಿಡಿಯೋ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರಿ ನೌಕರರು ತಿಳಿಸಬೇಕು. ವಿಡಿಯೋ ಮಾಡುವ ಸಂದರ್ಭದಲ್ಲಿ ಮಹಿಳಾ ನೌಕರರ ಗೌರವಕ್ಕೆ ಧಕ್ಕೆ ಹಾಗೂ ರೀತಿಯಲ್ಲಿ ಯಾವ ಘಟನೆ ನಡೆದಿದೆ ಎಂದು ನಿರ್ದಿಷ್ಟವಾಗಿ ತಿಳಿಸಲಿ. ಸರ್ಕಾರವು ಹಿಂದೆ ಸರ್ಕಾರಿ ಕಚೇರಿಗಳಲ್ಲಿ ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ ತದನಂತರ 24 ಗಂಟೆ ಒಳಗೆ ಆದೇಶವನ್ನು ಹಿಂಪಡೆಯು ವಂತಾಗಿ ಕಪಾಳ ಮೋಕ್ಷ ಮಾಡಿಕೊಂಡಿರುವುದು ಇವರ್ಯಾರಿಗೂ ತಿಳಿದಿಲ್ಲವೇ? ಗುರುತಿನ ಚೀಟಿ ಧರಿಸಬೇಕು. ನಾಮಫಲಕ ಹಾಕಬೇಕು ಎಂದು ಇರುವ ಆದೇಶಗಳು ಇವರು ಗಮನದಲ್ಲಿಲ್ಲವೇ? ಕೇವಲ ತಾಲೂಕು ಕಚೇರಿ ಅಷ್ಟೇ ಅಲ್ಲ ಪೊಲೀಸ್ ಠಾಣೆಯಲ್ಲಿ ವಿಡಿಯೋ ಮಾಡೋದು ಅಪರಾಧವಲ್ಲ ಎಂದು ಮಾನ್ಯ ಬಾಂಬೆ ಹೈಕೋರ್ಟು ತೀರ್ಪು ನೀಡಿರುವುದು ಇವರಿಗೆ ತಿಳಿದಿಲ್ಲವೇ? ತಿಳಿದಿಲ್ಲವೆಂದರೆ ಆಶ್ಚರ್ಯವಾಗುತ್ತದೆ ಮತ್ತು ಅವರುಗಳು ಆಸ್ಥಾನಕ್ಕೆ ಅರ್ಹರಾಗಿರುವುದಿಲ್ಲ, ತಮ್ಮ ಅಯೋಗ್ಯತೆ ಮುಚ್ಚಿಕೊಳ್ಳಲು ಮತ್ತು ಮುಂದೆ ಈ ರೀತಿ ಯಾರು ಪ್ರಶ್ನಿಸಬಾರದು ಎಂದು ಸುಳ್ಳು ಆರೋಪಗಳನ್ನು ಪದಾಧಿಕಾರಿಗಳ ಮೇಲೆ ಮಾಡಿರುತ್ತಾರೆ,

“ಎಫ್‌ಐಆರ್, ಕೇಸು, ಬೆದರಿಕೆ – ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭ್ರಷ್ಟಾಚಾರದ ವಿರುದ್ಧ ಲಾಠಿ ಹಿಡಿದಂತೆ ನಾವು ಮುಂದುವರೆಯುತ್ತೇವೆ” ಎಂದು ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ…
ಈ ಘಟನೆಯ ಬೆನ್ನಲ್ಲೇ ಜಿಲ್ಲೆಯ ದಾದ್ಯಂತ ಯಾವ್ಯಾವ ತಾಲೂಕಿನಲ್ಲಿ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಸಕ್ರಿಯರಾಗಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ…
ಕಾರವಾರದಲ್ಲಿ krs ಪಕ್ಷದ ಪದಾಧಿಕಾರಿಗಳ ಮೇಲೆ ದೂರು ದಾಖಲಾಗಿರುವುದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಭ್ರಷ್ಟಾಚಾರದ ವಿರುದ್ಧ ಲಂಚಮುಕ್ತ ಕರ್ನಾಟಕಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಲೈವ್ ನಲ್ಲಿ ಸತ್ಯವನ್ನು ತೋರಿಸಿದ್ದಕ್ಕೆ FIR ದಾಖಲಿಸಿ ಹೋರಾಟಕ್ಕೆ ಬಹುದೊಡ್ಡ ಬಹುಮಾನ? ನೀಡಲಾಗಿದೆ ಎಂದು ಪಕ್ಷದ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ವರದಿ : ಕಿರಣ ಚಂದ್ರಹಾಸ ಗಾಂವಕರ

