
ಬೆಂಗಳೂರು: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತವು 2025-26ನೇ ಸಾಲಿನಲ್ಲಿ ಹಿಂದುಳಿದ ವರ್ಗದ ಅರ್ಹ ಫಲಾಪೇಕ್ಷಿಗಳಿಗೆ ವಿವಿಧ ಯೋಜನೆಗಳಡಿಯಲ್ಲಿ ಆರ್ಥಿಕ ಹಾಗೂ ಶೈಕ್ಷಣಿಕ ನೆರವು ಒದಗಿಸಲು ಅರ್ಜಿ ಆಹ್ವಾನಿಸಿದೆ. ಸೇವಾ ಸಿಂಧು ಪೋರ್ಟಲ್ (http://sevasindhu.karnataka.gov.in) ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಅರ್ಜಿಯನ್ನು ಆಹ್ವಾನಿಸಿರುವ ಪ್ರಮುಖ ಯೋಜನೆಗಳು:
1). ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ: ಕೃಷಿ, ವ್ಯಾಪಾರ, ಕೈಗಾರಿಕೆ, ಸಾರಿಗೆ ಹಾಗೂ ಸೇವಾ ವಲಯದಲ್ಲಿ ನಿರುದ್ಯೋಗಿಗಳಿಗೆ ರೂ.2 ಲಕ್ಷವರೆಗೆ ಸಾಲ. ಸಹಾಯಧನ ಶೇ.15 ರಿಂದ ಶೇ.20ರವರೆಗೆ ಲಭಿಸುತ್ತದೆ.
2). ಗಂಗಾ ಕಲ್ಯಾಣ ನೀರಾವರಿ ಯೋಜನೆ:
ಹಿಂದುಳಿದ ವರ್ಗದ ಸಣ್ಣ ರೈತರಿಗೆ ಕೊಳವೆ ಬಾವಿ ಮೂಲಕ ನೀರಾವರಿ ವ್ಯವಸ್ಥೆ. ಆಯ್ದ ಜಿಲ್ಲೆಗಳಿಗೆ ರೂ.4.25 ಲಕ್ಷ ಮತ್ತು ಇತರ ಜಿಲ್ಲೆಗಳಿಗೆ ರೂ.3.25 ಲಕ್ಷಗಳವರೆಗೆ ಸಹಾಯಧನ.

3). ಅರಿವು ಶೈಕ್ಷಣಿಕ ಸಾಲ ಯೋಜನೆ:
CET/NEET ಮೂಲಕ ಆಯ್ಕೆಯಾಗಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಶೇ.2 ಬಡ್ಡಿದರದಲ್ಲಿ ಸಾಲ.
4). ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ:
QS World Ranking 1000 ರೊಳಗಿನ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಲು ಶೇ.0 ಬಡ್ಡಿದರದಲ್ಲಿ ಗರಿಷ್ಠ ರೂ.50 ಲಕ್ಷವರೆಗೆ ಸಾಲ. ಶೈಕ್ಷಣಿಕ ಅರ್ಹತೆ ಶೇ.60 ಅಂಕಗಳು ಕಡ್ಡಾಯ
5). ಸ್ವಾವಲಂಬಿ ಸಾರಥಿ ಯೋಜನೆ:
ನಾಲ್ಕು ಚಕ್ರಗಳ ವಾಹನ ಖರೀದಿಗೆ ಗರಿಷ್ಠ ರೂ.3 ಲಕ್ಷದ ಸಹಾಯಧನ.
6).ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದ ಸ್ವಯಂ ಉದ್ಯೋಗ ಯೋಜನೆ:
ಬ್ಯಾಂಕ್‌ಗಳಿಂದ ಸಾಲ ಪಡೆದು ಉದ್ಯಮ ಆರಂಭಿಸಲು ಶೇ.20ರಷ್ಟು ಸಹಾಯಧನ (ಅಧಿಕತಮ ರೂ.1 ಲಕ್ಷ).

7). ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ:
ಹಿಂದುಳಿದ ವರ್ಗದ ಯುವಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಆಯ್ಕೆ ಅರ್ಜಿ: www.kaushalkar.com
8). ಹೊಲಿಗೆ ಯಂತ್ರ ವಿತರಣಾ ಯೋಜನೆ:
ಹಿಂದುಳಿದ ವರ್ಗದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ.
ಯೋಗ್ಯತೆ:
ಪ್ರವರ್ಗ 1, 2ಎ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು ಈ ಯೋಜನೆಗಳಿಗೆ ಅರ್ಹರು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 30, 2025 ಕೊನೆಯ ದಿನಾಂಕವಾಗಿದ್ದು, ವಿವರಗಳಿಗೆ www.dbcdc.karnataka.gov.in ವೆಬ್‌ಸೈಟ್ ಅಥವಾ ಸಹಾಯವಾಣಿ ಸಂಖ್ಯೆ 080-22374832, 8050770004/5 ಅನ್ನು ಸಂಪರ್ಕಿಸಬಹುದು.

