Connect with us

ಆರೋಗ್ಯ

ಕೃತಕ ಬಣ್ಣವನ್ನು ಆಹಾರ ತಯಾರಿಕೆಯಲ್ಲಿ ಬಳಸುತ್ತಿದ್ದರೆ, ಹಾಗೂ ರದ್ದಿಪತ್ರಿಕೆಯಲ್ಲಿ ಪ್ಯಾಕ್ ಮಾಡಿದ ತಿಂಡಿಗಳನ್ನು ತಿನ್ನುತ್ತಿದ್ದರೆ ಕೂಡಲೇ ಈ ಹವ್ಯಾಸವನ್ನು ಬಿಟ್ಟುಬಿಡಿ..! ಇಲ್ಲವಾದರೆ ಕ್ಯಾನ್ಸರ್ ಖಚಿತ..!

Published

on

lಅಂಕೋಲಾ : ಕ್ಯಾನ್ಸರ್ ಎನ್ನುವ ಭೂತ ದಿನದಿಂದ ದಿನಕ್ಕೆ ಎಲ್ಲಾ ವಯಸ್ಕರಲ್ಲಿಯೂ ಕಾಡುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರಲ್ಲಿಯೂ ಈ ಕ್ಯಾನ್ಸರ್ ಭೂತ ಕಾಡುತ್ತಿದೆ. ಜ್ವರ – ಶೀತ ಎಂದರೆ ದೊಡ್ಡ ರೋಗ ಎನ್ನುವ ಕಾಲ ಹೋಗಿದೆ, 2022ರ ಎನ್. ಸಿ. ಡಿ. ಐ.ಆರ್ (ನ್ಯಾಷನಲ್ ಸೆಂಟರ್ ಫಾರ್ ಡೀಸಿಸ್ ಇನ್ಫರ್ಮ್ಯಾಟಿಕ್ಸ್ ಆ್ಯಂಡ್ ರಿಸರ್ಚ್) ಗಣತಿ ಪ್ರಕಾರ ಪ್ರತಿ 9 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಡುತ್ತಿದೆ. ಹೃದಯ ಸಂಬಂಧಿ ಕಾಯಿಲೆ ಇಂದ ಅತೀ ಹೆಚ್ಚು ಸಾವು ಸಂಭವಿಸಿತ್ತಿದ್ದರೆ, ಎರಡನೆಯದೇ ಈ ಕ್ಯಾನ್ಸರ್ ಎನ್ನುವ ಭೂತದಿಂದ…!

ಕ್ಯಾನ್ಸರ್ ಎಂದರೇನು? ಕ್ಯಾನ್ಸರ್ ಬಂದರೆ ದೇಹದಲ್ಲಿ ಏನಾಗುತ್ತದೆ?

“ಅನಿಯಂತ್ರಿತವಾಗಿ ವಿಭಜಿಸುವ ಮತ್ತು ಸಾಮಾನ್ಯ ದೇಹದ ಅಂಗಾಂಶವನ್ನು ನುಸುಳುವ ಮತ್ತು ನಾಶಮಾಡುವ ಸಾಮರ್ಥ್ಯವನ್ನು ಹೊಂದಿರುವ ಅಸಹಜ ಕೋಶಗಳ ಬೆಳವಣಿಗೆ”ಯೇ ಕ್ಯಾನ್ಸರ್.
ಒಮ್ಮೆ ಈ ಬೆಳವಣಿಗೆ ಶುರುವಾದರೆ ದೇಹದ ಪ್ರತಿಯೊಂದು ಭಾಗದಲ್ಲಿಯು ಇದು ಹರಡಲು ಪ್ರಾರಂಭಿಸುತ್ತದೆ. ಆದರಿಂದ ಇದನ್ನು ತಡೆಗಟ್ಟಲು ಆದಷ್ಟು ಬೇಗ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ.

ಕ್ಯಾನ್ಸರ್ ಅಲ್ಲಿ ಹಲವು ಬಗೆಗಳಿವೆ ಬ್ಲಡ್ ಕ್ಯಾನ್ಸರ್, ಬೋನ್ ಕ್ಯಾನ್ಸರ್, ಕಾಲೋರೆಕ್ಟಲ್ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ಲಂಗ್ ಕ್ಯಾನ್ಸರ್, ಬ್ಲಾಡರ್ ಕ್ಯಾನ್ಸರ್ ಮುಂತಾದವುಗಳು..

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವುದರಿಂದಲೂ ಕ್ಯಾನ್ಸರ್ ಬರುತ್ತದೆ…!!

ಈಗಿನ ಬಿಡುವಿಲ್ಲದ ಕಾರ್ಯನಿರತ ಕಾಲದಲ್ಲಿ ಜನರು ಕೈಗೆ ಸಿಕ್ಕಿದ್ದನ್ನು ಸೇವಿಸುತ್ತಾರೆ. ಮನೆ ಊಟ ಕಡಿಮೆ ಆಗಿದೆ. ನಾನ್ ವೆಜ್ ಹೆಚ್ಚಾಗಿದೆ. ಫಾಸ್ಟ್ ಫುಡ್ ಜಂಕ್ ಫುಡ್ ಗಳದ್ದೇ ರಾಜ್ಯಭಾರ ಆಗಿದೆ. ಚಿಕ್ಕ ಮಕ್ಕಳಿಗೆ ಕೃತಕ ಬಣ್ಣ ಹಾಕಿದ ಕ್ಯಾಂಡಿ, ಕಬಾಬ್, ಗೋಬಿ ಮಂಚೂರಿಯನ್ ಅಂದರೆ ಸಾಕು ಊಟ ಮರೆಯುತ್ತಾರೆ. ಆಶ್ಚರ್ಯ ಎಂದರೆ ತಂದೆ ತಾಯಂದಿರು ಸಹ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಆಹಾರ ಸೇವನೆ ಮಾಡಿಸುವುದು ಬಿಟ್ಟು ಕೃತಕ ಬಣ್ಣ ಹಾಕಿದ ತಿಂಡಿಗಳನ್ನು ತಿನ್ನಿಸುತ್ತಾರೆ. ರೋಡಮೈನ್ ಬಿ ಎನ್ನುವ ಕೃತಕ ಬಣ್ಣವನ್ನು ಕರ್ನಾಟಕ ಸರ್ಕಾರ ಬ್ಯಾನ್ ಮಾಡಿದೆ. ಇದನ್ನು ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯನ್ ತಯಾರಿಕೆಯಲ್ಲಿ ಬಳಸುತ್ತಾರೆ. ಇದನ್ನು ಉಲ್ಲಂಘಿಸಿ ಯಾವುದೇ ಹೋಟೆಲ್ ಅಥವಾ ಅಂಗಡಿಗಳಲ್ಲಿ ಕೃತಕ ಬಣ್ಣಗಳನ್ನು ಬಳಸಿದರೆ, ಏಳು ವರ್ಷ ಜೈಲು ಹಾಕು ಹತ್ತು ಲಕ್ಷ ದಂಡ ವಿಧಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವರು ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ವೇಜ್, ಚಿಕನ್ ಹಾಗೂ ಫಿಶ್ ಕಬಾಬ್ ಗಳಲ್ಲಿ ಬಳಸುವ ಕೃತಕ ಬಣ್ಣಗಳನ್ನು (ಕಾರ್ಮೊಯಿಸಿನ್ ಹಾಗೂ ಸನಸೆಟ್ ಯೆಲ್ಲೊ) ಸಹ ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.. ಆದರೂ ಇನ್ನೂ ಕೆಲವು ಕೃತಕ ಬಣ್ಣಗಳಿಂದ ಮನುಷ್ಯನಿಗೆ ಒಂದಲ್ಲ ಒಂದು ರೋಗ ಬರುತ್ತಿದೆ. ಸರಕಾರ ಬ್ಯಾನ್ ಮಾಡಿದ ಮೇಲೆ ಜನರು ಕೃತಕ ಬಣ್ಣಗಳ ಬಳಕೆಯಾಗಲಿ ಅಥವಾ ಅವುಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳ ಸೇವನೆ ಬಿಡಬೇಕು ಅಂದೇನಿಲ್ಲ. ಬುದ್ಧಿವಂತ ನಾಗರಿಕರಾಗಿ. “ಹೊಟ್ಟೆಗೆ ನಾವು ಏನು ಹಾಕುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ”.

ಪತ್ರಿಕೆ ಪ್ರಿಂಟ್ ಮಾಡುವ ಇಂಕ್ ಸೇವನೆ ಇಂದ ಕ್ಯಾನ್ಸರ್ ಬರುವ ಸಾಧ್ಯತೆಯಿದೆ..!

ಹೊರಗಡೆ ರಸ್ತೆ ಬದಿ ಗೂಡಂಗಡಿಗಳಲ್ಲಿ ತಯಾರಿಸುವ ಬಜ್ಜಿ, ಬನ್ಸ್, ದೋಸೆ, ಮಿರ್ಚಿ ಬಜ್ಜಿ, ಕಾಂದ ಬಜ್ಜಿ ಎಲ್ಲವನ್ನೂ ಅಂಗಡಿಯವರು ಹಳೆ ರದ್ದಿ ಪತ್ರಿಕೆಯಲ್ಲಿ ಸುತ್ತಿ ಕೊಡುತ್ತಾರೆ.ಅಷ್ಟೇ ಅಲ್ಲದೆ ಮನೆಯಲ್ಲಿಯೂ ಸಹ ಕರೆದ ತಿಂಡಿಗಳಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆಯಲು ನ್ಯೂಸ್ ಪೇಪರ್ ಅನ್ನು ಬಳಸುತ್ತೇವೆ, ಆದರೆ ದಿನಪತ್ರಿಕೆ ಪ್ರಿಂಟ್ ಮಾಡಲು ಬಳಸುವ ಇಂಕ್ ನಲ್ಲಿ ಅಪಾಯಕಾರಿ ರಾಸಾಯನಿಕಗಳು ಇರುತ್ತದೆ, ಬಿಸಿ ಬಿಸಿ ತಿಂಡಿಗಳನ್ನು ನ್ಯೂಸ್ ಪೇಪರ್ ಅಲ್ಲಿ ಸುತ್ತಿವುದರಿಂದ ನ್ಯೂಸ್ ಪೇಪರ್ ನಲ್ಲಿರುವ ಇಂಕ್ ಅನ್ನು ಆ ತಿಂಡಿಗಳು ಹೀರಿಕೊಳ್ಳುತ್ತದೆ, ಇದು ಎಷ್ಟು ಜನರಿಗೆ ಗೊತ್ತಿದೆ..?! ಅದನ್ನು ಸೇವಿಸುತ್ತಾ ಬಂದರೆ ಕ್ಯಾನ್ಸರ್, ಫುಡ್ ಪಾಯಿಸನಿಂಗ್, ಜೀರ್ಣಕಾರಿ ಅಸ್ವಸ್ಥತೆಗಳು, ವಿಷತ್ವ, ಕ್ಯಾನ್ಸರ್ ಇನ್ನಿತರ ಖಾಯಿಲೆಗಳು ಜನರಿಗೆ ಕಟ್ಟಿಟ್ಟ ಬುತ್ತಿ..! ಅಷ್ಟೇ ಅಲ್ಲದೆ ಪ್ರಮುಖ ಅಂಗಗಳ ವೈಫಲ್ಯ ಮತ್ತು ರೋಗನಿರೋಧಕ ವ್ಯವಸ್ಥೆಯ ದುರ್ಬಲಗೊಳ್ಳುವಿಕೆಗೂ ಇದು ಕಾರಣವಾಗಬಹುದು. ಹೌದು ಎಫ್.ಎಸ್.ಎಸ್.ಎ.ಐ ವರದಿ ಪ್ರಕಾರ ಪ್ರಿಂಟಿಂಗ್ ಇಂಕ್ ಅಲ್ಲಿ ಬಹಳಷ್ಟು ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳು ಇರುತ್ತವೆ, ಅವು ಆಹಾರದೊಂದಿಗೆ ಬೆರೆತು ಮನುಷ್ಯನ ದೇಹದೊಳಗೆ ಹೋಗಿ ಹಲವಾರು ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ.

ಆದರಿಂದ ಹೊರಗಡೆ ರಸ್ತೆ ಬದಿ ತಿಂಡಿ ಸೇವಿಸುವ ಮೊದಲು, ಅಂಗಡಿಯವರು ಯಾವುದರಲ್ಲಿ ತಿಂಡಿಗಳನ್ನು ಕೊಡುತ್ತಾರೆ ಎಂದು ನೋಡಿ. ಬಾಯಿಗೆ ತಿಂಡಿಯನ್ನು ಹಾಕುವ ಮೊದಲು ಇದೆಷ್ಟು ಆರೋಗ್ಯಕರವಾಗಿದೆ ಎಂದು ಯೋಚಿಸಿ. ಕಣ್ಣಿಗೆ ಕಂಡ ತಿಂಡಿಗಳನ್ನೆಲ್ಲ ಬಾಯಿಗೆ ಹಾಕುವುದನ್ನು ನಿಲ್ಲಿಸಿ. ಸಾಧ್ಯವಾದಷ್ಟು ಮನೆ ಊಟಗಳನ್ನೇ ಸೇವಿಸಿ ಆರೋಗ್ಯಕರ ಜೀವನ ನಡೆಸಿ.

ವರದಿ: ಸುಪ್ರಿಯಾ ವಿಷ್ಣು ನಾಯ್ಕ

Click to comment

Leave a Reply

Your email address will not be published. Required fields are marked *

Advertisement

Trending