
ವರದಿ : ಕಿರಣ ಗಾಂವಕರ
ಅಂಕೋಲಾ : ಜನಸ್ನೇಹಿ ಪೊಲೀಸ್ ಸೇವೆಯೊಂದಿಗೆ ಸಮಾಜದಲ್ಲಿ ಅಪರಾಧಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕಳೆದ ಕೆಲವು ವರ್ಷಗಳಿಂದ ರಾಜ್ಯಾದ್ಯಂತ ಬೀಟ್ ಸಿಸ್ಟಮ್ ಆರಂಭಗೊಂಡಿದ್ದು. ಅಂಕೋಲಾ ಪೊಲೀಸ್ ಠಾಣೆಯ ಜನಸ್ನೇಹಿ ಅಧಿಕಾರಿಗಳು ಹಳ್ಳಿಗಳಲ್ಲಿ ಭೇಟಿ ನೀಡಿ ಜನಸಂಪರ್ಕ ಸಭೆಯನ್ನು ಹಮ್ಮಿಕೊಳ್ಳುದರೊಂದಿಗೆ ಪೋಲಿಸ್ ಇಲಾಖೆಯ ಮೇಲಿದ್ದ ಭಯದ ವಾತಾವರಣ ಶಮನಗೊಳ್ಳಲು ಪೊಲೀಸ್ ವೃತ್ತಿಯಲ್ಲಿ ಪ್ರಾಮಾಣಿಕತೆ, ಬದ್ಧತೆ ಹಾಗೂ ಜವಾಬ್ದಾರಿ ಮೆರೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ಉತ್ತಮ ಬೀಟ್ ಪೊಲೀಸ್ ವ್ಯವಸ್ಥೆಗೆ ಬಲ ತುಂಬುತ್ತಿದ್ದಾರೆ.
ಅಂಕೋಲಾದ ಕೆಳಗಿನ ಮಂಜುಗುಣಿ ಬೀಟ್ ನಲ್ಲಿ ಜನ ಸಂಪರ್ಕ ಸಭೆ ನಡೆಸಿದ ಪಿಎಸ್ಐ ಸುನಿಲ್ ಹುಲ್ಲೊಳ್ಳಿ..
ಅಂಕೋಲಾ ಪೊಲೀಸ್ ಠಾಣೆ ಪಿಎಸ್ಐ ಸುನಿಲ್ ಹುಲ್ಲೊಳ್ಳಿ ಅವರು ನಿನ್ನೆ ದಿನಾಂಕ 1-04-2025 ರಂದು ಕೆಳಗಿನ ಮಂಜುಗುಣಿ ಪ್ರದೇಶದಲ್ಲಿ ತಮ್ಮ ಬಿಟ್ ಸಿಬ್ಬಂದಿ ನಾಗರಾಜ ಗೌಡ ರೊಂದಿಗೆ ತೆರಳಿ ಜನಸಂಪರ್ಕ ಸಭೆಯನ್ನು ನಡೆಸಿದರು.
ಮೊದಲನೆಯದಾಗಿ ಪಿಎಸ್ಐ ತಮ್ಮ ಹಾಗೂ ಕೆಳಗಿನ ಮಂಜುಗುಣಿ ಪ್ರದೇಶದ ಬೀಟ್ ಪೊಲೀಸರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಮಸ್ಯೆಗಳು ಬಂದಾಗ ಹೇಗೆ ಎದುರಿಸುವುದು. ಅಪರಾಧಗಳನ್ನು ಹೇಗೆ ತಡೆಗಟ್ಟಬಹುದು. ಸಂಚಾರಿ ನಿಯಮಗಳನ್ನು ಪಾಲಿಸುವ ಕುರಿತು ದೇಹಕ್ಕೆ ಹಾನಿಕಾರಕವಾದ ಕೆಟ್ಟ ವ್ಯಸನ ಗಳನ್ನು ಬಿಡುವಂತೆ , ಆರೋಗ್ಯವಂತ ಜೀವನವನ್ನು ನಡೆಸಲು ಜಾಗೃತಿ ಮೂಡಿಸಿದರು.

ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಜನಸ್ನೇಹಿಯಾಗಿ ಗುರುತಿಸಿಕೊಂಡಿರುವ ಪಿಎಸ್ಐ ಸುನಿಲ್ ಹುಲ್ಲೊಳ್ಳಿ ರವರು ಗ್ರಾಮೀಣ ಪ್ರದೇಶದ ಜನರಲ್ಲಿ ಧೈರ್ಯ ತುಂಬಿ, ಉತ್ತಮವಾಗಿ ವಾಗಿ ಬೆರೆತಿದ್ದು, ಪೊಲೀಸರು ಎನ್ನುವ ಭಯ ಸಾರ್ವಜನಿಕರಲ್ಲಿ ದೂರವಾಗಿಸಿದ್ದಾರೆ.
ಕೆಳಗಿನ ಮಂಜುಗುಣಿ ಪ್ರದೇಶದಲ್ಲಿ ಬೀಟ್ ಪೊಲೀಸ್ ಆಗಿ ನಾಗರಾಜ್ ಗೌಡರವರಿಗೆ ಪೊಲೀಸ್ ಠಾಣೆಯಿಂದ ನೇಮಿಸಿದ್ದು.. ಈಗಾಗಲೇ ಇವರು ಬೀಟ್ನಲ್ಲಿರುವ ಸಾರ್ವಜನಿಕರ ವಾಟ್ಸಾಪ್ ಗ್ರೂಪ್ ಅನ್ನು ಮಾಡಿ ಅಪರಾಧಗಳನ್ನು ಆದಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಲು ಜನ ಸ್ನೇಹಿಯಾಗಿ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಮೇಲಾಧಿಕಾರಿಗಳ ಸಲಹೆ ಸೂಚನೆಯೊಂದಿಗೆ ಕೆಲಸವನ್ನು ನಿರ್ವಹಿಸುತ್ತಿರುವುದಾಗಿ ಮಾಹಿತಿ ನೀಡಿದರು. ಜೊತೆಗೆ ಪೋಲಿಸ್ ಇಲಾಖೆಯ ಬೀಟ್ ವ್ಯವಸ್ಥೆ ಕಾರ್ಯನಿರ್ವಹಣೆಯಲ್ಲಿ ವೇಗ ತಂದಿರುವುದರಿಂದ ಸಾರ್ವಜನಿಕರ ದೂರಿಗೆ ಶೀಘ್ರವಾಗಿ ಸ್ಪಂದನೆ ನೀಡಬೇಕಾಗಿರುವುದರಿಂದ ಬೀಟ್ ಪೊಲೀಸರ ಜವಾಬ್ದಾರಿ ಕೂಡ ಹೆಚ್ಚಾಗಿದೆ.
….

