
16 Aug 2024, 12:58 am, 275 reads
ಯಾರಿಗೆ ಬಂತು ಎಲ್ಲಿಗೆ ಬಂತು1947 ರ ಸ್ವಾತಂತ್ರ್ಯ? ಎಂದು ಕೇಳುವಂತ ಪರಿಸ್ಥಿತಿ ಇಂದಿನ ಕೆಲವು ವಿದ್ಯಾಮಾನಗಳನ್ನು ನೋಡಿದರೆ ಗಮನಿಸಿದರೆ ಹೇಳಬೇಕು ಅನಿಸುವುದು ಖಂಡಿತ. ಆದರೂ ಸಹ ನಾವು ಪ್ರತಿ ವರ್ಷ ಸ್ವಾತಂತ್ರ್ಯ ಸಿಕ್ಕ ದಿನವನ್ನು ಭಾರತೀಯರಾದ ನಾವು ಹೆಮ್ಮೆಯಿಂದ ಆಚರಿಸುತ್ತಾ ಬಂದಿದ್ದೇವೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಾಣ ತೆತ್ತ ಬಲಿದಾನವಾದ ಎಲ್ಲ ವೀರರ ನೆನೆದು ಅವರಿಗೆ ನಮನ ಸಲ್ಲಿಸುತ್ತಾ, ಇಂದು ಅಂಕೋಲಾ ತಾಲೂಕಿನಲ್ಲಿ 78 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಎಲ್ಲಾ ಸರ್ಕಾರಿ ಶಾಲೆಗಳು,ಖಾಸಗಿ ಶಾಲೆಗಳು,ಸಂಘ ಸಂಸ್ಥೆಗಳು,ಜಿಮ್,ಟ್ಯಾಕ್ಸಿ ರಿಕ್ಷಾ, ಯೂನಿಯನ್ ಗಳು,ಸಾರಿಗೆ ಸಂಸ್ಥೆಗಳು ಅದ್ದೂರಿಯಾಗಿ ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಸೇವಾ ಕನ್ನಡಿಗರು ಕ್ಲಬ್ ವಿ ಪಿಟ್ನೆಸ್ ಜಿಮ್ ತಂಡದಿಂದ ಜಿಮ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಹಾಗೂ ಆಶ್ರಮದ ಅನಾಥರಿಗೆ ಸಿಹಿ ಜೊತೆಗೆ ಊಟದ ವ್ಯವಸ್ಥೆ
ಅಂಕೋಲ ತಾಲೂಕಿನ ಸೇವಾ ಕನ್ನಡಿಗರು ಕ್ಲಬ್ ವಿ ಪಿಟ್ನೆಸ್ ಜಿಮ್ ನ್ ಯುವ ಪಡೆಯ ಸದಸ್ಯರೆಲ್ಲರೂ ಸೇರಿ ಜಿಮ್ ನಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು…

ಆಶ್ರಮಕ್ಕೆ ಭೇಟಿ ನೀಡಿ ನೊಂದ ಜೀವಗಳಿಗೆ ಸಿಹಿ ಹಂಚಿ ಊಟದ ವ್ಯವಸ್ಥೆ ಮಾಡಿದ ಯುವಪಡೆ
ತಾಲೂಕಿನ ಅಜ್ಜಿ ಕಟ್ಟ ರೋಡಿಗೆ ಹೊಂದಿಕೊಂಡಿರುವ ಕ್ರಿಸ್ತಮಿತ್ರ ಅನಾಥಾಶ್ರಮಕ್ಕೆ ಭೇಟಿ ಕೊಟ್ಟ ಯುವಪಡೆ ಅಲ್ಲಿರುವ ನೊಂದ ಜೀವಗಳಿಗೆ ಸಿಹಿ ತಿಂಡಿ ಹಂಚಿ.. ಹಾಗೂ ಊಟದ ವ್ಯವಸ್ಥೆಯನ್ನು ಮಾಡಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಿಮ್ ನ ಸದಸ್ಯರಿಗೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪವರ್ ಲಿಫ್ಟಿಂಗ್ ಸ್ಪರ್ಧೆಯನ್ನು ಏರ್ಪಡಿಸಿ ಗೆದ್ದ ಸ್ಪರ್ಧಾಳು ಗಳಿಗೆ ಆಕರ್ಷಕ ಬಹುಮಾನ ವನ್ನು ನೀಡಲಾಯಿತು.
ಇಂದಿನ ಈ ಮೇಲಿನ ಎಲ್ಲಾ ಕಾರ್ಯಕ್ರಮದಲ್ಲಿ ಕ್ಲಬ್ ವಿ ಪಿಟ್ನೆಸ್ನ್ ಜಿಮ್ ನ್ ಮಾಲಿಕ ವಿಘ್ನೇಶ್ ನಾಯ್ಕ , ಜಿಮ್ ನ ಸದಸ್ಯರಾದ ಸಂಜು , ಚಂದು , ಆದಿ , ಸಂಕೇತ್ , ಚೇತನ್ , ನರೇಶ್, ಯಶ್ , ಗಣೇಶ್ , ಸ್ವರೂಪ ಹಾಗೂ ಅನೇಕ ಜೀಮ್ನ್ ಸದಸ್ಯರು ಸದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಯಲ್ಲಿ ನಡೆದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ.

ಅಂಕೋಲಾ ನಗರದ ಮುಖ್ಯ ಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 1,ಸರ್ಕಾರಿ ಪ್ರೌಢಶಾಲೆ ನಗರ, ಸರಕಾರಿ ಪದವಿ ಪೂರ್ವ ಕಾಲೇಜು ಒಳಗೊಂಡತೆ ಮೂರು ಶಿಕ್ಷಣ ಸಂಸ್ಥೆ ಅವರು ಕೂಡಿಕೊಂಡು ಸಂಭ್ರಮದಿಂದ 78 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.ಸರ್ಕಾರಿ ಪ್ರೌಢಶಾಲೆ ನಗರ ಶಾಲೆಯ ಪ್ರಭಾರ ಮುಖ್ಯೋಧ್ಯಾಪಕ ಹಮ್ಮಣ್ಣ ನಾಯ್ಕ ರವರು ಪ್ರಸ್ತಾವಿಕವಾಗಿ ಮಾತನಾಡಿ 78 ನೇ ಸ್ವಾತಂತ್ರೋತ್ಸವದ ವೀರ ಯೋಧರ ತ್ಯಾಗ ಬಲಿದಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು . ಜೊತೆಗೆ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ನಮ್ಮ ದೇಶ ಚಿನ್ನದ ಸಾಧನೆ ಮಾಡದೆ ನಿರಾಶೆ ಮೂಡಿದ್ದು . ಕಡಿಮೆ ಜನಸಂಖ್ಯೆ ಇರುವ ಅಮೆರಿಕ ಚೀನಾ ಅತಿ ಹೆಚ್ಚು ಚಿನ್ನದ ಪದಕವನ್ನು ಗೆದ್ದು ತಮ್ಮ ಶಕ್ತಿ ಪ್ರದರ್ಶನವನ್ನು ತೋರಿದೆ.. ನಮ್ಮ ದೇಶದಲ್ಲೂ ಯುವಶಕ್ತಿ ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬಂದು ಮುಂಬರುವ ಒಲಂಪಿಕ್ಸ್ ನಲ್ಲಿ ಚಿನ್ನವನ್ನು ಗೆದ್ದು ಭಾರತೀಯ ಕೀರ್ತಿಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿ ಎಂದು ಸ್ಪೂರ್ತಿಯ ಮಾತುಗಳನ್ನು ಆಡಿದರು..ಸರ್ಕಾರಿ ಪ್ರೌಢಶಾಲೆ ನಗರದ ಎಸ್ ಡಿ ಎಂ ಸಿ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿದರು.
ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಸದಸ್ಯರಿಂದ& ವಿವಿಧ ಸಂಘ-ಸಂಸ್ಥೆಗಳ ದಾನಿಗಳು ಸರ್ಕಾರಿ ಹಿರಿಯ ಹಾಗೂ ಪ್ರೌಢಶಾಲೆ ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಿದರು.
ಸದರಿ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಮುಖ್ಯೋಧ್ಯಾಪಕರು,ಸಹ ಶಿಕ್ಷಕರು,ಸರಕಾರಿ ಪ್ರೌಢಶಾಲೆ ನಗರದ ಮುಖ್ಯೋಧ್ಯಾಪಕರು,ಸಹ ಶಿಕ್ಷಕರು,ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಮಕ್ಕಳ ಪಾಲಕರು, ಮಾನವ ಹಕ್ಕುಗಳ ರಕ್ಷಣಾ ಪರಿಷತ್ತಿನ ಸದಸ್ಯರು ಉಪಸ್ಥಿತರಿದ್ದರು.
ವರದಿ:
ಕಿರಣ ಚಂದ್ರಹಾಸ ಗಾಂವಕರ
ಅಂಕೋಲಾ
