ತೀವ್ರ ಕುತೂಹಲ ಕೆರಳಿಸಿದ ಅಂಕೋಲಾ ಪುರಸಭೆಯ ಅಧ್ಯಕ್ಷ ಪಟ್ಟ ಅಲಂಕರಿಸಿದ ಬಿಜೆಪಿಯ ಸೂರಜ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಶೀಲಾ ಶೆಟ್ಟಿ ಆಯ್ಕೆ..

bluechipinfosystem
2 Min Read

 19 Aug 2024, 03:00 pm, 1428 reads

ಅಂಕೋಲಾ :ಆ19.ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಗರಾಭಿವೃದ್ಧಿ ಇಲಾಖೆ ಮೀಸಲು ನಿಗದಿಪಡಿಸಿ ಆದೇಶ ಹೊರಡಿಸಿರುವ ಪರಿಣಾಮ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಂಕೋಲಾ ಪುರಸಭೆಯಲ್ಲಿ ಇಂದು ತೀವ್ರ ಪೈಪೋಟಿ ನಡೆದಿದೆ. ಕೊನೆಗೂ ಗದ್ದುಗೆ ಗುದ್ದಾಟಕ್ಕೆ ಅಂತ್ಯ ಬಿದ್ದಿದೆ. 

ಒಟ್ಟು 23 ಸದಸ್ಯರ ಪುರಸಭೆಯಲ್ಲಿ ಜಗದೀಶ ನಾಯಕ ಅಕಾಲಿಕ ನಿಧನದಿಂದ ಒಂದು ಸ್ಥಾನ ತೆರವಾಗಿದ್ದು. ಉಳಿದಂತೆ 22 ಸದಸ್ಯರಲ್ಲಿ ಬಿಜೆಪಿ 9. ಕಾಂಗ್ರೆಸ್ 9. ಪಕ್ಷೇತರರು 4  ನಿರ್ಣಾಯಕ ಸ್ಥಾನದಲ್ಲಿದ್ದರು. 

ಬಿ.ಜೆ.ಪಿ ಯಿಂದ ಅಧ್ಯಕ್ಷ ಸ್ಥಾನಕ್ಕೆ ಸೂರಜ ನಾಯ್ಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೀಲಾ ಶೆಟ್ಟಿ ಮತ್ತು ಕಾಂಗ್ರೆಸನಿಂದ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಗೌಡ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ನಾಯ್ಕ ನಾಮಪತ್ರ ಸಲ್ಲಿಸಿದ್ದರು..

ಆಯ್ಕೆ ಪ್ರಕ್ರಿಯೆ ವೇಳೆಗೆ ಬಿಜೆಪಿ ಓರ್ವ ಸದಸ್ಯ ನಾಗರಾಜ್ ಐಗಳ ಗೈರು ಹಾಜರಾದ ಪರಿಣಾಮ ಬಿಜೆಪಿ ಬೆಂಬಲಿತ 8 ಸದಸ್ಯರು ಹಾಗೂ ಪಕ್ಷೇತರ 3 ಸದಸ್ಯರು ಹಾಗೂ ಮಾನ್ಯ ಸಂಸದರು ಸೇರಿ ಸೂರಜ ನಾಯ್ಕ ಅವರಿಗೆ ಬೆಂಬಲಿಸುವುದರ ಮೂಲಕ 12 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು. 

 ಹಾಗೆ ಕಾಂಗ್ರೆಸ ಪಕ್ಷ 9 ಸದಸ್ಯರು +1 ಪಕ್ಷೇತರ ಸದಸ್ಯೆಯಾದ ರೇಖಾ ಗಾಂವಕರ ಮತ್ತು ಮಾನ್ಯ ಶಾಸಕರ ಮತ ಒಳಗೊಂಡು 11 ಮತ ಪಡೆದು 1 ಮತಗಳಿಂದ ಬಿಜೆಪಿ ಮುಂದೆ ಮುಗ್ಗರಿಸುವಂತಾಯ್ತು 

ನಿರ್ಣಾಯಕ ಸ್ಥಾನದಲ್ಲಿದ್ದ ಪಕ್ಷೇತರ ಮನವೊಲಿಸಲು ಅಷ್ಟೇನು ಸುಲಭದ ಕೆಲಸ ಆಗಿರಲಿಲ್ಲ. ಪಕ್ಷೇತರರಿಗೆ ಮನವಲಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತೀವ್ರ ಕಸರತ್ತು ಮಾಡಿದ್ದರೂ, ರಾಜಕೀಯ ಚತುರತೆಯನ್ನು ಹೊಂದಿದ್ದ ಸೂರಜ ನಾಯ್ಕ 3 ಪಕ್ಷೇತರರೂ ತಮ್ಮ ಕೈಯಿಂದ ಜಾರಿಕೊಳ್ಳದಂತೆ ತಮ್ಮ ಚಾಣಕ್ಯ ನಡೆಯನ್ನು ಅನುಸರಿಸಿದ್ದಾರೆ. ಅಂತೂ ನಿಕಟಪೂರ್ವ ಶಾಸಕಿ ರೂಪಾಲಿ ನಾಯ್ಕ ಅವರ ಆಪ್ತ ಬೆಂಬಲಿಗ , ಸೌಮ್ಯ ಸ್ವಭಾವಿ ಹಾಗೂ ನೇರ ನುಡಿಯ ಸೂರಜ ನಾಯ್ಕ ಪ್ರಥಮ ಬಾರಿಗೆ ಅಧ್ಯಕ್ಷರಾಗುವುದರ ಮೂಲಕ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿ ಮಾಡಿದ್ದಾರೆ. ಈ ಮೂಲಕ ನಾಮಧಾರಿ ಸಮುದಾಯದ ಯುವಕನ ಆಯ್ಕೆ ಸಮಾಜದ ಬಾಂಧವರಲ್ಲಿ. ಹಾಗೂ ಸೂರಜರವರ ಅಪಾರ ಗೆಳೆಯರ ಬಳಗದಲ್ಲಿ ಸಂತಸವನ್ನು ಉಂಟು ಮಾಡಿದೆ.

ಸೂರಜ ನಾಯ್ಕ ಅವರ ತಂದೆಯು ಪ್ರಭಾವಿ ರಾಜಕಾರಣಿಯಾಗಿದ್ದರೂ, ಇವರು ಹಲವು ಬಾರಿ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ತಂದೆಯ ದಾರಿಯಂತೆ ಮಗನು ಸತತ ಎರಡು ಬಾರಿ ವಾರ್ಡ್ ನಂಬರ 13 ರಿಂದ ಪುರಸಭೆಗೆ ಆಯ್ಕೆಯಾಗಿದ್ದು ಈ ಬಾರಿ ಅಧ್ಯಕ್ಷ ಗದ್ದುಗೆ ಏರಿರುವುದು ಒಂದು ಸಾಧನೆಯೇ ಸರಿ .

ಪುರಸಭೆಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಹಿಂದುಳಿದಿದ್ದು ಸೂರಜ ನಾಯ್ಕ ಇವರ ಅಧ್ಯಕ್ಷತೆಯಲ್ಲಿ ಪುರಸಭೆ ಇನ್ನಷ್ಟು ಅಭಿವೃದ್ಧಿಯನ್ನು ಕಾಣಬೇಕೆಂದು.. ಹದಗೆಟ್ಟಿರುವ ಆಡಳಿತ ಯಂತ್ರಾಂಗ ಸರಿದೂಗಿಸಲು ಕ್ರಮ ವಹಿಸಬೇಕು. ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕೆಂದು ಅಂಕೋಲಾ ಜನತೆಯು ಆಶಯವನ್ನು ವ್ಯಕ್ತಪಡಿಸಿದೆ. 

ಅಂಕೋಲಾ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿಯ ಪಾಲಾಗಿದ್ದು. ಈ ಮೂಲಕವಾಗಿ ನಿಕಟಪೂರ್ವ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ಸಂತೋಷ ನಾಯ್ಕ ಇವರ ವರ್ಚಸ್ಸು ಕೂಡ ಹೆಚ್ಚಾಗಿದೆ… ಪುರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ವಿಕಾಸ ವಾಹಿನಿ ಕೂಡ ಶುಭ ಕೋರುತ್ತದೆ

Share This Article
Leave a Comment