ಅಂಕೋಲಾದ ಶ್ರೀ ಗಜಾನನ ಟ್ಯಾಕ್ಸಿ ಮಾಲಕರ ಹಾಗೂ ಚಾಲಕರ ಸಂಘ(ರಿ )ದಿಂದ ಭಾವಪೂರ್ಣವಾಗಿ 70ನೇ ಕನ್ನಡ ರಾಜ್ಯೋತ್ಸವ ಆಚರಣೆ..

News Desk
1 Min Read

ಅಂಕೋಲಾ, ನ.1: ಅಂಕೋಲಾದ ಶ್ರೀ ಗಜಾನನ ಟ್ಯಾಕ್ಸಿ ಮಾಲಕ ಹಾಗೂ ಚಾಲಕರ ಸಂಘದ ವತಿಯಿಂದ ಇಂದು ಭಾವಪೂರ್ಣವಾಗಿ 70ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಟ್ಯಾಕ್ಸಿ ನಿಲ್ದಾಣದಲ್ಲಿರುವ ಪವಿತ್ರ ಸ್ಥಳದಲ್ಲಿರುವ ಅಶ್ವತ್ಥ ಕಟ್ಟೆಗೆ ತೋರಣ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಭಕ್ತಿ ಭಾವದಿಂದ ಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ತಾಯಿ ಭುವನೇಶ್ವರಿಯ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

ರಾಜ್ಯೋತ್ಸವದ ಹರ್ಷೋತ್ಸವದ ಭಾಗವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ತಮ್ಮ ಸಂಘದ ವತಿಯಿಂದ ಚಾಕ್ಲೇಟುಗಳನ್ನು ವಿತರಿಸಿ, ಸಂತೋಷ ಹಂಚಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಮಾಕಾಂತ್ ಎಂ. ನಾಯ್ಕ (ಗಜು) ಮಾತನಾಡಿ, “ಕನ್ನಡ ನಮ್ಮ ಮಾತ್ರ ಭಾಷೆ, ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಹಬ್ಬವಲ್ಲ; ಇದು ಕನ್ನಡಿಗರ ಗೌರವ, ಆತ್ಮಾಭಿಮಾನ ಮತ್ತು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ. ನಾವು ಎಲ್ಲೆಡೆ ಕನ್ನಡ ಮಾತನಾಡಿ, ಕನ್ನಡದಲ್ಲಿ ಕೆಲಸ ಮಾಡಿದಾಗ ಮಾತ್ರ ನಿಜವಾದ ರಾಜ್ಯೋತ್ಸವವನ್ನು ಆಚರಿಸಿದಂತೆ ಆಗುತ್ತದೆ,” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಕ್ಷಯ, ವಿವೇಕ, ಶ್ರೀನಿವಾಸ, ಪ್ರವೀಣ ಕೇಣಿ, ನಿತ್ಯಾನಂದ ಹನುಮಟ್ಟ, ಮಾರುತಿ ನಾಯ್ಕ್, ಚಂದ್ರಹಾಸ, ಪ್ರಕಾಶ, ಕೃಷ್ಣ, ಗುರು, ಗಣೇಶ್ ಗೌಡ, ಸತೀಶ, ನಾಗರಾಜ ನದಿಬಾಗ, ಮೋಹನ್, ಅಜಿತ, ವಿನಾಯಕ ಕಲಬಾಗ್, ಹರೀಶ, ಗಣೇಶ ನಾಯ್ಕ, ರಾಘು ಪುರಲಕ್ಕಿ ಬೇಣ ಮತ್ತು ಉದಯ ಮಂದಾರ ರವರು ಉಪಸ್ಥಿತರಿದ್ದರು.

ಕನ್ನಡ ರಾಜ್ಯೋತ್ಸವವು 1956ರ ನವೆಂಬರ್ 1ರಂದು ಕರ್ನಾಟಕ ರಾಜ್ಯವು ಎಲ್ಲ ಕನ್ನಡನಾಡುಗಳನ್ನು ಒಂದಾಗಿ ಸೇರಿಸಿಕೊಂಡ ದಿನದ ಸಂಭ್ರಮವಾಗಿದೆ. ಈ ಹಬ್ಬವು ಕನ್ನಡಿಗರ ಐಕ್ಯತೆ, ಸಂಸ್ಕೃತಿ, ಭಾಷಾ ಹೆಮ್ಮೆ ಮತ್ತು ರಾಜ್ಯದ ಪ್ರಗತಿಯ ಸಂಕೇತವಾಗಿದೆ. ಪ್ರತಿವರ್ಷ ಈ ದಿನವು ರಾಜ್ಯದಾದ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದ್ದು, ಕನ್ನಡದ ಗೌರವವನ್ನು ಹೊಸ ಪೀಳಿಗೆಗೆ ಸಾರುವ ದಿನವಾಗಿ ಪರಿಣಮಿಸಿದೆ.

Share This Article