ಶಿಕ್ಷಣ ಸೇವೆಗೆ ನಮನ – ಹಟ್ಟಿಕೇರಿ ಶಾಲೆಯ ಶಿಕ್ಷಕಿ ನಾಗರತ್ನ ಎಸ್ ನಾಯಕ್ ಅವರ ನಿವೃತ್ತಿ ಸಮಾರಂಭ ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು..

News Desk
2 Min Read

ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜುಲೈ 31ರಂದು ಶಿಕ್ಷಕಿ ಶ್ರೀಮತಿ ನಾಗರತ್ನ ಎಸ್. ನಾಯಕ ಅವರ ನಿವೃತ್ತಿ ಸಮಾರಂಭವು ಭಾವುಕ ಹಾಗೂ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಭಾರತಿ ಬಿ. ನಾಯಕ ವಹಿಸಿದ್ದು, ಮುಖ್ಯೋದ್ಯಾಪಕಿ ನಿರ್ಮಲ ಬಿ. ಆಗೇರ ಅವರು ಅತಿಥಿಗಳಿಗೆ ಹೃತ್ಪೂರ್ವಕವಾಗಿ ಸ್ವಾಗತ ಕೋರಿದರು.

ವೇದಿಕೆಯಲ್ಲಿ ನಿವೃತ್ತಿ ಹೊಂದುತ್ತಿರುವ ನಾಗರತ್ನ ಎಸ್. ನಾಯಕ ಅವರ ಜೊತೆಗೆ ಪತಿ ಪ್ರಕಾಶ ಎ. ನಾಯಕ, ಪುತ್ರಿಯರಾದ ಸಹನಾ ಮತ್ತು ಅಂಜನಾ, ಹಟ್ಟಿಕೇರಿ ಗ್ರಾ.ಪಂ ಉಪಾಧ್ಯಕ್ಷೆ ಮಾನಸ ಮಹೇಶ್ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ದಿಲೀಪ್ ಜೆ. ನಾಯ್ಕ, ಪ್ರಾಥಮಿಕ ಶಾಲಾ ಸಂಘದ ಕಾರ್ಯದರ್ಶಿ ರಾಜು ನಾಯಕ, ನಿವೃತ್ತ ಮುಖ್ಯಶಿಕ್ಷಕರು ತಿಮ್ಮಣ್ಣ ನಾಯಕ, ನಿವೃತ್ತ ಶಿಕ್ಷಕಿ ಪುಷ್ಪ ಜಿ. ನಾಯಕ, ಹಳೆ ವಿದ್ಯಾರ್ಥಿಗಳಾದ ಪ್ರಸಾದ್ ಪಾಟೀಲ್, ರಾಜೇಶ್ ಸಿ. ನಾಯ್ಕ, ರವಿ ವೇಣು ನಾಯ್ಕ, ಹೇರಂಬಾ ನಾಯ್ಕ ಇವರುಗಳು ಉಪಸ್ಥಿತರಿದ್ದರು.

💬 ಎಸ್‌ಡಿಎಂಸಿ ಅಧ್ಯಕ್ಷ ದಿಲೀಪ್ ಜೆ. ನಾಯ್ಕ ಭಾಷಣದ ವೇಳೆ ಹೇಳಿದರು:“ಶ್ರೀಮತಿ ನಾಗರತ್ನ ಎಸ್. ನಾಯ್ಕ ಅವರು ಯಾವುದೇ ವಿಷಯ ವನ್ನಾಗಲಿ ನೇರವಾಗಿ ಮಾತನಾಡುವುದರ ಮುಖಾಂತರ ನನಗೂ ಕೂಡ ಅದೇ ಪ್ರೇರಣೆ ನೀಡಿದರು. ನೀವು ಈಗ ನಿವೃತ್ತಿ ಹೊಂದುತ್ತಿರು ವುದರಿಂದ ಮುಂದೆ ಬರುವ ಶಿಕ್ಷಕರು ನಿಮ್ಮಂತೆ ಪ್ರೇರಣಾದಾಯಕ, ಹಿರಿಯರಿಗೆ ಗೌರವ ಕೊಡುವ ಹಾಗೆಯೇ ಕಿರಿಯರಿಗೂ ಮಾನವೀಯತೆ ತೋರಿಸುವ ಶಿಕ್ಷಕರಾಗಲಿ. ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇನೆ.”

💬 ನಾಗರತ್ನ ಎಸ್. ನಾಯ್ಕ ಅವರು ತಮ್ಮ ಭಾಷಣದಲ್ಲಿ ಭಾವನಾತ್ಮಕವಾಗಿ ಹೇಳಿದರು:“ನಾನು 31 ವರ್ಷಗಳ ಕಾಲ ಸೇವೆ ಸಲ್ಲಿಸಿ, ಈ ಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದೆ. ಇಲ್ಲಿ ಯಾವುದೇ ಕೊರತೆಯಿಲ್ಲದೆ ಸಮರ್ಪಕವಾಗಿ ಕಾರ್ಯನಿರ್ವಹಿಸಿ, ಇದೇ ಶಾಲೆಯಲ್ಲಿ ನಿವೃತ್ತಿ ಹೊಂದುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ.”

ಈ ಕಾರ್ಯಕ್ರಮದಲ್ಲಿ ಅವರ ಹಳೆ ವಿದ್ಯಾರ್ಥಿಗಳಾದ ಮುಂಡಗೋಡ ತಾಲೂಕಿನ ಕೂಸುರು ಗ್ರಾಮದ ರಾಮಕೃಷ್ಣ ರಾಯ್ಕರ್ ಇದ್ದರು. ಜಯಶೀಲ್ ಆಗೇರ, ನವೀನ್ ಆಗೇರ, ಮಹೇಶ್ ರಾಮಚಂದ್ರ ನಾಯ್ಕ, ಶಾಲೆಯ ಎಸ್‌ಡಿಎಂಸಿ ಸದಸ್ಯರು, ಲಂಬೋದರ ವೆಂಕಟರಮಣ ನಾಯ್ಕ್, ದೇವೇಂದ್ರ ಕೇಶವ ನಾಯ್ಕ್, ವಿನಾಯಕ ನಾಗರಾಜ್ ನಾಯ್ಕ್, ಮತ್ತು ಮಕ್ಬುಲ್ ಸಭಾಯಿ.ಶಾಲೆಯ ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಮಕ್ಕಳ ಪಾಲಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಅತಿಥಿ ಶಿಕ್ಷಕಿ ಭಾಗ್ಯಶ್ರೀ ರಮೇಶ್ ನಾಯ್ಕ ಅವರು ಎಲ್ಲ ಅತಿಥಿಗಳಿಗೆ ಧನ್ಯವಾದ ಅರ್ಪಿಸಿ ಸಮಾರಂಭವನ್ನು ಯಶಸ್ವಿಯಾಗಿ ಮುಕ್ತಾಯ ಗೊಳಿಸಿದರು.

Share This Article