ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಂಕೋಲಾ ಘಟಕ: ನಾಲ್ವರು ನೌಕರರಿಗೆ ನಿವೃತ್ತಿ ಬೀಳ್ಕೊಡುಗೆ..

News Desk
2 Min Read

ಅಂಕೋಲಾ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಂಕೋಲ ಘಟಕದಲ್ಲಿ ಮೇ 31, 2025ರಂದು ನಾಲ್ವರು ನೌಕರರಿಗೆ ಬೀಳ್ಕೊಡುಗೆ ಸಮಾರಂಭವು ಭಾವಪೂರ್ಣವಾಗಿ ನಡೆಯಿತು. ವರ್ಷಗಳ ಶ್ರಮದ ಸೇವೆಗೆ ಗೌರವ ಸಲ್ಲಿಸುವ ಈ ಸಂದರ್ಭದಲ್ಲಿ ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳ ಸಾನ್ನಿಧ್ಯದಲ್ಲಿತ್ತು.

ನಿವೃತ್ತಿ ಹೊಂದಿದ ಸಿಬ್ಬಂದಿ ವಿವರಗಳು:

1. ಬೊಮ್ಮಯ್ಯ ಆರ್. ಪಟಗಾರ , ತಾಂತ್ರಿಕ ವಿಭಾಗದ ನೌಕರರು, ದೇವರ ಬಾವಿ – ತೊರ್ಕೆ ಗ್ರಾಮದವರಾಗಿದ್ದು, ಸಂಸ್ಥೆಯಲ್ಲಿ ಸರಾಸರಿ 40 ವರ್ಷಗಳ ದೀರ್ಘ ಸೇವೆ ಸಲ್ಲಿಸಿದ್ದಾರೆ.

2. ದಯಾನಂದ ಜಿ. ನಾಯ್ಕ, ಹಟ್ಟಿಕೇರಿ ಗ್ರಾಮದವರು, ತಾಂತ್ರಿಕ ವಿಭಾಗದಲ್ಲಿ 28 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

3. ಪ್ರೇಮಾನಂದ ಟಿ. ನಾಯ್ಕ, ಕಣಗಿಲ್ಲ ಗ್ರಾಮದಿಂದ, ಚಾಲಕರಾಗಿ 32 ವರ್ಷಗಳ ಸೇವೆ ನೀಡಿದ್ದಾರೆ. ಅಪಘಾತರಹಿತ ಚಾಲನೆಗಾಗಿ ಮತ್ತು ಶಿರಶಿ ವಿಭಾಗದಿಂದ ಇಂಧನ ಉಳಿತಾಯ ಸಾಧನೆಗಾಗಿ ದ್ವಿ-ಬೆಳ್ಳಿ ಪದಕ ಪ್ರಶಸ್ತಿ ಪಡೆದಿದ್ದಾರೆ.

4. ದೇವಣ್ಣ ಕೆ. ನಾಯ್ಕ, ಹಿಚ್ಕಡ್ ಗ್ರಾಮದವರು, ನಿರ್ವಾಹಕರಾಗಿ 27 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ ಅವರು ಮಾತನಾಡಿ, “ಈ ನಾಲ್ವರು ಹಿರಿಯ ನೌಕರರು ನನಗಿಂತ ವಯಸ್ಸಿನಲ್ಲಿ ಹಿರಿಯರು. ಅವರಿಂದ ತಾಳ್ಮೆ, ಶ್ರದ್ಧೆ ಮತ್ತು ಕರ್ತವ್ಯನಿಷ್ಠೆ ಕಲಿತಿದ್ದೇವೆ. ಅವರ ಯಶಸ್ಸು ಹಿಂದಿರುವ ಧರ್ಮಪತ್ನಿಯರ ಪಾತ್ರವೂ ಮಹತ್ತರವಾಗಿದೆ. ಅವರ ಮುಂದಿನ ಹಾದಿ ಸುಖಕರವಾಗಿರಲಿ” ಎಂದು ಶುಭ ಹಾರೈಸಿದರು.

ಸಹಾಯಕ ಸಂಚಾರ ಅಧೀಕ್ಷಕ ಶಿವಾನಂದ ನಾಯ್ಕ ಅವರು, “ಈ ನಾಲ್ವರು ಸಿಬ್ಬಂದಿಗಳು ಸಂಸ್ಥೆಯ ಬೆಳೆವಣಿಗೆಗೆ ಬಹುಮೂಖ್ಯ ಪಾತ್ರವಹಿಸಿದ್ದಾರೆ. ಅವರಿಂದ ನಮಗೆ ಕಾಯಕದ ಅರ್ಥವನ್ನೂ ನಿಷ್ಠೆಯ ಬಲವನ್ನೂ ಅರಿಯಲು ಸಾಧ್ಯವಾಯಿತು. ಇವರೆಲ್ಲರ ಸೇವೆ ಸಾರಿಗೆ ಸಂಸ್ಥೆಯ ಶ್ರೇಷ್ಠತೆಗೆ ಕಾರಣವಾಗಿದೆ. ಸಂಸ್ಥೆಯ ಹೆಗ್ಗುರುತು ಇವರ ಶ್ರಮ” ಎಂದರು.

ಪತ್ರಕರ್ತ ಸಂಘದ ಗೌರವಾಧ್ಯಕ್ಷ ರಾಘು ಕಾಕರ್ ಮಠ ಅವರು, “ಇವರು ಸಮುದ್ರದಲ್ಲಿ ಈಜು ಹಿಡಿದು ದಡ ತಲುಪಿದವರಂತೆ – ಶ್ರಮದ ತಲ್ಲೀನತೆ, ಸವಾಲುಗಳ ನಿರ್ವಹಣೆಯಲ್ಲಿ ತಮ್ಮನ್ನು ತಾವು ತೋರ್ಪಡಿಸಿದ್ದಾರೆ. ಇವರ ನಿವೃತ್ತಿ ಜೀವನವೂ ಯಶಸ್ವಿಯಾಗಲಿ” ಎಂದು ಹೇಳಿದರು.

ಸ್ಮರಣೀಯ ಕ್ಷಣ:

ನಿವೃತ್ತ ನೌಕರರಿಗೆ ಮೈಸೂರು ಪೇಟ, ಶಾಲು, ಸ್ಮರಣಿಕೆ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅವರ ಧರ್ಮಪತ್ನಿಯರೂ ಸಹ ಭಾಗವಹಿಸಿದ್ದರು.

ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟಕದ ಅಧಿಕಾರಿಗಳಾದ ರವಿ ನಾಯ್ಕ, ಸಂತೋಷ ನಾಯಕ, ನಾರಾಯಣ ಹುಲುಸ್ವಾರ್, ನಾಗೇಶ್ ನಾಯ್ಕ, ವಿನಾಯಕ ನಾಯ್ಕ, ವೆಂಕಟರಮಣ ನಾಯ್ಕ, ಮಹಾಲಕ್ಷ್ಮಿ ನಾಯ್ಕ, ವೇದ ನಾಯ್ಕ, ಪ್ರತಿಮಾ ಶೆಟ್ಟಿ, ಶಶಿಕಲಾ ಗೌಡ, ಏಜಾಜ್ ಖಾನ್ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರ್ವಹಣೆ:

ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ದಿಲೀಪ್ ನಾಯ್ಕ ಹಾಗೂ ಚಾಲಕರಾದ ರಾಜೇಶ್ ನಾಯಕ ಅವರು ಕಾರ್ಯಕ್ರಮದ ವ್ಯವಸ್ಥಾಪನೆಯನ್ನು ಮುಂದಾಳುತ್ವ ವಹಿಸಿದ್ದರು. ಎಸ್.ಆರ್. ಬಂಟರವರು ಸಮಾರಂಭದ ನಿರೂಪಣೆಯನ್ನು ಮಾಡಿದರು. ಮಹಾಲಕ್ಷ್ಮಿ ಎಲ್. ನಾಯ್ಕ ಅವರು ವಂದನಾರ್ಪಣೆ ಸಲ್ಲಿಸಿದರು..

Share This Article
Leave a Comment