ಅಂಕೋಲಾ ಮಾರುಕಟ್ಟೆಗೆ ‘ESATHI’ ಎಲೆಕ್ಟ್ರಿಕ್ ರಿಕ್ಷಾ – ಕಡಿಮೆ ಖರ್ಚು, ಹೆಚ್ಚಿನ ಆದಾಯದ ಹೊಸ ಆಸರೆ..!

News Desk
1 Min Read

ಅಂಕೋಲಾ: ತಾಂತ್ರಿಕ ಅಭಿವೃದ್ಧಿಯ ಹೆಜ್ಜೆಗೆ ಹೆಜ್ಜೆ ಇಡುತ್ತಿರುವ ಅಂಕೋಲಾ ತಾಲೂಕಿನ ಕೇಣಿ ಗ್ರಾಮದ ಯುವಕ ಸದಾನಂದ ಆನಂದ ನಾಯ್ಕ, ಗ್ರಾಮೀಣ ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಹೊಸ ಉತ್ಸಾಹದ ಹರಿಕಾರರಾಗಿದ್ದಾರೆ. ಮುಂಬೈ, ಕಾಶಿ, ಅಯೋಧ್ಯೆ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುವ E SATHI ಎಲೆಕ್ಟ್ರಿಕ್ ರಿಕ್ಷಾವನ್ನು ಮೊದಲ ಬಾರಿಗೆ ಅಂಕೋಲಕ್ಕೆ ತಂದು ವಿಶೇಷ ಗಮನ ಸೆಳೆದಿದ್ದಾರೆ.

ಅನುಭವದಿಂದ ಉದಯವಾದ ಕಲ್ಪನೆ

ಒಂದು ವರ್ಷ ಹಿಂದೆ ಯಾತ್ರಾ ಪ್ರಯಾಣದಲ್ಲಿದ್ದ ಸದಾನಂದ ನಾಯ್ಕ ಅವರಿಗೆ ಅಲ್ಲಿ ವಿದ್ಯುತ್ ಚಾಲಿತ ಈ ತ್ರಿಚಕ್ರ ವಾಹನದ ಬಳಕೆ ಚಿತ್ತ ಆಕರ್ಷಣೆಯಾಯಿತು. ಕಡಿಮೆ ನಿರ್ವಹಣೆಯ ಖರ್ಚು, ಹೆಚ್ಚು ಲಾಭದ ಆದಾಯ, ಮಾಲಿನ್ಯವಿಲ್ಲದ ಸಾರಿಗೆ ಎಂಬ ವಿಶಿಷ್ಟ ಲಕ್ಷಣಗಳಿಂದ ಪ್ರೇರಿತನಾಗಿ ಈ ವಾಹನವನ್ನು ತಮ್ಮ ಊರಿಗೆ ತರಲು ನಿರ್ಧಾರ ಮಾಡಿದರು. ಕೊನೆಗೂ ಬಂಡಿಹಬ್ಬದ ಪವಿತ್ರ ದಿನ ಅಂಕೋಲದ ಬೀದಿಗಳಿಗೆ ಈ ಹೊಸತ್ತನು ಪರಿಚಯಿಸಿದರು.

ESATHI ಎಲೆಕ್ಟ್ರಿಕ್ ರಿಕ್ಷಾದ ವೈಶಿಷ್ಟ್ಯಗಳು:

ಬ್ಯಾಟರಿ ಸಾಮರ್ಥ್ಯ: 4

ಬ್ಯಾಟರಿಗಳೊಂದಿಗೆ ಬರುತ್ತದೆ . 8 ಗಂಟೆ ಚಾರ್ಜ್ ಮಾಡಿದರೆ ಸುಮಾರು 120 ಕಿಮೀ ದೂರ ಓಡುತ್ತದೆ.

ಯಾತ್ರಿಕ ಸಾಮರ್ಥ್ಯ: ಒಟ್ಟು 8 ಮಂದಿ ಕುಳಿತುಕೊಳ್ಳುವ ವ್ಯವಸ್ಥೆ.

ವೇಗ : ಗರಿಷ್ಠ ವೇಗ 40 ಕಿಮೀ/ಗಂಟೆ.

ಇತರೆ ಅಂಶಗಳು: ಸೌಂಡ್ ಸಿಸ್ಟಮ್, ಹ್ಯಾಂಡ್ ಬ್ರೇಕ್, ಮ್ಯಾಗ್ ವೀಲ್, ಸ್ಟೀಲ್ ಬಾಡಿ, ವಿಶಿಷ್ಟ ಹಳದಿ-ಹಸಿರು ಬಣ್ಣ, ಮತ್ತು ಆಕರ್ಷಕ ವಿನ್ಯಾಸ.

ಬೆಲೆ : ತಾತ್ಕಾಲಿಕ ಪಾಸಿಂಗ್ ಸೇರಿ ಸುಮಾರು ₹2,30,000/-.

ಸ್ವ ಉದ್ಯೋಗಕ್ಕೆ ಉತ್ತಮ ಆಯ್ಕೆ

ಈ ವಾಹನವನ್ನು ಬಳಸಿ ಇತರ ಯುವಕರೂ ತಮ್ಮ ಸ್ವ ಉದ್ಯೋಗ ಆರಂಭಿಸಬಹುದಾದ್ದರಿಂದ ಗ್ರಾಮೀಣ ಉದ್ಯೋಗ ಕ್ಷೇತ್ರದಲ್ಲಿ ಹೊಸ ಬೆಳಕನ್ನು ಎರೆದಿರುವ ಉದಾಹರಣೆ ಇದು. ಸದಾನಂದ ನಾಯ್ಕರ ಜತೆಗೆ ನೂರಾರು ಜನರ ಆತ್ಮೀಯ ಬೆಂಬಲ, ಸ್ಪೂರ್ತಿ ನೀಡುವಂತಹದ್ದಾಗಿದೆ.

ಸಂಪರ್ಕಿಸಲು: ಸದಾನಂದ ಆನಂದ ನಾಯ್ಕ
ದುರ್ಗಾಂಬ ಆಟ್ಸ್, ಕಾಕರಮಠ
ದೂರವಾಣಿ: 70193 99781

Share This Article
Leave a Comment