ಭಟ್ಕಳದಲ್ಲಿ ಗರ್ಭಿಣಿ ಹಸುವನ್ನು ಮಾಂಸಕ್ಕಾಗಿ ಕೊಂದರೆ ಪಾಪಿಗಳು..?!..

News Desk
1 Min Read

ಭಟ್ಕಳ : ಈ ಹಿಂದೆ ಹೊನ್ನಾವರದ ಗರ್ಭಿಣಿ ಹಸುವನ್ನು ಕೊಂದು ಕರುವನ್ನು ಬಿಸಾಡಿ ಮಾಂಸವನ್ನು ಭಟ್ಕಳದ ಮದುವೆ ಮನೆಗೆ ಸಾಗಿಸಿದ ಘಟನೆ ಇನ್ನೂ ಮರೆಯುವುದರೊಳಗೆ ಇನ್ನೊಂದು ಗರ್ಭಿಣಿ ಹಸುವನ್ನು ಕೊಂದಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ಭಟ್ಕಳದ ವೆಂಕಟಾಪುರ ನದಿ ದಡದಲ್ಲಿ ಯಾರೋ ಕಟುಕರು ಹಸುವಿನ ಕರುವನ್ನು ಗೋಣಿಚೀಲದಲ್ಲಿ ಸುತ್ತಿ ಬಿಸಾಡಿದ್ದಾರೆ.. ಗೋಣಿಚಿಲವನ್ನು ಬೀದಿನಾಯಿಗಳು ಎಳೆದಾಡುತ್ತಿರುವಾಗ ಸತ್ತ ಹಸುವಿನ ಕರು ಚೀಲದಲ್ಲಿರುವುದು ಪತ್ತೆಯಾಗಿದೆ. ನದಿ ದಡದಲ್ಲಿ ಗೋಣಿಚೀಲದಲ್ಲಿದ್ದ ಸತ್ತ ಕರುವಿನ ಸುದ್ದಿ ತಿಳಿದು ಭಟ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಗರ್ಭಿಣಿ ಹಸುವಿನ ಹತ್ಯೆ ಬಗ್ಗೆ ತಿಳಿದು ಸ್ಥಳೀಯರು ಹಾಗೂ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊನ್ನಾವರ ಗರ್ಭಿಣಿ ಹಸುವಿನ ಹತ್ಯೆ ಪ್ರಕರಣವನ್ನು ಬೇದಿಸಿ ಆರೋಪಿಗಳ ಹೆಡೆಮುರಿ ಕಟ್ಟುವುದರಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಹಾಗೆಯೇ ಹೊನ್ನಾವರ ಹಾಗೂ ಭಟ್ಕಳದಲ್ಲಿ ಗೋಹತ್ಯೆ ಪ್ರಕರಣ ಬಹಳಷ್ಟು ಕೇಳಿಬರುತ್ತಿದ್ದು, ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಾಗಿದೆ ಎನ್ನುವುದು ಜನರ ಅಭಿಪ್ರಾಯ ಹಾಗೂ ಆಶಯವಾಗಿದೆ.

……

Share This Article
Leave a Comment