ಸರ್ಕಾರಿ ಕಚೇರಿಗೆ ಸಾರ್ವಜನಿಕರು ಸಲ್ಲಿಸಿದ ಯಾವುದೇ ದೂರು- ವಿನಂತಿ ಅರ್ಜಿಯ ಮೇಲೆ ಕೈಗೊಂಡ ಕ್ರಮದ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿದಾರ ಕೋರಿದರೆ ಅಂತಹ ಮಾಹಿತಿ ಒದಗಿಸಲೇಬೇಕು..

News Desk
2 Min Read

ಅಂಕೋಲಾ : ಸರ್ಕಾರಿ ಕಚೇರಿ ಎಂದ ಮೇಲೆ ಸಾರ್ವಜನಿಕರು ತಮ್ಮ ವಿವಿಧ ಬೇಡಿಕೆ ವಿವಿಧ ಸಮಸ್ಯೆಗಳನ್ನು ಪತ್ರದ ಮೂಲಕ ಸರ್ಕಾರಿ ಕಚೇರಿಗೆ ಸಲ್ಲಿಸುತ್ತಾರೆ. ಆದರೆ ಕೆಲವೊಮ್ಮೆ ಆ ಪತ್ರಗಳು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯಾವುದೇ ಕ್ರಮವಾಗದೆ ಕಸದ ಬುಟ್ಟಿಗೆ ಸೇರುವುದೇ ಹೆಚ್ಚು..

ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ನಿಮ್ಮ ಅರ್ಜಿಯ ಕ್ರಮದ ಕುರಿತು ಮಾಹಿತಿ ಪಡೆಯಬಹುದಾಗಿದೆ..

ಸಾಕಷ್ಟು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪತ್ರದ ಮೂಲಕ ಸರ್ಕಾರಿ ಕಚೇರಿಗೆ ರವಾನೆಯಾದಗ ಒಂದು ವಾರದಲ್ಲಿ ಅಥವಾ ಒಂದು ತಿಂಗಳಿನಲ್ಲಿ ಯಾವುದೇ ಕ್ರಮವನ್ನು ಜರುಗಿಸದೆ ಇರುವ ಪಕ್ಷದಲ್ಲಿ ಕೂಡಲೇ ಮಾಹಿತಿ ಹಕ್ಕು ಅಧಿನಿಯಮವನ್ನು ಬಳಸಿ ನಿಮ್ಮ ಅರ್ಜಿಗೆ ಕೈಗೊಂಡ ಕ್ರಮದ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ.

ಕೆಲವೊಂದು ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಅಧಿನಿಯಮದಲ್ಲಿಯೂ ಕೂಡ ಅರ್ಜಿದಾರನಿಗೆ ಮಾಹಿತಿ ಹಕ್ಕು ದೊರಕಿಸದೆ ಒಂದಕ್ಕೊಂದು ಸಂಬಂಧವಿಲ್ಲದ ಹಿಂಬರಹವನ್ನು ನೀಡುತ್ತಿದ್ದಾರೆ.

ಸರ್ಕಾರಿ ಕಚೇರಿಯ ವ್ಯಾಪ್ತಿಯಲ್ಲಿ ಅನಧಿಕೃತ ಕಾರ್ಯ ಚಟುವಟಿಕೆ ವಿರುದ್ಧ ಅರ್ಜಿದಾರರು ದೂರು ನೀಡಿದಾಗ ಸಾರ್ವಜನಿಕ ಪ್ರಾಧಿಕಾರವು ಸಾರ್ವಜನಿಕರ ಅರ್ಜಿಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಪಕ್ಷದಲ್ಲಿ.. ಮಾಹಿತಿ ಹಕ್ಕು ಅಧಿನಿಯಮದಡಿ ಕೈಗೊಂಡ ಕ್ರಮದ ಕುರಿತು ಅರ್ಜಿದಾರನು ಮಾಹಿತಿ ಕೋರಿದಾಗ ಅದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ದೂರು ಅರ್ಜಿಯ ಮೇಲೆ ಕ್ರಮವನ್ನು ಕೈಗೊಂಡ ಕುರಿತು ಮಾಹಿತಿಯನ್ನು ಒದಗಿಸಲೇ ಬೇಕಾಗಿರುತ್ತದೆ.

ಈ ಬಗ್ಗೆ ಕರ್ನಾಟಕ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ಸಂಖ್ಯೆ 17103/2009(GM-RES) ಶ್ರೀ ಕೆ ಮಹೇಶ ವಿರುದ್ಧ ಎಲ್ ಐ ಸಿ ಪ್ರಕರಣ ದ ತೀರ್ಪಿನ ಪ್ರಕಾರ ಅರ್ಜಿದಾರರನ್ನು ನೀಡಿದ ದೂರು ಅರ್ಜಿಯ ಮೇಲೆ ಕೈಗೊಂಡ ಕ್ರಮದ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಕೇಳಿದಾಗ ಉತ್ತರ ನೀಡಲೇ ಬೇಕಾಗಿರುತ್ತದೆ ಎಂದು ನಿರ್ದೇಶನ ನೀಡಿರುವುದನ್ನು ತಿಳಿಸಿದೆ.

ಆಡಳಿತದಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತವನ್ನು ಬಯಲು ಮಾಡಲು ಹೋರಾಡುತ್ತಿರುವ ಮಾಹಿತಿ ಹಕ್ಕು ಬಳಕೆದಾರರು ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಜೊತೆಗೆ ಈ ಮೇಲಿನ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿರ್ದೇಶನದ ಕುರಿತಂತೆ ಮಾಹಿತಿ ಹಕ್ಕು ಬಳಕೆದಾರರಿಗೆ ಕ್ರಮದ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಪಡೆಯಲು ಅನುಕೂಲವಾಗಲಿದೆ….

Share This Article
Leave a Comment