
ಅಂಕೋಲಾ : ಆರ್. ವಿ ದೇಶಪಾಂಡೆಯವರ 78ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆರ್. ವಿ. ದೇಶಪಾಂಡೆಯವರ ಆಪ್ತರಾದ ಮುರಳೀಧರ ನಾಯಕ ಹಾಗೂ ಅವರ ಸ್ನೇಹಿತರು ಅಜ್ಜಿಕಟ್ಟದಲ್ಲಿರುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಹಿರಿಯರೊಂದಿಗೆ ಕೆಲ ಕಾಲ ಕಳೆದು, ಕೇಕ್ ಕತ್ತರಿಸುವ ಮೂಲಕ ಆರ್. ವಿ ದೇಶಪಾಂಡೆಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು, ತದನಂತರ ಊಟ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಈ ಸಮಯದಲ್ಲಿ ಮುರುಳಿಧರ ನಾಯಕರವರು ಆರ್. ವಿ. ದೇಶಪಾಂಡೆಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಆರ್. ವಿ ದೇಶಪಾಂಡೆಯವರು ಒಂಭತ್ತು ಬಾರಿ ಹಳಿಯಾಳ – ಜೊಯಿಡಾ ಕ್ಷೇತ್ರದ ಶಾಸಕರಾಗಿ ತಮ್ಮ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.

ಅಷ್ಟೇ ಅಲ್ಲದೇ ಇವರು ರಾಜಕೀಯದಲ್ಲಿ ಕಂದಾಯ ಸಚಿವರಾಗಿ, ಪ್ರವಾಸೋದ್ಯಮ ಸಚಿವರಾಗಿ, ಕೈಗಾರಿಕಾ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಇವರ ರಾಜಕೀಯ ಕ್ಷೇತ್ರದಲ್ಲಿ ಕೊಡುಗೆ ಅಪಾರ. ಪ್ರವಾಸೋದ್ಯಮ, ಶಿಕ್ಷಣ, ಕೈಗಾರಿಕಾ ಕ್ಷೇತ್ರ, ಉದ್ಯೋಗ ಸೃಷ್ಟಿ, ಕಲೆ-ಸಂಸ್ಕೃತಿ, ಮಹಿಳಾ ಸಬಲೀಕರಣ, ವಿಚಾರದಲ್ಲಿ ಇಂದು ಹಳಿಯಾಳ – ಜೊಯಿಡಾ ಕ್ಷೇತ್ರ ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿದೆ ಎಂದರೆ ಅದು ಆರ್. ವಿ ದೇಶಪಾಂಡೆಯವರ ನಾಯಕತ್ವದಿಂದ ಎಂದು ಹೇಳಿದರು.
ಮುಂದುವರೆದು, ನನ್ನೆಲ್ಲಾ ಸಾಧನೆಗಳಿಗೂ ನನ್ನ ಗುರುಗಳಾದಂತಹ ಶ್ರೀ ಆರ್. ವಿ ದೇಶಪಾಂಡೆಯವರೇ ಕಾರಣ ಹಾಗೂ ಮಾದರಿ ಎಂದು ತಮ್ಮ ಗುರು ಭಕ್ತಿಯನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಮುರುಳಿದರ್ ನಾಯಕ್, ಜಿಲ್ಲೆಯ ಹೆಸರಾಂತ ವರದಿಗಾರರಾದ ಸಂದೀಪ್ ಸಾಗರ್, ಹರೀಶ್ ನಾಯಕ್, ಸನತ್ ಖಾರ್ವಿ, ಸೂರಜ್ ನಾಯ್ಕ, ಸುರೇಶ್ ನಾಯ್ಕ, ರಘುನಾಥ್ ನಾಯ್ಕ್, ದಿಲೀಪ್ ನಾಯ್ಕ, ಅಭಿಷೇಕ್ ನಾಯ್ಕ ಹಾಗೂ ಇನ್ನೂ ಪ್ರಮುಖರು ಉಪಸ್ಥಿತರಿದ್ದರು…..


