ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ವಿಧಿವಶ.

News Desk
1 Min Read

ಅಂಕೋಲಾ ತಾಲೂಕಿನ ಬಡಗೇರಿಯ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರು ಗುರುವಾರ ಬೆಳಗಿನ ಜಾವ 3:30 ಕ್ಕೆ ವಿಧಿವಶರಾಗಿದ್ದಾರೆ..

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರು ಬಾರದ ಲೋಕಕ್ಕೆ ಪ್ರಯಾಣಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..ಅಂಕೋಲಾದ ಹಾಲಕ್ಕಿ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಕ್ರಿ ಬೊಮ್ಮಗೌಡ ಅವರು ಸುಪ್ರಸಿದ್ದ ಜಾನಪದ ಗಾಯಕಿ. ಕಲೆಗೆ ನೀಡಿದ ಕೊಡುಗೆಗಳಿಗಾಗಿ ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕೆಲಸಕ್ಕಾಗಿ ಅವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮದ್ಯ ವ್ಯಸನದಿಂದ ಸಂಭವಿಸಿದ ಗಂಡನ ಸಾವಿನ ಬಳಿಕ ಧೃತಿಗೆಡದ ಸುಕ್ರಜ್ಜಿ 1990 ರ ದಶಕದಲ್ಲಿ ಮದ್ಯ ವಿರೋಧಿ ಆಂದೋಲನವನ್ನು ನಡೆಸಿದ್ದರು.

ವರದಿ: ಕಿರಣ ಚಂದ್ರಹಾಸ ಗಾಂವಕರ

Share This Article
Leave a Comment