ಮಾಹಿತಿ ಹಕ್ಕು ಬಳಕೆದಾರನಿಗೆ ಬೆದರಿಕೆ ಕರೆ : ಬಾವಿಕೇರಿ ಪಂಚಾಯತ ಸದ್ಯಸನಿಗೆ ಖಡಕ್ ಕ್ಲಾಸ್ ತೆಗೆದುಕೊಂಡ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ.

News Desk
1 Min Read

ಅಂಕೋಲಾ : ತಾಲೂಕಿನ ಬಾವಿಕೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಗ್ರಾಮ ಪಂಚಾಯತ ಸದಸ್ಯ ನೋರ್ವ ರಾತ್ರಿ ಸಮಯದಲ್ಲಿ ತನ್ನ ಮೊಬೈಲ ನಿಂದ ಕರೆ ಮಾಡಿ ಬೆದರಿಕೆ ಹಾಕಿದ ಘಟನೆ ನಡೆದಿದ್ದು. ಸದರಿ ಮಾಹಿತಿ ಹಕ್ಕು ಅರ್ಜಿ ದಾರ ತನಗೆ ಬೆದರಿಕೆ ಕರೆ ಮಾಡಿರುವ ಪಂಚಾಯತಿ ಸದಸ್ಯನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಿನಾಂಕ್31-01-2025ರಂದು ದೂರು ಸಲ್ಲಿಸಿದ್ದಾರೆ.

ಅಂಕೋಲಾ ಪೋಲಿಸ ಠಾಣೆಯಲ್ಲಿ ದೂರನ್ನು ಸ್ವೀಕರಿಸಿಕೊಂಡ ಪೊಲೀಸರು ಬಾವಿಕೇರಿ ಗ್ರಾಮ ಪಂಚಾಯತಿ ಸದಸ್ಯನಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು .ಮಾಹಿತಿ ಹಕ್ಕು ಅರ್ಜಿದಾರರ ದೂರಿನ ಮೇರೆಗೆ ಮಾರನೇ ದಿನ ಹಾಜರಿದ್ದ ಗ್ರಾಮ ಪಂಚಾಯತ್ ಸದಸ್ಯನಿಗೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಕಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಾಹಿತಿ ಹಕ್ಕು ಪ್ರತಿಯೊಬ್ಬ ಪ್ರಜೆಗಳ ಹಕ್ಕು. ಅರ್ಜಿದಾರರು ಪಂಚಾಯತ ಗೆ ಅರ್ಜಿ ಹಾಕಿದ್ರೆ ಸಂಬಂದಿಸಿದ ಅಧಿಕಾರಿಗಳು ಅದಕ್ಕೆ ಉತ್ತರವನ್ನು ನೀಡುತ್ತಾರೆ. ಉತ್ತರ ಸಮಂಜಸ ಇಲ್ಲದಿದ್ದಾಗ ಸಂಬಂಧಿಸಿದ ಪ್ರಾಧಿಕಾರಕ್ಕೆ ಅರ್ಜಿದಾರರು ಹೋಗುತ್ತಾರೆ.ಅದರಲ್ಲಿ ಪಂಚಾಯಿತಿ ಮೆಂಬರರ್ಗಳಾದ ತಮ್ಮ ಹಿತಾಸಕ್ತಿ ಏನು? ಪಂಚಾಯತಿ ಸದಸ್ಯನಿಗೆ ತಮ್ಮದೇ ಶೈಲಿಯಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಾ ಮಾಹಿತಿ ಹಕ್ಕಿನ ಅರಿವನ್ನು ಮೂಡಿಸಿದರು . ಜೊತೆಗೆ ಮಾಹಿತಿ ಹಕ್ಕಿನ ಪುಸ್ತಕ ಓದುವಂತೆ ಸಲಹೆ ನೀಡಿ .ಇನ್ನು ಮುಂದೆ ಮಾಹಿತಿ ಹಕ್ಕು ಸಲ್ಲಿಸಿದ ಅರ್ಜಿದಾರರ ತಂಟೆ ತಕ್ರಾರಿಗೆ ಹೋಗದಂತೆ ಒಂದು ವೇಳೆ ಹೀಗೆ ಯಾರಿಗಾದ್ರು ಬೆದರಿಕೆ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮಾಹಿತಿ ಹಕ್ಕು ನಿಯಮದಂತೆ ಅರ್ಜಿದಾರರ ಮಾಹಿತಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯು ಗೌಪ್ಯವಾಗಿಡಬೇಕು ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮಾಹಿತಿ ಹಕ್ಕು ಅರ್ಜಿದಾರರ ಅರ್ಜಿ ಹಾಗೂ ಖಾಸಗಿ ಮಾಹಿತಿಯನ್ನು ವ್ಯಕ್ತಿಗಳಿಗೆ ಸೋರಿಕೆ ಮಾಡುತಿದ್ದು ಕೆಲವೊಮ್ಮೆ ದುಷ್ಟರ ಕೈಗೆ ಸಿಲುಕಿ ಮಾಹಿತಿ ಹಕ್ಕು ಬಳಕೆದಾರರ ಕೊಲೆಗಳು ನಡೆದಿದ್ದು.. ಮಾಹಿತಿ ಹಕ್ಕು ಬಳಕೆದಾರರು ಜೀವ ಭಯದಲ್ಲಿ ಜೀವನ ಸಾಗಿಸ ಬೇಕಾಗಿದೆ.

ವರದಿ : ಕಿರಣ ಚಂದ್ರಹಾಸ ಗಾಂವಕರ

Share This Article
Leave a Comment