ಅಂಕೋಲಾ ತಾಲೂಕು ಯುವ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಅಭಿನಂದನ ಖಾರ್ವಿಯವರಿಗೆ ಭರ್ಜರಿ ಮತಗಳ ಅಂತರದಿಂದ ಜಯ..!

News Desk
0 Min Read

ಅಂಕೋಲಾ : ಅಭಿನಂದನ ಖಾರ್ವಿಯವರು ಅಂಕೋಲಾ ತಾಲೂಕಿನಲ್ಲಿ ಹುಟ್ಟಿ, ಚಿಕ್ಕಂದಿನಿಂದಲೂ ಬಹಳ ಕಷ್ಟದಲ್ಲಿ ಬೆಳೆದು, ಸಣ್ಣ ವಯಸ್ಸಿನಲ್ಲಿಯೇ ಉದ್ಯಮವನ್ನು ನಡೆಸಿ ಯಶಸ್ವಿಯಾದರು.ಅಂಕೋಲಾ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಯುವ ಕಾಂಗ್ರೆಸ್ ಸಂಘಟನೆಯನ್ನು ಮಾಡಿ ಗುರುತಿಸಿಕೊಂಡಿದ್ದರು.

ಕ್ರಿಯಾಶೀಲ ವ್ಯಕ್ತಿತ್ವವುಳ್ಳ ಇವರು ಅಂಕೋಲಾ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಭಾಗವಹಿಸಿ, 1305 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ. ಇನ್ನೋರ್ವ ಅಭ್ಯರ್ಥಿ ದರ್ಶನರವರು 453 ಮತಗಳನ್ನು ಪಡೆಯುವ ಮೂಲಕ ತೃಪ್ತಿಪಡೆದಿದ್ದಾರೆ. ಅಭಿನಂದನ ಖಾರ್ವಿಯವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಅವರ ಆತ್ಮೀಯರು, ಸ್ನೇಹಿತರು ಶುಭಕೋರಿದ್ದಾರೆ.

..

TAGGED:
Share This Article
1 Comment