ಅಂಕೋಲಾ: ಮಲಗಿದ್ದ ತಾಯಿ ಬೆಳಗಾಗುವಷ್ಟರಲ್ಲಿ ನಾಪತ್ತೆ! ಕಣ್ಣು ಕಾಣದ ವೃದ್ಧೆಗಾಗಿ ಮಗನ ಹುಡುಕಾಟ.

News Desk
1 Min Read

ಅಂಕೋಲಾ: ಅಂಕೋಲಾ ತಾಲೂಕಿನ ಕೇಣಿಯ ಗಾಬೀತವಾಡದಲ್ಲಿ 67 ವರ್ಷದ ವೃದ್ಧೆಯೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾದವರನ್ನು ಸೀತಾಬಾಯಿ ಬೀರಾ ಹರಿಕಂತ್ರ ಎಂದು ಗುರುತಿಸಲಾಗಿದೆ. ಇವರಿಗೆ ವಯಸ್ಸಾಗಿದ್ದರಿಂದ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ ಮತ್ತು ಅವರು ಹೆಚ್ಚಾಗಿ ಮನೆಯಲ್ಲಿಯೇ ಇರುತ್ತಿದ್ದರು. ಮಾರ್ಚ್ 09, 2026 ರಂದು ರಾತ್ರಿ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದ ಇವರು, ಮರುದಿನ ಮಾರ್ಚ್ 10 ರ ಬೆಳಗಿನ ಜಾವ 03:00 ರಿಂದ 03:30 ರ ಸುಮಾರಿಗೆ ಮನೆಯಿಂದ ಎದ್ದು ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ.

ಕಾಣೆಯಾದ ತಾಯಿಗಾಗಿ ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ವೃತ್ತಿಯಲ್ಲಿ ಮೀನುಗಾರರಾಗಿರುವ ಅವರ ಪುತ್ರ ಸುಧಾಕರ (42) ಅವರು ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ಈ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (ಕ್ರೈಂ ನಂಬರ್: 0051/2026), ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment