ಚಿಣ್ಣರ ಕನಸಿಗೆ ರೆಕ್ಕೆ ಕಟ್ಟುವ ಶಾಂತಿನಿಕೇತನ ಪ್ಲೇಸ್ಕೂಲ್ ಶಿಕ್ಷಣ ಮಾದರಿ : ಸಂಜಯ ಕಾಮತ..

News Desk
2 Min Read

ಅಂಕೋಲಾ : ಮಕ್ಕಳ ಕನಸಿಗೆ ಹಾಗೂ ಪ್ರತಿಭೆಗೆ ನಿಜವಾದ ರೂಪ ಕೊಡುವ ಶಿಲ್ಲಿಗಳೇ ಶಿಕ್ಷಕರು. ಈ ನಿಟ್ಟಿನಲ್ಲಿ ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳ ಮನಸ್ಸನ್ನು ಹೂವಿನಂತೆ ಅರಳಿಸುವ, ಅವರ ಕನಸಿಗೆ ರಕ್ಕೆ ಕಟ್ಟುವ ಮಹತ್ತರ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿರುವದು ಮಾದರಿಯಾಗಿದೆ ಎಂದು ಜೈಹಿಂದ ಆಡಳಿತ ಮಂಡಳಿಯ ಅಧ್ಯಕ್ಷ ಸಂಜಯ ಕಾಮತ ಹೇಳಿದರು.

ಅವರು ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯ 11 ನೇ ವರ್ಷದ ಚಿಣ್ಣರ ಚಿತ್ತಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಮಾತನಾಡಿ ಮಕ್ಕಳಿಗೆ ಪಾಠ ಹೇಳುವದು ಬಹು ದೊಡ್ಡ ಜವಬ್ದಾರಿಯಾಗಿದೆ. ಆ ಜವಬ್ದಾರಿಯನ್ನು ಶಾಂತಿನಿಕೇತನ ಪ್ಲೇಸ್ಕೂಲ ಪ್ರೀತಿ ಹಾಗೂ ಸೃಜನಶೀಲತೆಯಿಂದ ನಿಭಾಯಿಸುತ್ತಿರುವ ಶಿಕ್ಷಕ ವೃಂದ ನಿಜಕ್ಕೂ ಅಭಿನಂದನಾರ್ಹರು ಎಂದರು.

ಶಾಂತಿನಿಕೇತನ ಟ್ರಸ್ಟ್ ಅಧ್ಯಕ್ಷ ಟಿ.ಬಿ. ನಾಯಕ ಅಧ್ಯಕ್ಷತೆವಹಿಸಿ ಮಾತನಾಡಿ ನಾವು ಶಾಲೆಯನ್ನು ವ್ಯಾಪಾರದ ದೃಷ್ಠಿಕೋನ ಇಟ್ಟು ಮಾಡಿಲ್ಲ. ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ಭವ್ಯ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಹುಟ್ಟು ಹಾಕಲಾಗಿದೆ ಎಂದರು.

ಉದ್ಯಮಿ ರಿಯಾಜ್ ಶೇಖ,ಕಾರವಾರದ ಕಿಂಡರಲಾ ಸ್ಕೂಲನ ಮುಖ್ಯಸ್ಥ ಡಾ. ಸಮೀರ ನಾಯಕ, ಶಾಂತಿನಿಕೇತನ ಟ್ರಸ್ಟ್ ಕಾರ್ಯದರ್ಶಿ ಶ್ರೀಮತಿ ಶಾಂತಿ ಬಿ. ನಾಯಕ, ಅರ್ಪಿತಾ ನಾಯಕ , ಮುಖ್ಯಾದ್ಯಾಪಕಿ ಶೀತಲ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಂತಿನೀಕೆತನ ಟ್ರಸ್ಟ್ ನ ನಿರ್ದೇಶಕರಾದ ಡಾ. ಸಂಜು ಟಿ. ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನೆಯ ಗ್ರಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಶಾಲೆಯ ಧ್ವಜಕಟ್ಟೆ ನಿರ್ಮಿಸಲು ವಿಶೇಷ ಕೊಡುಗೆ ನೀಡಿದ ಶ್ಯಾಮಲಾ ಗೌಡ ಹಾಗೂ ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕುಮಾರಿ ಹರ್ಷಿತಾ ಕಾಮತ ಹಾಗೂ ಜೀ ಕನ್ನಡ ಚೋಟಾ ಚಾಂಪಿಯನ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ ಸಿರ್ಸಿಯ ಪುಟಾಣಿ ಕುಮಾರಿ ಶಾರ್ವರಿ ವೆಂಕಟೇಶ್, ಅವರನ್ನು ಶಾಂತಿನಿಕೇತನ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ವಿದ್ಯಾರ್ಥಿ ಗಳಿಂದ ಆಕರ್ಷಕ ವಿವಿಧ ನೃತ್ಯ ಕಾರ್ಯಕ್ರಮ ನಡೆದವು.ಶ್ವೇತಾ ನಾಯಕ ಸ್ವಾಗತಿಸಿದರು. ಶೃದ್ಧಾ ಆಚಾರ್ಯ ನಿರೂಪಿಸಿದರು. ಮಮತಾ ನಾಯ್ಕ ವಂದಿಸಿದರು. ಶಿಕ್ಷಕರಾದ ಮೈತ್ರಿ ಭಟ್, ಸಹನಾ ಎಫ್ ಉಪಸ್ಥಿತರಿದ್ದರು.

Share This Article