ಪಡ್ತಿ ಸಮಾಜದ ಕ್ರಿಕೆಟ್ ಟೂರ್ನಮೆಂಟ್– ಸೀಸನ್ 1. ಜನವರಿ 11 ಮತ್ತು 18ರಂದು ಅಂಕೋಲಾ ಬಾಸಗೋಡ ನಡುಬೇಣ ಮೈದಾನದಲ್ಲಿ ಪಂದ್ಯಾವಳಿ; ರಾಜ್ಯಮಟ್ಟದ ಆಟಗಾರರಿಂದ ಕ್ರೀಡಾಂಗಣ ಉದ್ಘಾಟನೆ..

News Desk
1 Min Read

ಅಂಕೋಲಾ: ಪಡ್ತಿ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಮೆಂಟ್ – ಸೀಸನ್ 1 ಅನ್ನು ಆಯೋಜಿಸಲಾಗಿದ್ದು, ಈ ಸಂಬಂಧ ಟೂರ್ನಮೆಂಟ್‌ನ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಈ ಕ್ರಿಕೆಟ್ ಟೂರ್ನಮೆಂಟ್‌ 2026ರ ಜನವರಿ 11 ಮತ್ತು 18ರಂದು ಅಂಕೋಲಾ ತಾಲ್ಲೂಕಿನ ನಡುಬೇಣ ಮೈದಾನ, ಬಾಸಗೋಡದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಪಡ್ತಿ ಸಮಾಜದ ಬಾಂಧವರಿಗಾಗಿ ಆಯೋಜಿಸಲಾಗಿರುವ ಈ ಪಂದ್ಯಾವಳಿ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಭಾರಿ ಉತ್ಸಾಹ ಮೂಡಿಸಿದೆ.

ಜನವರಿ 11ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ,ಗ್ರಾಮ ಪಂಚಾಯತ್ ಶೆಟಗೇರಿ ಅಧ್ಯಕ್ಷರಾದ ಶ್ರೀ ಲಕ್ಷ್ಮಿಧರ ವಿ. ನಾಯಕ್ ಅವರು ಅಧ್ಯಕ್ಷತೆ ವಹಿಸಲಿದ್ದು,ಕಾಂಗ್ರೆಸ್ ಮುಖಂಡರಾದ ಶ್ರೀ ಗೋಪಾಲಕೃಷ್ಣ ನಾಯಕ್ ಅವರು ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ.

ಇದಲ್ಲದೆ, ರಾಜ್ಯಮಟ್ಟದ ಕ್ರಿಕೆಟ್ ಆಟಗಾರರಾದ ಶ್ರೀ ವೆಂಕಟೇಶ್ ಎಸ್. ನಾಯಕ್ ಅವರು ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದು,ಸೂರ್ಯ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕರಾದ ಶ್ರೀ ನಾಗರಾಜ್ ಎಚ್. ನಾಯಕ್ ಅವರು ಪಾರಿತೋಷಕ ಅನಾವರಣ ನೆರವೇರಿಸಲಿದ್ದಾರೆ. ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇನ್ನು, ಜನವರಿ 18ರಂದು ರವಿವಾರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,ಹೆಸ್ಕಾಂ ಉದ್ಯೋಗಿಗಳಾದ ಶ್ರೀ ರಾಜು ಎಚ್. ಗಾಂವಕರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಬಹುಮಾನ ವಿತರಣೆಯನ್ನು ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ್ ಅವರು ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿಯೂ ಅನೇಕ ಗಣ್ಯರು ಉಪಸ್ಥಿತರಿರುವ ನಿರೀಕ್ಷೆಇದೆ.

ಪಡ್ತಿ ಸಮಾಜದ ಯುವಕರಲ್ಲಿ ಕ್ರೀಡಾ ಮನೋಭಾವನೆ ಬೆಳೆಸುವ ಉದ್ದೇಶದಿಂದ ಆಯೋಜಿಸಿರುವ ಈ ಕ್ರಿಕೆಟ್ ಟೂರ್ನಮೆಂಟ್‌ಗೆ ಸಮಾಜದ ಬಾಂಧವರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Share This Article