ಅಂಕೋಲಾ: ಅಜ್ಜಿ ಮನೆಗೆ ಹೋಗಿ ನಾಲ್ಕು ದಿನ ಇದ್ದು ಬರ್ತೀನಿ ಅಂತಾ ಮನೆಯಲ್ಲಿ ಹೇಳಿ ಹೋದ ಯುವತಿಯೋರ್ವಳು, ಅತ್ತ ಅಜ್ಜಿ ಮನೆಗೂ ತಲುಪದೇ, ಇತ್ತ ವಾಪಾಸ್ ಮನೆಗೂ ಬಾರದೇ ಕಾಣೆಯಾದ ಘಟನೆ ತಾಲೂಕಿನ ಅವರ್ಸಾ ದಂಡೇಭಾಗದಲ್ಲಿ ನಡೆದಿದೆ.
ಅವರ್ಸಾ ದಂಡೇಭಾಗದ ನಾಗೇಂದ್ರ ನಾಯ್ಕ ಎನ್ನುವವರ ಮಗಳು ಮೇಘನಾ (22) ಕಾಣೆಯಾದ ಯುವತಿ. ಈಕೆ ನಿನ್ನೆ (ಜ.2) ಸಂಜೆ 5:30ರ ಸುಮಾರಿಗೆ ರಾಮನಗುಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಟಿದ್ದಳು. ರಾತ್ರಿಯಾದರೂ ಆಕೆ ಅಜ್ಜಿ ಮನೆಗೆ ತಲುಪಿಲ್ಲ ಎಂಬ ವಿಷಯ ತಿಳಿದು ಗಾಬರಿಗೊಂಡ ಮನೆಯವರು, ಎಲ್ಲಾ ಕಡೆ ವಿಚಾರಿಸಿದರೂ ಪತ್ತೆಯಾಗಿಲ್ಲ. ಕೊನೆಗೆ ದಿಕ್ಕು ತೋಚದೇ ತಂದೆ ನಾಗೇಂದ್ರ ನಾಯ್ಕ ಅವರು ಇಂದು ಅಂಕೋಲಾ ಠಾಣೆಗೆ ಬಂದು ದೂರು ನೀಡಿದ್ದಾರೆ.

ಚಹರೆ ಗುರುತು: ಕಾಣೆಯಾದ ಮೇಘನಾ 5 ಅಡಿ ಎತ್ತರವಿದ್ದು, ಸಾದು ಕಪ್ಪು ಮೈಬಣ್ಣ, ಗೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದಳು. ಈಕೆಯ ಬಲಗೈ ತೋರು ಬೆರಳು ಸ್ವಲ್ಪ ಬಾಗಿರುತ್ತದೆ. ಕನ್ನಡ ಹಾಗೂ ಕೊಂಕಣಿ ಭಾಷೆ ಬಲ್ಲವಳಾಗಿದ್ದಾಳೆ.ಈ ಚಹರೆಯುಳ್ಳ ಯುವತಿ ಸಾರ್ವಜನಿಕರಿಗೆ ಎಲ್ಲೇ ಕಂಡುಬಂದರೂ ಕೂಡಲೇ ಅಂಕೋಲಾ ಪೋಲೀಸ್ ಠಾಣೆಗೆ
08388-220333, 9480805250 / 9480805268
ಈ ಮೇಲಿನ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಲು ಪೊಲೀಸರು ಕೋರಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಅಂಕೋಲಾ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿಕಾಸ ವಾಹಿನಿ ಸೂರಜ್ ನಾಯ್ಕ ಶಿರೂರು

