ಕುಮಟಾ ವಕೀಲರ ಸಂಘದಲ್ಲಿ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ಆಡಳಿತ ಮಂಡಳಿ..

News Desk
1 Min Read

ಕುಮಟಾ: 2025–26ನೇ ಸಾಲಿನ ಕುಮಟಾ ವಕೀಲರ ಸಂಘದ ವಾರ್ಷಿಕ ಚುನಾವಣೆಯಲ್ಲಿ ಈ ಬಾರಿ ವಿಶೇಷ ಘಟನೆ ನಡೆದಿದೆ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಸಹಕಾರ್ಯದರ್ಶಿ ಹುದ್ದೆಗಳಿಗೂ ಮಹಿಳಾ ವಕೀಲರು ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ತಂಡ ವಕೀಲರ ಸಂಘದ ಆಡಳಿತ ವಹಿಸಿಕೊಂಡಿದೆ.

ಅಧ್ಯಕ್ಷರಾಗಿ ಶ್ರೀಮತಿ ಮಮತಾ ಆರ್. ನಾಯ್ಕ ವಕೀಲರು, ಉಪಾಧ್ಯಕ್ಷರಾಗಿ ಶ್ರೀಮತಿ ವಸುಧಾ ಹೆಗಡೆ ವಕೀಲರು, ಕಾರ್ಯದರ್ಶಿಯಾಗಿ ಶ್ರೀಮತಿ ಮೀನಾಕ್ಷಿ ಯು. ನಾಯ್ಕ ವಕೀಲರು, ಖಜಾಂಚಿಯಾಗಿ ಶ್ರೀಮತಿ ಶಾಂತಿಕಾ ಡಿ. ನಾಯ್ಕ ವಕೀಲರು ಹಾಗೂ ಸಹಕಾರ್ಯದರ್ಶಿಯಾಗಿ ಶ್ರೀಮತಿ ಚಂದ್ರಿಕಾ ಪಟಗಾರ ವಕೀಲರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಆಯ್ಕೆ ಕಾನೂನು ಕ್ಷೇತ್ರದಲ್ಲಿ ಮಹಿಳೆಯರ ನಾಯಕತ್ವ, ಸಾಮರ್ಥ್ಯ ಹಾಗೂ ಸಬಲೀಕರಣಕ್ಕೆ ಹೊಸ ಬಾಗಿಲು ತೆರೆದಿದೆ ಎಂದು ಹಿರಿಯ ವಕೀಲರು ಪ್ರಶಂಸಿಸಿದ್ದಾರೆ. ಸಾಮಾಜಿಕ ಜಾಗೃತಿ, ವಕೀಲರ ಕಲ್ಯಾಣ ಹಾಗೂ ಕಾನೂನು ಅರಿವು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಆಸಕ್ತಿಯಿರುವುದಾಗಿ ಹೊಸ ಅಧ್ಯಕ್ಷೆ ಮಮತಾ ಆರ್. ನಾಯ್ಕ ಸ್ಪಷ್ಟಪಡಿಸಿದ್ದಾರೆ..

Share This Article