ಅಂಕೋಲಾ ಪ್ರವೇಶ ಬೋರ್ಡ್ ಪಕ್ಕವೇ ಅಪಾಯಕಾರಿ ಗುಂಡಿಗಳು – ಪ್ರಾಣಪಾಯ ಮುನ್ನವೇ ಕ್ರಮ ಕೈಗೊಳ್ಳಿ – ಸಾರ್ವಜನಿಕರ ತೀವ್ರ ಆಕ್ರೋಶ..

News Desk
1 Min Read

ಅಂಕೋಲಾ: ತಾಲೂಕಿನ ಕುಮಟಾ ಕಡೆಯಿಂದ ಅಂಕೋಲಾಕ್ಕೆ ಪ್ರವೇಶಿಸುವ ಸ್ವಾಗತ ಬೋರ್ಡ್ ಪಕ್ಕದಲ್ಲೇ ಎರಡು ದೊಡ್ಡ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿದ್ದು, ಬೈಕ್ ಹಾಗೂ ಇತರ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವು ಅಪಘಾತಗಳು ಸಂಭವಿಸುತ್ತಿವೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ ಎಂಬುದೇ ಸಮಾಧಾನಕರ ಸಂಗತಿ.

ಕಳೆದ ಎರಡು-ಮೂರು ತಿಂಗಳಿಂದ ಈ ಗುಂಡಿಗಳು ಅಸ್ಥಿತ್ವದಲ್ಲಿದ್ದರೂ, ಸಂಬಂಧಿತ ಇಲಾಖೆಯ ಅಧಿಕಾರಿಗಳು ಯಾವುದೇ ಗಮನ ಹರಿಸದೇ ನಿರ್ಲಕ್ಷ್ಯ ತೋರಿರುವುದು ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಅಸಮರ್ಥತೆಯನ್ನು ಬಯಲಿಗೆಳೆದಿದೆ.

ಸಾರ್ವಜನಿಕರ ಪ್ರಾಣಾಪಾಯ ಸಂಭವಿಸುವ ಮುನ್ನವೇ ತ್ವರಿತ ಕ್ರಮ ಕೈಗೊಂಡು ಗುಂಡಿಗಳನ್ನು ಮುಚ್ಚಿಸಬೇಕಾಗಿದೆ. ಅಂಕೋಲಾದ ಯುವ ಕ್ರಿಯಾಶೀಲ ದಂಡಾಧಿಕಾರಿಗಳು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ತಕ್ಷಣದ ದುರಸ್ತಿ ಕಾರ್ಯ ಜರುಗಿಸಲು ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಶೀಘ್ರ ಬೇಡಿಕೆಯಾಗಿದೆ..

Share This Article