ಬರೋಬ್ಬರಿ 90 ದಿನಗಳ ಕಾಲ ಆಹಾರ ನೀರಿಲ್ಲದೆ ಔಷಧವನ್ನೇ ಸೇವಿಸಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದ ಅವರ್ಸಾದ ಬಾಲಕ ಆರವ್(11) ನಿನ್ನೆ ರಾತ್ರಿ 12:30 ಕ್ಕೆ ಬೆಂಗಳೂರಿನ ಇಂದಿರಾಗಾಂಧಿ ಹಾಸ್ಪಿಟಲ್ ನಲ್ಲಿ ಕೊನೆಯುಸಿರೆಳೆದಿದ್ದಾನೆ. ಸಹಜವಾಗಿ ಕಾಣಿಸಿಕೊಂಡಿದ್ದ ಚಿಕ್ಕ ಜ್ವರ ಪವಾಡ ಎಂಬಂತೆ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗ ಬಹುದೆಂದು ಯಾರೂ ಊಹಿಸಿರಲಿಲ್ಲ.
ಕಾರವಾರ, ಕುಮಟಾ, ಮಣಿಪಾಲ, ನಿಮಾನ್ಸ್, ಹಾಗೂ ಇಂದಿರಾ ಗಾಂಧಿ ಹಾಸ್ಪಿಟಲ್ ಬೆಂಗಳೂರು ಎಲ್ಲ ಕಡೆ ಚಿಕಿತ್ಸೆ ಪಡೆದು ಕೊಂಡರೂ ಯಾವ ವೈದ್ಯರಿಗೂ ಬದುಕಿಸಲು ಸಾಧ್ಯವಾಗಲಿಲ್ಲ. ಈ ನಡುವೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಶ್ರೀಯುತ ಮಾಧವ ನಾಯಕ ಹಾಗೂ ಹಿತೈಷಿಗಳು ಶಾಲೆಯ ಪ್ರತಿಭಾವಂತ ಕಂದನನ್ನು ಬದುಕಿಸುವ ಭಗೀರಥ ಪ್ರಯತ್ನ ಮಾಡಿದರೂ ವಿಧಿಯ ಮುಂದೆ ಪ್ರಯತ್ನವೆಂಬ ರಥ ಕೈಕೊಟ್ಟಿತು.
ಹೆತ್ತವರು ಕರುಳಬಳ್ಳಿಯನ್ನು ಉಳಿಸಲು ಹತ್ತಾರು ಲಕ್ಷ ಖರ್ಚು ಮಾಡಿದರೂ ಕಾಲರಾಯ ಮಾತ್ರ ಪುಟ್ಟ ಕಂದನ ಕಡೆಗೆ ಲಕ್ಷ್ಯ ವಹೀಸಲೇ ಇಲ್ಲ ತಂದೆ ಪಾಂಡುರಂಗ ನಾಯ್ಕ ಹವ್ಯಾಸಿ ಕಲಾವಿದರು ಜೊತೆಗೆ ರಿಕ್ಷಾ ಚಾಲಕರು. ಹೆತ್ತವರ ಕೂಗು ಕೇಳಿಸಿಕೊಳ್ಳದ ವಿಧಿ ನಿನ್ನಷ್ಟು ಕ್ರೂರಿ …?
ವಾಟ್ಸಾಪ್ ಸಂದೇಶ

