ಬಾಲಕನ ಮೃತದೇಹ ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪಿಎಸ್ಐ ಖಾದರ್ ಭಾಷಾ ಅವರಿಗೆ ಯುವ ಕಾಂಗ್ರೆಸ್‌ನಿಂದ ಸನ್ಮಾನ..

News Desk
1 Min Read

ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸ್ವತಃ ನೀರಿಗೆ ಇಳಿದು ಬಾಲಕನ ಮೃತದೇಹವನ್ನು ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಭಾಷಾ ಅವರ ಧೈರ್ಯ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವವನ್ನು ಯುವ ಕಾಂಗ್ರೆಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಂಕಷ್ಟದ ಸಂದರ್ಭದಲ್ಲಿ ಕ್ಷಣವೂ ತಡಮಾಡದೆ ನೀರಿಗೆ ಇಳಿದು ಮೃತದೇಹವನ್ನು ಹೊರತೆಗೆದ ಪಿಎಸ್ಐ ಖಾದರ್ ಭಾಷಾ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಪೊಲೀಸ್ ಇಲಾಖೆಯ ಕರ್ತವ್ಯಪ್ರಜ್ಞೆ ಹಾಗೂ ಮಾನವೀಯತೆಗೆ ಉತ್ತಮ ನಿದರ್ಶನವಾಗಿದೆ.

ಇಂತಹ ಧೈರ್ಯಶಾಲಿ ಹಾಗೂ ಮಾನವೀಯ ಕಾರ್ಯವನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕುಮಟಾ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಪಿಎಸ್ಐ ಖಾದರ್ ಭಾಷಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕುಮಟಾ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವೈಭವ್ ನಾಯಕ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಫ್ಲೇವಿಯನ್ ಫರ್ನಾಂಡಿಸ್, ಹೊನ್ನಾವರ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಪಟಗಾರ, ಕಾಗಲ್ ಪಂಚಾಯತ್ ಸದಸ್ಯ ಪ್ರಮೋದ್ ನಾಯ್ಕ್, ಧೀರಜ್ ನಾಯ್ಕ್, ಕಾರ್ತಿಕ್ ನಾಯ್ಕ್ ಹೆಗಡೆ, ವೆಂಕಟೇಶ್ ಹಾಗೂ ಪವನ್ ಉಪಸ್ಥಿತರಿದ್ದರು.

Share This Article