Connect with us

ರಾಜ್ಯ

ಗುಡ್​ನ್ಯೂಸ್: ಗೃಹಲಕ್ಷ್ಮಿ ಹಣದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Sed ut perspiciatis unde omnis iste natus error sit voluptatem accusantium doloremque laudantium, totam rem aperiam.

Published

on

ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲ ಎಂದು ಗೃಹಲಕ್ಷ್ಮಿಯರು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದರು. ಕಳೆದ ಮೂರು ತಿಂಗಳಿನಿಂದ ಹಣ ಹಾಕಿಲ್ಲ ಎನ್ನುವ ಆರೋಪಗ ಕೇಳಿಬಂದಿದ್ದು, ಈ ಕುರಿತು ಕೂಡ ನಿರಂತರ ವರದಿ ಮಾಡಿತ್ತು. ಗೃಹಲಕ್ಷ್ಮಿಯರ ಅಳಲು ಸರ್ಕಾರದ ಗಮನ ತರುವ ಕೆಲಸ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಣ ಹಾಕುವ ಭರವಸೆ ನೀಡಿದ್ದಾರೆ.

ಬೆಂಗಳೂರು, (ಫೆಬ್ರವರಿ 21) : ಹೌದು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಸಾಕಷ್ಟು ಮಹಿಳೆಯರಿಗೆ ಅನುಕೂಲ ಆಗಿದೆ. ಕೆಲವರು ಇದೇ ಹಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಸಮಾಜಕ್ಕೂ ಅನುಕೂಲ ಮಾಡಿ ಮಾದರಿಯಾಗಿದ್ದಾರೆ. ಆದ್ರೇ ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಮೂರು ಕಂತಿನ ಹಣ ಬಾರದೇ ಸಾಕಷ್ಟು ಮಹಿಳೆಯರು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಟಿವಿ9 ವರದಿಯ ನಿರಂತರ ಅಭಿಯಾನದಿಂದ ಇದೀಗ ಗೃಹಲಕ್ಷ್ಮಿಯರಿಗೆ ಹಣ ಸಿಗುವ ಭರವಸೆ ಕೂಡ ಸಿಕ್ಕಿದೆ. ಹೌದು.. ಟಿವಿ9 ವರದಿ ಬೆನ್ನಲ್ಲೇ ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಟಿವಿ9 ಜೊತೆಗೆ ಮಾತನಾಡಿ, ನಾನು ಆಸ್ಪತ್ರೆಯಲ್ಲಿರುವ ಕಾರಣ ಮೂರು ತಿಂಗಳು ವಿಳಂಬವಾಗಿದೆ. ನಾನಿದ್ದಾಗ ಫೈನಾನ್ಸ್ ಇಲಾಖೆಗೆ ನಾನು ಒತ್ತಡ ಹಾಕುತ್ತಿದ್ದೆ. ಜೊತೆಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತಿದ್ದೆ. ದುರ್ದೈವ ಅಪಘಾತ ಬಳಿಕ ನಲವತ್ತು ದಿನ ಆಸ್ಪತ್ರೆಯಲ್ಲಿದ್ದ ಕಾರಣ ತಡವಾಗಿದೆ, ಇಷ್ಟು ದಿನ ಇಲಾಖೆಯಿಂದ ಹಣ ಬಿಡುಗಡೆ ಮಾಡ್ತಿದ್ದೇವು. ಈಗ ಬೆಂಗಳೂರು ಸುತ್ತಮುತ್ತಲಿನ ನಾಲ್ಕು ತಾಲೂಕು ಪಂಚಾಯತಿಗೆ ದುಡ್ಡು ಹಾಕಿ, ಅಲ್ಲಿಂದ ಸಿಡಿಪಿಒ ಮುಖಾಂತರ ಸೇಮ್ ಚಾನಲ್ ಹಣ ಬಿಡುಗಡೆ ಮಾಡಲು ಹೆಚ್ಚು ಕಮ್ಮಿ ಆಗಿದೆ . ಇನ್ನೊಂದು ವಾರ ಹತ್ತು ದಿನದಲ್ಲಿ ಖಾತೆಗಳಿಗೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಹಣವನ್ನು ತಾಲೂಕು ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡುತ್ತೇವೆ. ಇನ್ನೊಂದು ವಾರ ಹತ್ತು ದಿನದಲ್ಲಿ ದುಡ್ಡು ಬರುತ್ತೆ. ಎರಡು ತಿಂಗಳ ಹಣ ಫೈನಾನ್ಸ್ ದವರು ಟ್ರಸರಿಗೆ ಹಾಕಿದ್ದಾರೆ ಎನ್ನುವ ಮಾಹಿತಿ ಇದೆ. ನಾನು ಕೂಡ ಬಜೆಟ್ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮೂರು ತಿಂಗಳ ದುಡ್ಡನ್ನ ಹಾಕಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಅನ್ನಭಾಗ್ಯದ ಹಣವೂ ಇಲ್ಲ, ಗೃಹಲಕ್ಷ್ಮೀ ದುಡ್ಡು ಕೊಟ್ಟಿಲ್ಲ: ಭುಗಿಲೆದ್ದ ಆಕ್ರೋಶ

ಹೊಸ ಪ್ಯಾಟರ್ನ್ ಮಾಡಿದ್ದರಿಂದಲೂ ಹಣ ಬರಲು ವಿಳಂಬವಾಗಿದೆ. ಆದ್ರೆ ಹೊಸ ಪ್ಯಾಟರ್ನ್ ದಿಂದ ಯಾವುದೇ ಗೊಂದಲ ಇಲ್ಲ. ಡೈರೆಕ್ಟ್ ಅವರ ಅಕೌಂಟ್ ಗೆ ಹಣ ಹಾಕುತ್ತೇವೆ. ಎಲ್ಲಾ ಗೃಹಲಕ್ಷ್ಮಿಯರಿಗೆ ನಿಮ್ಮ ಹಣ ಬರುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಇನ್ನೂ ಹೆಬ್ಬಾಳ್ಕರ್ ಅವರ ಮಾತಿನಿಂದ ಬಹುತೇಕ ಗೃಹಲಕ್ಷ್ಮಿಯರು ಖುಷಿ ಯಾಗಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಟಿವಿ9ಗೆ ಧನ್ಯವಾದ ಹೇಳಿದ್ದಾರೆ.

ಒಟ್ಟಿನಲ್ಲಿ ಮೂರು ತಿಂಗಳ ಕಂತಿನ ಹಣ ಬಂದಿಲ್ಲ ಎಂದು ಕಂಗಾಲಾಗಿದ್ದ ಗೃಹಲಕ್ಷ್ಮಿಯರು ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭರವಸೆಯಿಂದ ಮೂರು ತಿಂಗಳ ಆರು ಸಾವಿರ ರೂಪಾಯಿ ಒಂದೇ ಸಮಯಕ್ಕೆ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕೊಟ್ಟ ಮಾತಿನಂತೆ ಸಚಿವರು ಹಣ ಹಾಕಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

ರಾಜ್ಯ

ತಾವರೆಕೆರೆ ಗ್ರಾ.ಪಂ ಬಿಲ್ ಕಲೆಕ್ಟರ್ ನನ್ನು ಕೆಲಸದಿಂದ ವಜಾ ಗೋಳಿಸುವಂತೆ ತಾ.ಪಂ ಕಚೇರಿಯ ಮುಂದೆ ಧರಣಿ.!

Published

on

ಕುಣಿಗಲ್‌ ಸುದ್ದಿ :- ತಾವರೆಕೆರೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಾಜೇಶ್ ನನ್ನು ಕೆಲಸದಿಂದ ವಜಾ ಗೋಳಿಸುವಂತೆ ಒತ್ತಾಯಿಸಿ ತಾ.ಪಂ ಕಚೇರಿಯ ಮುಂದೆ ಇಂದಿನಿಂದ ಧರಣಿ ನಡೆಸಲಾಗಿದೆ.

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಹುದ್ದೆಯನ್ನು ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ನೇಮಕಾತಿ ಪಡೆದು ಹಾಗೂ ಕಂದಾಯ ಹಣವನ್ನು ಅಕ್ರಮವಾಗಿ ದುರುಪಯೋಗ ಮಾಡಿಕೊಂಡಿರುವ ರಾಜೇಶ್ ಹೆಚ್.ಎಸ್ ಎಂಬುವವರನ್ನು ಬಿಲ್ ಕಲೆಕ್ಟರ್ ಹುದ್ದೆಯಿಂದ ವಜಾಗೊಳಿಸುವಂತೆ ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕಳೆದ ನಾಲ್ಕು ತಿಂಗಳ ಹಿಂದೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ. ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ನ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು ,ಆದರೆ ಇದುವರೆಗೂ ಯಾವುದೆ ಕ್ರಮ ಕೈಗೊಳ್ಳದ ಕಾರಣ ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯತ ಕಚೇರಿಯ ಮುಂಭಾಗ ನ್ಯಾಯಕ್ಕಾಗಿ ಆಗ್ರಹಿಸಿ ಸೋಮವಾರ ದೂರುದಾರರಾದ ಕಾಂತರಾಜು ಹಾಗೂ ಇವರ ಸಂಗಡಿಗರು ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸುತ್ತಿದ್ದಾರೆ.

ತಾವರೆಕೆರೆ ಗ್ರಾಮ ಪಂಚಾಯ್ತಿಯಲ್ಲಿ ಬಿಲ್ ಕಲೆಕ್ಟರ್ ಹಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜೇಶ್ ಎಂಬುವವರನ್ನು ಕೆಲಸದಿಂದ ವಜಾ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸದೆ ರಕ್ಷಣೆ ಮಾಡುತ್ತಿರುವ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಯ ವಿರುದ್ಧ ಅನಿರ್ದಿಷ್ಟ ಅವಧಿ ಅಹೊರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ಹೋರಾಟಗಾರಾದ ದೇವರಾಜು ಹೆಚ್ ಎಸ್ ಹಾಗೂ ಕಾಂತರಾಜು ಜೊತೆ ಇವರ ಸಂಗಡಿಗರು ತಿಳಿಸಿದ್ದು, ಸದರಿ ಹೋರಾಟದಲ್ಲಿ ಶ್ರೀನಿವಾಸ್.ಕಾಂತರಾಜು. ದೇವರಾಜು.ನಂದೀಶ್ ಲೋಕೇಶ್.ಹೆಚ್.ಎಸ್ ನಂದಿಶ್ ಪುಟ್ಟಸ್ವಾಮಿ , ರಮೇಶ್ ಉಪಸ್ಥಿತರಿದ್ದರು.

Continue Reading

ರಾಜ್ಯ

ಪೊಲೀಸರು ತಮ್ಮ ಸ್ವಂತ ವಾಹನಕ್ಕೆ “ಪೊಲೀಸ್” ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ..

Published

on

ಪೊಲೀಸರು ತಮ್ಮ ಖಾಸಗಿ ವಾಹನಗಳಿಗೆ “ಪೋಲಿಸ್” ಎಂದು ಬರೆಸಿಕೊಂಡು ನಾಮಫಲಕದ ದುರುಪಯೋಗವಾಗುತ್ತಿರುವ ಕುರಿತು ಮಾನ್ಯ ವಿಧಾನಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿಎನ್ ಶ್ರವಣಬೆಳಗೊಳ ರವರು ಕರ್ನಾಟಕ ವಿಧಾನಸಭೆಯಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 561 ರಲ್ಲಿ ಈ ಕೆಳಕಂಡ ಪ್ರಶ್ನೆಗೆ ಉತ್ತರವನ್ನು ಸರ್ಕಾರದಿಂದ ಕೋರಿದ್ದಾರೆ.

ಅ) ರಾಜ್ಯದ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೋಲಿಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ?

ಆ) ಹಾಗಿದ್ದಲ್ಲಿ. ಸ್ವಂತ ವಾಹನಗಳ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಕೆಲ ಪೊಲೀಸ್ ನೌಕರರು ಮತ್ತು ಅಧಿಕಾರಿಗಳು ಕಾನೂನಿನ ಉಲ್ಲಂಘನೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಬಂದಿದ್ದಲ್ಲಿ ಇವರ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು?

ಸದರಿ ಪ್ರಶ್ನೆಗೆ ಕರ್ನಾಟಕದ ಗೃಹ ಮಂತ್ರಿಗಳು ನೀಡಿದ ಉತ್ತರವು ಈ ಕೆಳಗಿನಂತಿದೆ.

ಅ) ರಾಜ್ಯದ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ನೌಕರರು ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸಿಕೊಂಡು ಸಂಚಾರ ಮಾಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ.

ಆ ) ಸರ್ಕಾರದ ಸುತ್ತೋಲೆ ಸಂಖ್ಯೆ :ಟಿಡಿ 126 ಟಿಡಿಓ 2022. ದಿನಾಂಕ 19-05-2022 ರ ಅನ್ವಯ ಇಂಥ ಉಲ್ಲಂಘನೆ ಮಾಡಿರುವ ಪೊಲೀಸ ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿರುತ್ತದೆ… ಎಂದು ಡಾ. ಜಿ ಪರಮೇಶ್ವರ್ ಗೃಹ ಸಚಿವರು ದಿನಾಂಕ 11-03-2025 ರಂದು ಕರ್ನಾಟಕ ವಿಧಾನಸಭೆಯಲ್ಲಿ ಶ್ರೀ ಬಾಲಕೃಷ್ಣ ಸಿಎನ್ ಸದಸ್ಯರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ಮೂಲಕ ಸರ್ಕಾರದ ಪೋಲಿಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರವಲ್ಲದೇ ಇಡೀ ಕುಟುಂಬದ ಸದಸ್ಯರು ಸಹ ತಾವು ಸಹ ಅಧಿಕಾರಿಗಳಾಗಿರುವಂತೆ ತಮ್ಮ ಪರಿವಾರದವರು ವಾಹನಗಳ ಮೇಲೆ ಪೋಲಿಸ್ ಎಂಬ ಸ್ಟಿಕ್ಕರ್ ಅಂಟಿಸಿ ಕೊಂಡು ಓಡಾಡುವದು ಮತ್ತು ಅವರ ಹಳೇಯ ವಾಹನ ಖರೀದಿ ಕೊಂಡ ಬೇರೆಯವರು ಆ ಹಳೇಯ ಸ್ಟಿಕ್ಕರ್ ತೆಗೆಯದೇ ಹಾಗೆಯೇ ಓಡಾಡುವುದಕ್ಕೆ ಕಡಿವಾಣ ಬಿದ್ದಂತಾಗಿದೆ.

….

Continue Reading

ರಾಜ್ಯ

ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಹುಚ್ಚುನಾಯಿ, ಸಿಕ್ಕಸಿಕ್ಕವರ ಮೇಲೆ ದಾಳಿ

Nulla pariatur. Excepteur sint occaecat cupidatat non proident, sunt in culpa qui officia deserunt mollit anim id est laborum.

Published

on

ಚಿಕ್ಕಬಳ್ಳಾಪುರದ ಪೆರೇಸಂದ್ರ ಗ್ರಾಮದಲ್ಲಿ ಹುಚ್ಚು ನಾಯಿಯೊಂದು 10ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿರುವಂತಹ ಘಟನೆ ನಡೆದಿದೆ. ಮಕ್ಕಳು, ವೃದ್ಧರು ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯತಿ ಹುಚ್ಚು ನಾಯಿಯನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.

ಚಿಕ್ಕಬಳ್ಳಾಪುರ, ಫೆಬ್ರವರಿ 21: ಆ ಗ್ರಾಮದಲ್ಲಿ ಮೊದಲೇ ನಾಯಿಗಳ (dog) ಹಾವಳಿ ಹೆಚ್ಚು. ನಾಯಿಗಳ ಹಿಂಡು ಕಂಡು ಮಕ್ಕಳು, ಮಹಿಳೆಯರು ಹೊರಬರುವುದೇ ಕಷ್ಟ. ಇಂತಹದ್ದರಲ್ಲಿ ಸಾಕಿದ ನಾಯಿಯೊಂದು ಹುಚ್ಚು ನಾಯಿಯಂತಾಗಿದ್ದು, ಸಿಕ್ಕಸಿಕ್ಕವರ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿದರೆ, ಇನ್ನೊಂದಡೆ ಸಕಾಲಕ್ಕೆ ಚಿಕಿತ್ಸೆ ನೀಡಲು ವೈದ್ಯರು ಇರಲೇ ಇಲ್ಲವೆಂದು ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಚ್ಚು ನಾಯಿ ಕಾಟ: ವೈದ್ಯರ ವಿರುದ್ದ ಆಕ್ರೋಶ

ಕೈ, ಕಾಲು, ಮುಖ, ಮೂತಿ, ಮಕ್ಕಳು, ವೃದ್ದರು, ಮಹಿಳೆಯರು ಎನ್ನದೇ ವಿಕೃತವಾಗಿ ಹುಚ್ಚು ನಾಯಿಯೊಂದು ಸಿಕ್ಕಸಿಕ್ಕವರನ್ನು ಗಾಯಗೊಳಿಸಿರುವುದು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಗ್ರಾಮದಲ್ಲಿ. ಗ್ರಾಮದ ಮಹಿಳೆಯೊಬ್ಬರು ನಾಯಿಗಳನ್ನು ಸಾಕಿಕೊಂಡಿದ್ದರು. ಅದರಲ್ಲಿ ಒಂದು ನಾಯಿಗೆ ಹುಚ್ಚು ಹಿಡಿದಿದ್ದು, ಕಳೆದ 2 ದಿನಗಳಿಂದ ಕಣ್ಣಿಗೆ ಕಾಣಿಸಿದವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ಇನ್ನು ಗಾಯಾಳುಗಳು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋದರೆ ಅಲ್ಲಿ ವೈದ್ಯರಿಲ್ಲದ ಕಾರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಸಿಲಿನ ಹೊಡೆತಕ್ಕೆ ಬೆಂಗಳೂರಿನಲ್ಲಿ ಮನೆಯೊಳಗೆ ಬರುತ್ತಿವೆ ವಿಷಕಾರಿ ಹಾವುಗಳು

ಇನ್ನು ಕಳೆದ 2 ದಿನಗಳಿಂದ ಪೆರೇಸಂದ್ರ ಗ್ರಾಮದ 5 ವರ್ಷದ ಚಂದುಶ್ರೀ, 2 ವರ್ಷದ ಮಿತುನ್, 39 ವರ್ಷದ ರಾಮು, 45 ವರ್ಷದ ರಾಮಚಂದ್ರ ಗಂಭೀರ ಗಾಯಗೊಂಡಿದ್ದರೆ, ಇತ್ತ ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ನುಗ್ಗಿದ ನಾಯಿ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಜೊಯಬ್, ಸಿಬ್ಬಂದಿ ನಾಗಮಣಿ, ರಬ್ಸಲ್ ಎನ್ನುವವರಿಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದ ಗಾಯಾಳು ಚಂದುಶ್ರೀ ತಾಯಿ ಉಮಾ ಅವರು ಕಾಲೇಜಿನಲ್ಲಿ ನಾಯಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ

ಹುಚ್ಚು ನಾಯಿ ಹಾವಳಿಯಿಂದ ಬೆಚ್ಚಿಬಿದ್ದ ಪೆರೇಸಂದ್ರ ಗ್ರಾಮಪಂಚಾಯ್ತಿ ಅಧಿಕಾರಿಗಳು, ಹುಚ್ಚುನಾಯಿ ಹಿಡಿಯುವ ಆಪರೇಷನ್ ಆರಂಭಿಸಿದ್ದಾರೆ. ಆದರೆ ಹುಚ್ಚುನಾಯಿ ಮಾತ್ರ ಕಣ್ಣಿಗೆ ಕಾಣಿಸದೇ ಮರೆಮಾಚಿಕೊಂಡಿದೆ. ಆದರೂ ಸಿಕ್ಕಸಿಕ್ಕ ನಾಯಿಗಳನ್ನು ಹಿಡಿವು ಆಸ್ತ್ರಾ ಸಂಸ್ಥೆಯ ಸಿಬ್ಬಂದಿಗಳು ವ್ಯಾಕ್ಸಿನೇಷನ್ ಆರಂಭಿಸಿದ್ದಾರೆ. ಮತ್ತೊಂದಡೆ ಎಲ್ಲಿ ಮತ್ತೆ ನಾಯಿ ದಾಳಿ ಮಾಡುತ್ತದೋ ಎಂದು ಜನರು ಭಯಭೀತರಾಗಿದ್ದಾರೆ.

Continue Reading
Advertisement

Trending