Connect with us

ಸ್ಥಳೀಯ ಸುದ್ದಿ

ಅಂಕೋಲಾದ ಕ್ರಿಸ್ತಮಿತ್ರ ಆಶ್ರಮದಲ್ಲಿ ಅಪ್ಪು 50ನೇ ಹುಟ್ಟು ಹಬ್ಬ ಆಚರಣೆ..

Published

on

ನಟ ದಿವಂಗತ ಪುನೀತ್ ರಾಜ್ ಕುಮಾರ್ ಅವರ 50 ನೇ ಹುಟ್ಟುಹಬ್ಬವನ್ನ ಅಂಕೋಲಾದ ಕ್ರಿಸ್ತ ಮಿತ್ರ ಆಶ್ರಮದಲ್ಲಿ ಅಪ್ಪು ಅಭಿಮಾನಿಗಳು ನಿನ್ನೆ ದಿನಾಂಕ 17-03-2025 ರಂದು ಸಂಭ್ರಮದಿಂದ ಆಚರಿಸಿದ್ದಾರೆ.

ಅಂಕೋಲಾ ನಗರಕ್ಕೆ ಹೊಂದಿಕೊಂಡಿರುವ ಅಜ್ಜಿಕಟ್ಟ ಬಳಿ ಇರುವ ಕ್ರಿಸ್ತಮಿತ್ರ ವೃದ್ಧಾಶ್ರಮದಲ್ಲಿ ಕ್ಲಬ್ ವಿ ಪಿಟ್ನೆಸ್ ಜಿಮ್ ನ ಮಾಲಿಕರಾದ ವಿಘ್ನೇಶ ನಾಯ್ಕ ಹಾಗೂ ಪುನೀತ್ ರಾಜಕುಮಾರ್ ಗೆಳೆಯರ ಬಳಗ ನೀಲಾಂಪುರದ ಅಭಿಮಾನಿಗಳು ವೃದ್ಧಾಶ್ರಮದಲ್ಲಿ ದಿವಂಗತ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.

ಪುನೀತ್ ರಾಜಕುಮಾರ್ ಗೆಳೆಯರ ಬಳಗ ನಿಲಂಪುರ ದವರು ಅನಾಥ ವೃದ್ಧರಿಗೆ ಹಣ್ಣು- ಹಂಪಲು, ಹಾಲು ಬ್ರೆಡ್, ವಿತರಿಸಿದರು .

ಕ್ಲಬ್ ವಿ ಪಿಟ್ನೆಸ್ ಜಿಮನ್ ಮಾಲಿಕ ವಿಘ್ನೇಶ್ ನಾಯ್ಕರು ಊಟದ ವ್ಯವಸ್ಥೆ ಮಾಡಿಸಿಕೊಟ್ಟರು.

ಪುನೀತ್ ರಾಜಕುಮಾರ್ ಗೆಳೆಯರ್ ಬಳಗ ನಿಲಂಪುರ ಹಾಗೂ ವಿಘ್ನೇಶ್ ನಾಯ್ಕರು ಅನಾಥ ವೃದ್ಧರೊಂದಿಗೆ ಸ್ವಲ್ಪ ಹೊತ್ತು ಆಶ್ರಮದಲ್ಲಿ ಹಿರಿಯ ಜೀವಗಳ ಉಭಯ- ಕುಶಲೋಪರಿ ವಿಚಾರಿಸಿ ಕಾಲ- ಕಳೆದು ನಂತರ ಇವರೆಲ್ಲರೂ ಪುನೀತ್ ರಾಜಕುಮಾರ್ ಫೋಟೋಗೆ ಪುಷ್ಪ ನಮನ ಸಲ್ಲಿಸಿ ಅರ್ಥಪೂರ್ಣವಾಗಿ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.

Click to comment

Leave a Reply

Your email address will not be published. Required fields are marked *

ಸ್ಥಳೀಯ ಸುದ್ದಿ

ಅಂಕೋಲಾ : ವೈ. ಆರ್ ಸದಾಶಿವ ರೆಡ್ಡಿಯ ಮೇಲೆ ಹಲ್ಲೆ ತಾಲೂಕ ವಕೀಲರ ಸಂಘ ಖಂಡನೆ, ವಕೀಲರ ಸಂರಕ್ಷಣಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಆಗ್ರಹ..

Published

on

ಅಂಕೋಲಾ :ಭಾರತೀಯ ವಕೀಲ ಪರಿಷತ್ತಿನ ಸದಸ್ಯರು. ಪದಾಂಕಿತ ಹಿರಿಯ ವಕೀಲರಾದ ವೈ ಆರ್ ಸದಾಶಿವ ರೆಡ್ಡಿ ಅವರ ಕಚೇರಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ. ಸೋಮವಾರ ಅಂಕೋಲಾ ವಕೀಲರ ಸಂಘದ ಎಲ್ಲಾ ಸದಸ್ಯರು ನ್ಯಾಯಾಲಯದ ಕಾರ್ಯಕ್ರಮದಿಂದ ದೂರ ಉಳಿಯುವುದರೊಂದಿಗೆ ನಂತರ ಅಂಕೋಲಾದ ಪ್ರಮುಖ ರಸ್ತೆಯಿಂದ ಕಾಲ್ನಡಿಗೆ ಮೂಲಕ ರಸ್ತೆ ಯುದ್ಧಕ್ಕೂ ಘೋಷಣೆಯನ್ನು ಕೂಗಿ ಅಂಕೋಲಾ ತಹಶೀಲ್ದಾರರ ಕಚೇರಿಗೆ ಬಂದು ವಕೀಲ ಸಂಘದ ಪ್ರಮುಖರು ಮೊದಲು ವಕೀಲರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ್ದು ನಂತರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ನೀಡಿದರು . ತಹಶೀಲ್ದಾರರ ಪರವಾಗಿ ಗಿರೀಶ ಜಾಂಬ್ಳೆಕರ್ ಮನವಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗಾನಂದ ಬಂಟ ವಕೀಲರು ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಇವರ ಮೇಲಿನ ಹಲ್ಲೆಯನ್ನು ಅಂಕೋಲಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ವಕೀಲರ ರಕ್ಷಣೆಯನ್ನು ನೀಡಲು ಕಾಯ್ದೆ ಪಾಸಾಗಿದ್ದು. ಆದರೂ ಸಹ ವಕೀಲರ ಮೇಲೆ ಹಲ್ಲ್ಲೆಯಾಗುವುದನ್ನು ತಡಿಲಿಕ್ಕೆ ಸಾಧ್ಯವಾಗುತ್ತಿಲ್ಲ . ಮಾರಣಾಂತಿಕ ಹಲ್ಲೆ ಮಾಡುವ ಅಮಾನುಷ ಕೃತ್ಯಗಳನ್ನು ಪದೇ ಪದೇ ಮಾಡುತ್ತಿದ್ದು, ವಿಶೇಷವಾಗಿ ನಮ್ಮ ವಕೀಲರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸುತ್ತೇವೆ. ವೈ.ಆರ್ ಸದಾಶಿವ ರೆಡ್ಡಿ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು..

ಹಿರಿಯ ವಕೀಲ ಉಮೇಶ್ ನಾಯ್ಕರು ಮಾತನಾಡಿ ಕರ್ನಾಟಕ ಸರ್ಕಾರ ವಕೀಲರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ವಕೀಲ ರಕ್ಷಣೆ ಗೋಸ್ಕರ ಮಾಡಿರುವ ಕಾಯ್ದೆ ಇದ್ದರು ಸರಿಯಾಗಿ ಜಾರಿಗೆ ಬರದೆ ವಕೀಲರಿಗೆ ರಕ್ಷಣೆ ಇಲ್ಲದಾಗಿದೆ.. ಕೂಡಲೇ ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂದಿಸಬೇಕು ಎಂದರು.

ವಕೀಲ ಬಿ. ಡಿ.ನಾಯ್ಕ್ ಮಾತನಾಡಿ ವೈ.ಆರ್. ಸದಾಶಿವ ರೆಡ್ಡಿಯವರ ಮೇಲೆ ಆಗಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.. ವಕೀಲ ರಕ್ಷಣೆಗೆ ಇರುವ ಕಾಯ್ದೆ ಜಾರಿಗೆ ಇದ್ದರೂ ಅದು ಇನ್ನು ಪೂರ್ತಿ ಆಗದೆ ಇರುವುದರಿಂದ ವಕೀಲರ ಮೇಲೆ ಇನ್ನು ಹಲ್ಲೆಯಾಗುತ್ತಿದೆ. ಈ ಕಾಯ್ದೆ ಶೀಘ್ರವಾಗಿ ಜಾರಿಗೆ ಬರುವಂತೆ ಹಾಗೂ ವೈ. ಆರ್ ಸದಾಶಿವರೆಡ್ಡಿ ಹಿರಿಯ ವಕೀಲರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದರು..

ವಕೀಲರ ಸಂಘದ ಅಧ್ಯಕ್ಷ ದೀಕ್ಷಿತ ನಾಯಕ ಮಾತನಾಡಿ ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವುದು. ನಾವು ಪ್ರತಿಭಟನೆ ಮಾಡುತ್ತಿರುವುದಾಗಿದೆ, ಆದರೆ ನಮಗೆ ರಕ್ಷಣೆ ಇಲ್ಲ . ಈ ಕೂಡಲೇ ಸರ್ಕಾರ ವಕೀಲರ ಸುರಕ್ಷತೆ ಮತ್ತು ರಕ್ಷಣೆ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದರು….

ವಕೀಲರ ಸಂಘದ ಹಿರಿಯ ಸದಸ್ಯ ವಿ ಎಸ್ ನಾಯಕ . ಹಾಗೂ ಸಂತೋಷ್ ನಾಯ್ಕ್. ವೈ ಆರ್ ಸದಾಶಿವ ರೆಡ್ಡಿ ಇವರ ಮೇಲೆ ಆದ ಹಲ್ಲೆಯನ್ನು ಖಂಡಿಸಿ ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಅಂಕೋಲಾ ವಕೀಲರ ಸಂಘದ ಆರ್ ಟಿ ಗೌಡ, ನಿತ್ಯಾನಂದ ಕವರಿ ,ವಿನೋದ ಶಾನಭಾಗ, ಸಂತೋಷ ನಾಯ್ಕ ಬೆಲೆಕೇರಿ, ಸುರೇಶ ಬಾನಾವಳಿಕರ್, ಗುರುನಾಯ್ಕ, ಗಜಾನನಾ ನಾಯ್ಕ, ಮಮತಾ ಕೆರೆಮನೆ, ಮೋನಿಷ, ಬಿಟಿ ನಾಯಕ, ರಾಜು ಹರಿಕಂತ್ರ, ಪ್ರಸನ್ನ .ತೇಜು ಬಂಟ್, ಪ್ರಕೃತಿ ನಾಯಕ, ದೇವಿ ಗೌಡ, ಪ್ರಸಾದ ನಾಯಕ ಮತ್ತು ಲೇಖನಾ ಬಾಡಕರ್ ಭಾಗವಹಿಸಿದ್ದರು.

Continue Reading

ಸ್ಥಳೀಯ ಸುದ್ದಿ

ಸರ್ಕಾರಿ ಬಾವಿಗೆ ಅಡ್ಡ ಬಂದ ಬಂಡೆಕಲ್ಲು : 2 ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಮತ್ತೊಂದು ಗುತ್ತಿಗೆದಾರನಿಂದ ಮುಂದುವರಿಸುವ ಯತ್ನ : ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಂಗೂ ಗೌಡನ ವಿರುದ್ಧ ದೂರು ದಾಖಲಿಸಿದ ಸಂಜೀವ್. ಪಿ ನಾಯ್ಕ..

Published

on

ಅಂಕೋಲಾ : ಪುರಸಭೆ ವ್ಯಾಪ್ತಿಯ ಅಂಬಾರಕೊಡ್ಲದಲ್ಲಿ ಸರ್ಕಾರಿ ಕುಡಿಯುವ ನೀರಿನ ಬಾವಿಯ ಕಾಮಗಾರಿಯನ್ನು ಪ್ರಾರಂಭಿಸಿ ತಳಭಾಗದಲ್ಲಿ ಬಂಡೆಕಲ್ಲು ಬಂದಿದ್ದರಿಂದ 2 ವರ್ಷದ ಹಿಂದೆ ಸ್ಥಗಿತಗೊಂಡ ಕಾಮಗಾರಿಯಿಂದ ಜೊತೆಗೆ ಮಾಡಿದ ಕೆಲಸಕ್ಕೆ ಸರಿಯಾಗಿ ಪುರಸಭೆಯಿಂದ 60,000 ರೂ ಬಿಲ್ ಪಾವತಿ ಆಗದೆ ದೋಷವಿದ್ದ ಬಾವಿಯ ಕಾಮಗಾರಿಯನ್ನು ಮುಂದುವರಿಸಲು ಹೋಗಿ ತಾಲೂಕಿನ ಗುತ್ತಿಗೆದಾರನೋರ್ವ ತಪ್ಪೊಪ್ಪಿಗೆ ಬರೆದು ಕೊಟ್ಟು ಪಜೀತಿಗೆ ಒಳಗಾಗಿದ್ದು, ಸದರಿ ಗುತ್ತಿಗೆದಾರನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನಲೆ : ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಕಳೆದ 2023ನೇ ಸಾಲಿನಲ್ಲಿ ಗುತ್ತಿಗೆ ಆದರದ ಮೇಲೆ ಅಂಬಾರ ಕೊಡ್ಲಾ ಗದ್ದುಗೆ ದೇವಸ್ಥಾನ ಪಕ್ಕದಲ್ಲಿ ಕುಡಿಯುವ ನೀರಿನ ಬಾವಿಯೊಂದರ ನಿರ್ಮಾಣದ ಕಾಮಗಾರಿಯನ್ನು ಪಡೆದುಕೊಂಡಿದ್ದ ಕೋಟೆವಾಡದ ಸಂಜೀವ ಪಿ. ನಾಯ್ಕ್ ಗುತ್ತಿಗೆದಾರನಿಗೆ ಪುರಸಭೆ ಎಸ್ಟಿಮೇಟ್ ಪ್ರಕಾರ ನಿಗದಿತ 32 ಪುಟದ ಬಾವಿ ಯನ್ನು ನಿರ್ಮಾಣ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು..

ಸದರಿ ಕಾಮಗಾರಿಯನ್ನು ಕೈಗೊಂಡಾಗ ಗುತ್ತಿಗೆದಾರನ ದುರಾದೃಷ್ಟವೊ ಎನ್ನುವಂತೆ ಸದರಿ ಬಾವಿಯ 20 ಪುಟ್ ಅಂತರಕ್ಕೆ ಬಾವಿಯ ತಳ ಭಾಗದಲ್ಲಿ ಬಂಡೆಕಲ್ಲು ಬಂದಿದ್ದರಿಂದ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಂಡೆಯನ್ನು ಒಡೆಯಲು Re Estimate ಮಾಡಿಕೊಡುವಂತೆ ವಿನಂತಿಸಿದರು. ಆದರೆ ಪುರಸಭೆಯ ಅಂದಿನ ಇಂಜಿನಿಯರ ಕಾಮಗಾರಿ ಮುಂದುವರಿಸುವ ಬಗ್ಗೆ ಯಾವುದೇ ಪರಿಹಾರದ ಕ್ರಮವನ್ನು ಸೂಚಿಸದೇ ಇರುವ ಕಾರಣ ಅನಿವಾರ್ಯವಾಗಿ ಸಂಜೀವ್ ನಾಯ್ಕ್ ರವರು ನಿಯಮದಂತೆ ಕುಡಿಯುವ ನೀರಿನ ಬಾವಿಯ ಒಳಭಾಗದಲ್ಲಿ ಸುತ್ತಲೂ ಚಿರೆ ಕಲ್ಲನ್ನು ಕಟ್ಟಿ. ಸದ್ರಿ ಬಾವಿಯ 20 ಪುಟಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಿದರು .

ನಂತರ ತಾನು ಮಾಡಿದ ಕಾಮಗಾರಿಗೆ ತಕ್ಕಂತೆ ಎಸ್ಟಿಮೇಟ್ ಮಾಡಿ ಸದರಿ ಬಾವಿಯ ಬಿಲ್ಲನ್ನು ಪಾವತಿಸುವಂತೆ ಅಂದಿನ ಪುರಸಭೆ ಇಂಜಿನಿಯರ್ ಭಾಸ್ಕರ್ ಗೌಡ ರವರಿಗೆ ಕೋರಿಕೊಂಡಿದ್ದು. ನಂತರ ಗುತ್ತಿಗೆದಾರನ ಮನವಿಗೆ ಸರಿಯಾಗಿ ಸ್ಪಂದಿಸದ ಭಾಸ್ಕರ್ ಗೌಡರ ವಿರುದ್ಧ ಗುತ್ತಿಗೆದಾರ ಸಂಜೀವ್ ನಾಯ್ಕರು ಪುರಸಭೆಯಲ್ಲಿ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಇಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು. ಅಂದು ಈ ವಿಷಯವು ಬಾರಿ ಸಂಚಲವನ್ನು ಉಂಟು ಮಾಡಿತ್ತು.. ಗುತ್ತಿಗೆದಾರನ ಹೋರಾಟದ ಫಲವಾಗಿ ಅಧಿಕಾರಿಗಳು ರೂ 1,60,000 ಕಾಮಗಾರಿ ಆಗಿದೆ ಎಂದು ಎಸ್ಟಿಮೇಟ್ ವರದಿ ತಯಾರಿಸಲಾಗಿತ್ತು.ಹಾಗಾಗಿ ಗುತ್ತಿಗೆದಾರನಿಗೆ ಪುರಸಭೆಯಿಂದ 1.03800 ರೂಪಾಯಿಗಳನ್ನು ಮಂಜೂರಿ ಮಾಡಿದ್ದು . ಸದರಿ ಹಣದಲ್ಲಿ GST ಇನ್ನುಳಿದ ಖರ್ಚು ಕಳೆದು 98000 ರೂ ಸಾವಿರ ರೂಪಾಯಿಗಳು ಗುತ್ತಿಗೆದಾರನಿಗೆ ಜಮಾ ಆಗಿತ್ತು.ಇನ್ನು ಬಾಕಿ 60.000 ರೂ ಹಣ ಗುತ್ತಿಗೆದಾರನಿಗೆ ಪುರಸಭೆಯಿಂದ ಸಂದಾಯವಾಗಬೇಕಿತ್ತು.

2 ವರ್ಷದ ನಂತರ ಸದರಿ ಬಾವಿಯ ಕಾಮಗಾರಿಗೆ ಮತ್ತೊಬ್ಬ ಗುತ್ತಿಗೆದಾರನ ಎಂಟ್ರಿ. – ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

2023 ರಲ್ಲಿ ಸ್ಥಗಿತಗೊಂಡಿದ್ದ ಬಾವಿಯ ಕಾಮಗಾರಿಯನ್ನು ಅಧಿಕಾರಿಗಳು Re estimate ಮಾಡದೇ ಇರುವ ಕಾರಣ ಮತ್ತು ತನಗೆ ಬರಬೇಕಾದ ಬಾಕಿ ಇರುವ 60,000 ರೂ ಬಿಲ್ ಪಾವತಿ ಮಾಡುವಂತೆ ಗುತ್ತಿಗೆದಾರ ಸಂಜೀವ್ ನಾಯ್ಕರು ಮಾಹಿತಿ ಹಕ್ಕು ಅರ್ಜಿಯನ್ನು ಬಳಸಿ ದಾಖಲೆಗಳನ್ನು ಸಂಗ್ರಹಿಸುತ್ತಾ. ತನಗೆ ಕಾಮಗಾರಿಯಲ್ಲಿ ಬಿಲ್ ಪಾವತಿ ಮಾಡಲು ಅಧಿಕಾರಿಗಳು ತೋರಿದ ಬೇಜವಾಬ್ದಾರಿ, ಇನ್ನಿತರ ಕೆಲವು ಕಾರಣಗಳನ್ನು ಲೋಕಾಯುಕ್ತರು ಹಾಗೂ ಇನ್ನಿತರ ಸಕ್ಷಮ ಪ್ರಾಧಿಕಾರಗಳಿಗೆ ನೀಡಿ ದೂರು ಅರ್ಜಿ ಸಲ್ಲಿಸುತ್ತಾ ಹೋರಾಟವನ್ನು ನಡೆಸುತ್ತಾ ಬಂದಿರುತ್ತಾರೆ.

ಹೀಗಿರುವಾಗ ತಾಲೂಕಿನ ಮತ್ತೊಬ್ಬ ಗುತ್ತಿಗೆದಾರ ಮಂಗೂ ಗೌಡ ಎಂಬುವವರು ದಿನಾಂಕ 14-04-2025 ರಂದು ಸದರಿ ಬಾವಿಯಲ್ಲಿ ಅಳವಡಿಸಿದ್ದ ಚೀರೆ ಕಲ್ಲನ್ನು ತೆಗೆದು ಬಾವಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದು. ಜೊತೆಗೆ ಸಾರ್ವಜನಿಕವಾಗಿ ಪುರಸಭೆಗೆ ಹಾನಿಯಾಗಿದೆ. ತನಗೂ 60000 ರೂ ಪುರಸಭೆಯಿಂದ ಬಿಲ್ ಬರಬೇಕಾಗಿದ್ದು , ಸದರಿವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಸಂಜೀವ್ ಪಿ ನಾಯ್ಕ್ ಅಂಕೋಲಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಅಂಕೋಲಾ ಪೋಲೀಸರು ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು. ಆರೋಪಿತ ವ್ಯಕ್ತಿಯು ಸದರಿ ಬಾವಿ ಯನ್ನು ಪುನಹ ಸರಿಪಡಿಸಿ ಕೊಡುತ್ತೇನೆ ಎಂದು ಮುಚ್ಚಳಕ್ಕೆ ಬರೆದು ಕೊಟ್ಟಿದ್ದಾನೆ ಎಂದು ಸಂಜೀವ್ ಪಿ ನಾಯ್ಕ್ ಇವರು ವಿಕಾಸ ವಾಹಿನಿಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ತೆರಿಗೆ ದುಡ್ಡು ಪೋಲು

ಅಂಕೋಲಾ ಪುರಸಭೆಯ ಅಂಬಾರಕೊಡ್ಲದ ಗದ್ದುಗೆ ದೇವಸ್ಥಾನದ ಹತ್ತಿರ 2023 ರ ಮೊದಲೇ ಸಾರ್ವಜನಿಕ ಬಾವಿಯನ್ನು ನಿರ್ಮಿಸಲಾಗಿತ್ತು.. ನಂತರ ಅಲ್ಲಿಯೇ ಪಕ್ಕದಲ್ಲಿ ಗುತ್ತಿಗೆದಾರ ಸಂಜೀವ ಪಿ . ನಾಯ್ಕ್ ರವರು ಇನ್ನೊಂದು ಬಾವಿಯನ್ನು ನಿರ್ಮಿಸಲು ಮುಂದಾದಾಗ ತಳ ಭಾಗದಲ್ಲಿ ಬಂಡೆಕಲ್ಲು ಬಂದು ಸ್ಥಗಿತವಾಗಿತ್ತು. ಈಗ ಅದೇ ಸ್ಥಳದಲ್ಲಿ ಇನ್ನೊಂದು ಬಾವಿಯನ್ನು ಮಾಡಲು ಪುರಸಭೆಯಿಂದ ಮುಂದಾಗಿದ್ದಾರೆ ಎಂಬ ವಿಷಯ ಗುಟ್ಟಾಗಿ ಏನು ಉಳಿದಿಲ್ಲ. ಹೀಗೆ ಒಂದೇ ಕ್ಷೇತ್ರದಲ್ಲಿ ಒಂದಾದ ನಂತರ ಒಂದರಂತೆ ಬಾವಿಯನ್ನು ತೋಡಲು ಆಸಕ್ತಿ ತೋರುತ್ತಿರುವ ಅಧಿಕಾರಿಗಳ ನಡೆಯ ಹಿಂದೆ ಸಾರ್ವಜನಿಕರ ತೆರಿಗೆ ದುಡ್ಡು ಬೇಕಾಬಿಟ್ಟಿ ಪೋಲು ಮಾಡುವ ಉದ್ದೇಶವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.

ಬಾವಿಗಾಗಿ ಮೀಸಲಾಗಿರುವ ಜಾಗ ಪಹಣಿ ಪತ್ರಿಕೆಯಲ್ಲಿ ಎಂಟ್ರಿ ಆಗುತ್ತಿಲ್ಲ -ಸ್ವಾದಿನಪಡಿಸಿಕೊಳ್ಳದೇ ಕಾಮಗಾರಿಗೆ ಚಾಲನೆ ನೀಡುವುದು ಅನಧಿಕೃತ….

ಹೌದು ಅಂಕೋಲಾ ಪುರಸಭೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅನೇಕ ಕಾಮಗಾರಿಗಳು ನಡೆಯುತ್ತಿದೆ. ಆದರೆ ಕಾಮಗಾರಿ ಖಾಸಗಿ ಅವರ ಕ್ಷೇತ್ರದಲ್ಲಿ ನಡೆದರೆ ಮೊದಲು ಖಾಸಗಿ ಅವರು ಸದರಿ ಸ್ಥಳವನ್ನು ಪುರಸಭೆಗೆ ಸ್ವಾದಿನ ಮಾಡಬೇಕು.. ಅಲ್ಲಿ ಖಾಸಗಿಯವರ ನಿರಾಕ್ಷೇಪಣಾ ಪತ್ರ ಮುಖ್ಯವಾಗಿದೆ. ಆದರೆ ಅಧಿಕಾರಿಗಳು ಕಾಮಗಾರಿ ನಡೆಯುವ ಪೂರ್ವದಲ್ಲಿ ಸದರಿ ಪಹಣಿ ಪತ್ರಿಕೆಯನ್ನು ಸ್ವಾದಿನ ಪಡಿಸಿಕೊಳ್ಳದೆ ಕಾನೂನುಬಾಹಿರುವಾಗಿ ಸಾಕಷ್ಟು ಕಾಮಗಾರಿ ನಡೆಸಿದ್ದಾರೆ. ಈಗಲೂ ಕೂಡ ಕೆಲವೊಂದು ಕಡೆ ಖಾಸಗಿ ಅವರ ಕಡೆಯಿಂದ ಸ್ವಾಧೀನ ಪಡಿಸಿ ಕೊಳ್ಳದೆ ಕಾಮಗಾರಿ ನಡೆಯುತ್ತಿದೆ. ಸದರಿ ದಾಖಲೆಗಳನ್ನು ಪಡೆಯಲು ಕಾಮಗಾರಿಗೆ ಸರ್ವೇ ಸಮೇತ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದರೆ ತಹಶೀಲ್ದಾರ ಕಛೇರಿಯಿಂದ ಕಾಮಗಾರಿ ನಡೆದ ಸ್ಥಳದ ಪಹಣಿ ಪತ್ರಿಕೆ ತೆಗೆದುಕೊಳ್ಳಿ ಎಂದು ಹಾರಿಕೆ ಹಿಂಬರಹ ನೀಡುವುದು ವಾಡಿಕೆಯಾಗಿ ಬಿಟ್ಟಿದೆ.

ಯಾವುದೇ ಕಾಮಗಾರಿ ಸ್ವಾಧೀನ ಪಡಿಸಿಕೊಳ್ಳುವ ಮುಂಚೆಯೇ ನಡೆಸಿದರೆ ಕಾನೂನು ಹೋರಾಟ ಮಾಡುತ್ತೇನೆ – ಸಂಜಿವ. ಪಿ ನಾಯ್ಕ.

ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಖಾಸಗಿ ಮಾಲೀಕರಿಂದ ಸ್ವಾದಿನ ಪಡಿಸಿಕೊಳ್ಳುವ ಮುಂಚೆಯೇ ಮಾಡಲಾಗುತ್ತಿದೆ. ಹುಲುಸ್ವಾರ ಕೇರಿಯಲ್ಲಿ ತುಳುಸು ಗೌಡ ಎಂಬುವವರು 32 ಪುಟದ ಬಾವಿಯನ್ನು 2023ರಲ್ಲಿ ನಿರ್ಮಿಸಿದ್ದು ಸದರಿ ಬಾವಿಗೆ ಎರಡು ಲಕ್ಷದ 36 ಸಾವಿರ ರೂಪಾಯಿ ಯನ್ನು 3 ಕಂತಿನಲ್ಲಿ ಪಾವತಿಸಲಾಗಿದ್ದು.. ಇಲ್ಲಿ ನನ್ನಂಥ ಹೋರಾಟದ ಮನೋಭಾವನೆಯುಳ್ಳಂತಹ ವ್ಯಕ್ತಿಗಳು ಕಾನೂನು ಪ್ರಕಾರ ಕೆಲಸ ಮಾಡಿ. ಮಾಡಿದ ಕೆಲಸಕ್ಕೆ ಯಾವ ಅಧಿಕಾರಿಗಳಿಗೂ ಒಂದು ರೂಪಾಯಿ ಲಂಚ ಕೊಡದೆ ನ್ಯಾಯಯುತವಾಗಿ ಬಿಲ್ ಪಾವತಿ ಮಾಡುವಂತೆ ಕೇಳಿದರೆ ಕಾಮಗಾರಿ ನಡೆಸಿದ ಎರಡು ಮೂರು ವರ್ಷ ಆದರೂ ಹಣ ಪಾವತಿ ಆಗಿಲ್ಲ.

ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದು.ಈ ಬಗ್ಗೆ ತಾರತಮ್ಯದ ನೀತಿಯ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೆಲವು ದಾಖಲೆಗಳಿಂದ ನನಗೆ ತಿಳಿದು ಬಂದಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಕೂಡ ಇದೆ. ಇನ್ನು ಮುಂದಿನ ದಿನಗಳಲ್ಲಿ ಪುರಸಭೆಯಲ್ಲಿ ನಡೆಯುತ್ತಿರುವ ಕಾಮಗಾರಿ ವಿಷಯದಲ್ಲಿನ ಭ್ರಷ್ಟಾಚಾರಗಳನ್ನು ಬಯಲಿ ಗೆಳೆಯುತ್ತೇನೆ.- ಸಂಜೀವ್. ಪಿ. ನಾಯ್ಕ್. ( ಕೋಟೆವಾಡ )

Continue Reading

ಸ್ಥಳೀಯ ಸುದ್ದಿ

ಮದುವೆ ಸಭೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲಗಳನ್ನು ಪುಜಗೇರಿ ಹಳ್ಳದ ಅಕ್ಕಪಕ್ಕ ಸುರಿದು ಬೆಂಕಿ ಹಾಕುತ್ತಿರುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಳ….

Published

on

ಅಂಕೋಲಾ : ತಾಲೂಕಿನ ಪೂಜಗೇರಿ ಹಳ್ಳದ ಕಿರು ಸೇತುವೆ ಪಕ್ಕ ಪೂರ್ವ ದಿಕ್ಕಿನಲ್ಲಿ ಸರಿಸುಮಾರು ನೂರು ಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಹಳ್ಳಕ್ಕೆ ಲಗತ್ತಾಗಿ ನಿರ್ಮಿಸಲಾಗಿದೆ.. ಸದರಿ ರಸ್ತೆಯ ಲಾಭವನ್ನು ಪಡೆದು ಸಂಜೆಯಾಗುತ್ತಿದ್ದಂತೆ ಟಾಟಾ ಏಸ್ ರಿಕ್ಷಾದ ಮೇಲೆ ಗಾಡಿ ತುಂಬಾ ಮದುವೆ, ಸಭೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು, ಇನ್ನಿತರ ತ್ಯಾಜ್ಯ ವಸ್ತುಗಳನ್ನು ತಂದು ಹಳ್ಳದ ಪಕ್ಕ ಸುರಿದು ಬೆಂಕಿ ಹಾಕುವ ಕಿಡಿಗೇಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ..

ರಿಯಲ್ ಎಸ್ಟೇಟ್ ಮಾಫಿಯಾ ಗಳಿಂದ ಕೃಷಿ ಭೂಮಿ ಸರ್ವನಾಶ : ಪೂಜಗೇರಿ ಹಳ್ಳಕ್ಕೂ ಸಂಚಕಾರ.

ಕೃಷಿ ಭೂಮಿಗೆ ಹೆಸರಾಗಿದ್ದ ಪೂಜಗೇರಿ – ಹಳ್ಳದ ಪಕ್ಕ ತೆಂಕಣಕೇರಿ ಗ್ರಾಮಕ್ಕೆ ಸೇರಿರುವ ನೂರಾರು ಎಕರೆ ಭೂಮಿಗಳು ರಿಯಲ್ ಎಸ್ಟೇಟ್ ಮಾಫಿಯಾ ಗಳು ಖರೀದಿ ಮಾಡಿಕೊಂಡು. ಸದರಿ ಕೃಷಿ ಭೂಮಿಯನ್ನು ಭೂ ಪರಿವರ್ತನೆಯನ್ನು ಮಾಡಿಕೊಂಡು ಜನವಸತಿ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ.

ಈ ಕಾರಣದಿಂದಾಗಿ ಕೃಷಿ ಭೂಮಿಗಳು ಈ ಪ್ರದೇಶದಲ್ಲಿ ಸರ್ವನಾಶವಾಗಿದೆ. ಖಾಸಗಿ ಅವರ ಜಮೀನಿಗೆ ಹೋಗಲು ಹಳ್ಳದ ಕಿರು ಸೇತುವೆಯ. ಮುಖ್ಯ ರಸ್ತೆಯಿಂದ ಲಂಬಕೋನಾಕೃತಿಯಲ್ಲಿ ಪೂರ್ವ ದಿಕ್ಕಿಗೆ ರಸ್ತೆ ನಿರ್ಮಾಣ ಮಾಡಲಾಗಿದ್ದು ಸದರಿ ಖಾಸಗಿಯವರ ಅಭಿವೃದ್ಧಿಗೋಸ್ಕರ ರಸ್ತೆಯನ್ನು ಸರ್ಕಾರದ ಅನುದಾನವನ್ನು ಬಳಸಿ ಹಳ್ಳದ ಪಕ್ಕ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೇ ಎಂಬ ಅನುಮಾನ ಕಾಡಿದೆ.

ಸದರ ಹಳ್ಳಕ್ಕೆ ಲಗತ್ತಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರತಿನಿತ್ಯ ಮೋಜು ಮಸ್ತಿ ಮಾಡಲು ಬರುವವರು ಸಂಖ್ಯೆಯ ಜೊತೆ ಬಿಯರ್ ಬಾಟಲ್ ಗಳನ್ನು ತಂದು ಹಳ್ಳದ ಅಕ್ಕ ಪಕ್ಕ. ಬಿಸಾಡಿ ಹೋಗುವರ ಸಂಖ್ಯೆಯು ಅಧಿಕವಾಗಿದೆ ಜೊತೆಗೆ ಸಭೆ ಸಮಾರಂಭಕ್ಕೆ ಬಳಸಲಾಗಿರುವ ಪ್ಲಾಸ್ಟಿಕ್ ಬಾಟಲುಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ವಾಹನದ ಮೂಲಕ ತಂದು ಹಳ್ಳಕ್ಕೆ ಬಿಸಾಡುತ್ತಿರುವ ಕಿಡಿಗೇಡಿಗಳಿಂದ ಪರಿಸರ ನಾಶಕ್ಕೆ ಇನ್ನಷ್ಟು ಕಾರಣವಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಸಭೆ-ಸಮಾರಂಭದ ಪ್ಲಾಸ್ಟಿಕ್ ಬಾಟಲಗಳನ್ನು. ಇನ್ನಿತರ ತ್ಯಾಜ್ಯ ವಸ್ತುಗಳನ್ನು ಗಳನ್ನು ಹಳ್ಳಕ್ಕೆ ಸುರಿಯುತ್ತಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿಕಾಸ ವಾಹಿನಿಯು ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತದೆ.

Continue Reading
Advertisement

Trending